ಕಿವಿ ಚುಚ್ಚಿಕೊಳ್ಳುವುದು ಭಾರತೀಯ ಸಂಸ್ಕೃತಿಯ ಒಂದು ಸಂಪ್ರದಾಯ ಈ ಸಂಪ್ರದಾಯದ ಶತಮಾನಗಳಿಂದಲೂ ಇದೆ. ಹಿಂದಿನ ಕಾಲದಲ್ಲಿ ಮಹಿಳೆಯರ ಜೊತೆ ಪುರುಷರು ಕೂಡ ಕಿವಿ ಚುಚ್ಚಿಸಿಕೊಳ್ಳುತ್ತಿದ್ದರು ಈಗ ಮತ್ತೆ ಆ ಪದ್ಧತಿ ಬಂದಿದೆ. ಜನರು ಸಂಪ್ರದಾಯ ಪಾಲನೆಗಾಗಿ ಕಿವಿ ಚುಚ್ಚಿಸಿಕೊಳ್ಳುತ್ತಿಲ್ಲ ಫ್ಯಾಷನ್ ಗಾಗಿ ಕಿವಿ ಚುಚ್ಚಿಸಿಕೊಳ್ಳುತ್ತಿದ್ದಾರೆ ಆದರೆ ಹಿಂದೆ ಸಂಪ್ರದಾಯ ಈಗ ಫ್ಯಾಷನ್ ಆಗಿರುವ ಈ ಕಿವಿ ಚರ್ಚಿಸಿಕೊಳ್ಳುವ ಪದ್ಧತಿಯಿಂದ ಆನೇಕಲ್ ಲಾಭವಿದೆ.
ಆಕ್ಯು ಪ್ರೆಶರ್ ತಜ್ಞರ ಪ್ರಕಾರ ಕಿವಿಯ ಕೊನೆಯಲ್ಲಿ ಮಾಸ್ಟರ್ ಸೆನ್ಸೋರಲ್ ಮತ್ತು ಮಾಸ್ಟರ್ ಕೆರೆಬ್ರಲ್ ಹೆಸರಿನ ಎರಡು ಕಿವಿ ಲೋಕಪ್ಸ್ ಇರುತ್ತವೆ. ಆ ಜಾಗಕ್ಕೆ ಚುಚ್ಚಿದಾಗ ಕಿವುಡುತನ ದೂರವಾಗುತ್ತದೆ. ಕಿವಿ ಚುಚ್ಚುವುದರಿಂದ ಕನ್ಯಾ ದೃಷ್ಟಿ ಮತ್ತಷ್ಟು ಸ್ಪಷ್ಟವಾಗುತ್ತದೆ. ಕಿವಿಯ ಹಾಲೆ ಬಳಿ ಕಣ್ಣಿನ ನಾಶಗಳು ಹಾದುಹೋಗಿರುತ್ತವೆ ಆ ಭಾಗದಲ್ಲಿ ಕಿವಿ ಚುಚ್ಚುವುದರಿಂದ ದೃಷ್ಟಿ ಹೊಳಪು ಪಡೆಯುತ್ತದೆ. ಕಿವಿ ಚುಚ್ಚಿಕೊಳ್ಳುವುದರಿಂದ ಒತ್ತಡ ಕೂಡ ಕಡಿಮೆಯಾಗುತ್ತದೆ ಕಿವಿಯ ಕೆಳಭಾಗಕ್ಕೆ ಒತ್ತಡ ಬೀಳುವುದರಿಂದ ಮಾನಸಿಕ ಸಮಸ್ಯೆ ದೂರವಾಗುತ್ತದೆ.
