ಬೇಸಿಗೆಯಲ್ಲಿ ಸುಂದರ ತ್ವಚೆಯನ್ನು ಸಂರಕ್ಷಿಸುವುದು ಹೇಗೆ ಎಂಬ ಚಿಂತೆ ಬಹುತೇಕ ಎಲ್ಲರನ್ನು ಕಾಡುತ್ತದೆ ಅದರಲ್ಲಿಯೂ ಬಿರು ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ಬಗೆಯ ಪ್ರಯೋಗವನ್ನು ಮಾಡುತ್ತಾರೆ ಹೀಗಾಗಿ ತುಡುವ ಬಿಸಿನಲ್ಲಿಯೂ ಚರ್ಮದ ಕಾಂತಿ ಕಾಪಾಡಿಕೊಳ್ಳುವ ಟಿಪ್ಸ್ ಇಲ್ಲಿದೆ. ಯಾವಾಗಲೂ ಎಲ್ಲಾ ಸಮಯದಲ್ಲಿಯೂ ತ್ವಚೆಯ ಬಗೆಗೆ ಹೆಚ್ಚಿನ ಲಕ್ಷ ವಹಿಸಬೇಕು ಅದರಲ್ಲಿಯೂ ಬಿಸಿಲಿನಲ್ಲಿ ಸೂರ್ಯನಿಗೆ ಮೈಯೊಡ್ಡಿ ಬಂದ ಮೇಲೆ ತಣ್ಣನೆಯ ನೀರಿನ ಸ್ನಾನ ಮಾಡಿದಲ್ಲಿ ಪ್ರಚಯ ತಾಪಮಾನ ಕುಗ್ಗುವುದರಿಂದ ತ್ವಚೆ ಕಪ್ಪಾಗುವುದನ್ನು ತಪ್ಪಿಸಬಹುದಾಗಿದೆ. ಇನ್ನೂ ಹೆಚ್ಚಾಗಿ ಬಿಸಿಲಿನ ಸಂಪರ್ಕದಲ್ಲಿ ಇರುವವರು ಲೂಫಾ ಅಥವಾ ಬಾಡಿ ಸ್ಕ್ರಬ್ಬರ್ ಬಳಸಿ ತ್ವಚೆಯ ಸತ್ತ ಜೀವಕೋಶಗಳನ್ನು ತೊಳೆದು ಹಾಕಿ. ಮಾಯಿಶ್ಚರೈಸರ್ ನ ತೆಳು ಲೇಪನ ಮಾಡಬೇಕು ಇದರಿಂದ ಸ್ವಲ್ಪಮಟ್ಟಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಬಹುದಾಗಿದೆ.
ಅಲ್ಲದೆ ಸೂರ್ಯನ ನೇರ ಕಿರಣಗಳಿಂದ ರಕ್ಷಿಸಿಕೊಳ್ಳುವುದರಿಂದ ಹೆಚ್ಚಿನ ರಕ್ಷಣೆ ದೂರವಾಗುತ್ತದೆ. ಸೂರ್ಯನ ಬೆಳಕಿಗೆ ಹೋಗುವ 15 ನಿಮಿಷಗಳ ಮುನ್ನ ಸನ್ ಸ್ಕ್ರೀನ್ ಮುಲಾಮು ಹಚ್ಚಿಕೊಂಡರೆ ಅದು ಅತಿ ನೇರಳೆ ಕಿರಣಗಳಿಂದ ರಕ್ಷಿಸಲಿದೆ. ಬಿಸಿಲಿನಿಂದ ರಕ್ಷಿಸುವ ವಿವಿಧ ಬಗೆಯ ಮುಲಾಮುಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಲಭ್ಯವಿದೆ ಟ್ಯಾನಿಂಗ್ ಮೂಸ್ ನಿಂದ ಹಿಡಿದು ಸ್ಪ್ರೇ ಬಾಟಲಿಯವರೆಗೂ ಬಗೆ ಬಗೆಯ ಸೌಂದರ್ಯವರ್ಧಕಗಳು ಇವೆ ಆದರೆ ಅವನು ಬಳಸುವ ಮುಂಚೆ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಸೂಕ್ತ. ಇನ್ನು ವಿಶೇಷವಾಗಿ ಬೇಸಿಗೆಯಲ್ಲಿ ವಿಟಮಿನ್ ಗಳನ್ನು ಹೊಂದಿರುವ ಹಣ್ಣು ಹಂಪಲುಗಳನ್ನು ಹೆಚ್ಚಿನ ರಸವನ್ನು ಸೇವಿಸಿ ದೇಹವನ್ನು ತಂಪಾಗಿಸುವ ಮೂಲಕ ಚರ್ಮದ ಕಾಂತಿಯನ್ನು ಕಾಪಾಡಬಹುದಾಗಿದೆ. ಇನ್ನು ವಿಶೇಷವಾಗಿ ಬೇಸಿಗೆಯಲ್ಲಿ ವಿಟಮಿನ್ ಗಳನ್ನು ಹೊಂದಿರುವ ಹಣ್ಣು ಹಂಪಲುಗಳನ್ನು ಹಣ್ಣಿನ ರಸವನ್ನು ಸೇವಿಸಿ ದೇಹವನ್ನು ತಂಪಾಗಿಸುವ ಮೂಲಕ ಚರ್ಮದ ಕಾಂತಿಯನ್ನು ಕಾಪಾಡಬಹುದಾಗಿದೆ.