ಬೇವಿನ ಗಿಡವು ಹಲವಾರು ಔಷಧಿಗಳಿಂದ ಕೂಡಿದೆ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಆಯುರ್ವೇದದಲ್ಲಿ ಬೇವಿನ ಮರದ ಹಣ್ಣುಗಳು ಎಲೆಗಳು ತೊಗಟೆ ಮತ್ತು ಹೂವುಗಳನ್ನು ಕೂಡ ವಿವಿಧ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಬೇವಿನ ಎಲೆಗಳನ್ನು ಹಳ್ಳಿಗಳಲ್ಲಿ ಬಹಳ ಹಿಂದಿನಿಂದಲೂ ಆಯುರ್ವೇದಿಕ್ ಔಷಧಗಳಲ್ಲಿ ಮನೆ ಮದ್ದು ಆಗಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಬೇವಿನ ಎಲೆಗಳ ಜೊತೆಗೆ ಹೂವುಗಳಿಗೂ ಕೂಡ ಮಹತ್ವದ ಸ್ಥಾನ ನೀಡಲಾಗಿದೆ. ವಾಸ್ತವವಾಗಿ ಬೇವು ಉತ್ಕರ್ಷಕ ನಿರ್ದೇಶಕ ಮತ್ತು ಉರಿಯುತದ ಗುಣಲಕ್ಷಣಗಳನ್ನು ಹೊಂದಿದೆ. ಬೇವಿನ ಹೂವನ್ನು ಪಚಡಿಕೆ ಬಳಸುವುದನ್ನ ನೀವು ನೋಡಿರಬಹುದು. ಬೇವಿನ ಹೂವುಗಳು ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸಲು ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತವೆ.

ಬೇವಿನ ಹೂವು ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿ ಎಂದು ಎಣಿಸಲಾಗಿದೆ. ಹಾಗಾದರೆ ಬೇವಿನ ಹೂವಿನ ಪ್ರಯೋಜನಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ಮಾಹಿತಿ ಇಷ್ಟವಾದರೆ ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಬೇವಿನ ಹೂಗಳನ್ನು ಆಯುರ್ವೇದದಲ್ಲಿ ಪಿತ್ತದ ಶ್ರಮನಗೊಳಿಸಲು ಬಳಸಲಾಗುತ್ತದೆ. ದೇಹದಲ್ಲಿ ಪಿತ್ತ ಹೆಚ್ಚಾದಾಗ ಬೇವಿನ ಹೂವುಗಳನ್ನು ಸೇವಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಬೇವಿನ ಹೂವುಗಳು ದೇಹದ ಉಷ್ಣತೆ ಮತ್ತು ಪಿತ್ತದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ದೇಹದಲ್ಲಿ ಪಿತ್ತ ಹೆಚ್ಚಾದರೆ ಆಯುರ್ವೇದದ ವೈದ್ಯರ ಸಲಹೆ ಮೇರೆಗೆ ಬೇವಿನ ಹೂವಿನ ನೀರನ್ನು ಕುಡಿಯಬಹುದು. ಅಥವಾ ಬೇವಿನ ಹೂಗಳನ್ನು ಜಗಿಯಬಹುದು ಇನ್ನು ಬೇವಿನ ಹೂವುಗಳು ನಂಜು ನಿರೋಧಕ ಗುಣಗಳನ್ನು ಹೊಂದಿವೆ ಹಾಗೂ ಚರ್ಮದ ರೋಗವನ್ನು ಹೋಗಲಾಡಿಸಲು ಸಹಾಯಮಾಡುತ್ತದೆ ಇದಕ್ಕೆ.

Leave a Reply

Your email address will not be published. Required fields are marked *