ಕಣ್ಣಿನ ದೃಷ್ಟಿಯನ್ನು ಹರಿತಮಾಡುತ್ತದೆ: ಅಕ್ಯುಪಂಕ್ಚರ್ ಪ್ರಕಾರ, ಕಿವಿಯ ಲೋಬ್ನ ಕೇಂದ್ರ ಬಿಂದುವು ದೃಷ್ಟಿಯ ಕೇಂದ್ರವಾಗಿದೆ. ಆದ್ದರಿಂದ ಈ ಬಿಂದುವಿಗೆ ಒತ್ತಡ ಹಾಕುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ. ಹುಟ್ಟಿದ ಮೊದಲ ಎಂಟು ತಿಂಗಳಲ್ಲಿ ಮಗು ತನ್ನ ಮೆದುಳು ಬೆಳವಣಿಗೆ ಹೊಂದುತ್ತಿರುವಾಗ ಕಿವಿ ಚುಚ್ಚಿಕೊಳ್ಳಬೇಕು ಎಂಬ ನಂಬಿಕೆಯೂ ಇದೆ. ಇದರಿಂದ ಮಗುವಿನ ಮಾನಸಿಕ ಬೆಳವಣಿಗೆ ಮೇಲೆಯೂ ಹೆಚ್ಚಿನ ಪರಿಣಾಮ ಬೀರುತ್ತದೆ.
ಹುಟ್ಟಿದ ಮಗುವಿನ ಜಾತಕವನ್ನು ಮೊದಲು ಮಾಡಿಸುತ್ತಾರೆ. ನಂತರ ಹುಡುಗ/ಹುಡುಗಿಯ ಜಾತಕ ಕುಂಡಲಿ ಮತ್ತು ನಕ್ಷತ್ರಗಳ ಆಧಾರದ ಮೇಲೆ ನಿರ್ದಿಷ್ಟವಾದ ಸಮಯ ಹಾಗೂ ದಿನಾಂಕವನ್ನು ನಿಗದಿಪಡಿಸುವರು. ಅದಾದ ಬಳಿಕ ಪುರೋಹಿತರ ಸಲಹೆಯಂತೆ ಸನಾತನ ಸಂಪ್ರದಾಯಗಳ ಅನುಸಾರ ಕಿವಿಯನ್ನು ಚುಚ್ಚಬೇಕು. ಕಿವಿಯ ಹಾಲೆಗೂ ಮೆದುಳಿಗೂ ಸಂಬಂಧವಿದೆ ಕಿವಿ ಚುಚ್ಚುವುದರಿಂದ ಮೆದುಳು ಚುರುಕಾಗುತ್ತದೆ ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಿವಿ ಚುಚ್ಚಬೇಕು ಇದರಿಂದ ಅವರ ಬುದ್ಧಿ ವೇಗವಾಗಿ ಬೆಳೆಯಲು ಸಹಾಯವಾಗುತ್ತದೆ.
ಕಿವಿಗೆ ಓಲೆ ಧರಿಸುವದರಿಂದ ಸಂತಾನೋತ್ಪತ್ತಿ ಅಂಗಗಳನ್ನು ನಿರ್ವಹಿಸುತ್ತದೆ ಮತ್ತು ಆರೋಗ್ಯಕರ ಋತುಚಕ್ರಕ್ಕೆ ಸಹಾಯ ಮಾಡುತ್ತದೆ:ಕಿವಿಯ ಲೋಬ್ನ ಮಧ್ಯ ಭಾಗದಲ್ಲಿ ಒಂದು ಬಿಂದುವಿದೆ. ಆಯುರ್ವೇದದಲ್ಲಿ ಈ ಅಂಶವನ್ನು ವ್ಯಕ್ತಿಯ ಸಂತಾನೋತ್ಪತ್ತಿ ಅಂಗಗಳ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾದ ಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಗಂಡು ಮಕ್ಕಳಲ್ಲಿ ಈ ಅಂಗಗಳನ್ನು ಸದೃಢವಾಗಿಡಲು ಕಿವಿ ಚುಚ್ಚುತ್ತಾರೆ. ಹೆಣ್ಣು ಮಗುವಿನಲ್ಲಿ ಮಹಿಳೆಯ ಋತುಚಕ್ರವನ್ನು ನಿಯಂತ್ರಿಸಲು ನೆರವಾಗುತ್ತದೆ. ಕಿವಿ ಚುಚ್ಚುವುದರಿಂದ ಜೀರ್ಣಕ್ರಿಯ ಸಮಸ್ಯೆ ದೂರವಾಗುವ ಜೊತೆಗೆ ಪಾಶ್ವ ವಾಯುವಿನ ಅಂತಹ ಅನೇಕ ಗಂಭೀರ ರೋಗಗಳು ಕಡಿಮೆಯಾಗುತ್ತವೆ.