ಬಾದಾಮಿನಲ್ಲಿ ಹೆಚ್ಚು ಪೌಷ್ಟಿಕಾಂಶಗಳಿದ್ದು ಅದನ್ನು ಹಾಗೆ ತಿನ್ನುವುದು ಬಹಳಷ್ಟು ಕಷ್ಟಕಾರಕ. ಹಾಗಾಗಿ ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನವಾಗುತ್ತದೆ ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತೇವೆ ಕೇಳಿ. ಸಾಮಾನ್ಯವಾಗಿ ಬಾದಾಮಿಯನ್ನು ಎಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಸೇವಿಸುವುದರಿಂದ ಜೀರ್ಣಕ್ರಿಯೆ ಸಾರಾಗವಾಗುತ್ತದೆ ಹೊಟ್ಟೆ ನೋವಿನ ಸಮಸ್ಯೆ ಬರುವುದಿಲ್ಲ.
ಅಷ್ಟೇ ಅಲ್ಲದೆ ಅದನ್ನು ನಾವು ಹಾಗೆ ಸೇವಿಸುವುದರಿಂದ ಗ್ಯಾಸ್ಟಿಕ್ ಹಾಗೂ ಮಲಬದ್ಧತೆ ಸಮಸ್ಯೆ ಹೆಚ್ಚಾಗಿರಬಹುದು ಇನ್ನು ಎಂಟು ಗಂಟೆಗಳ ಕಾಲ ಅದನ್ನು ನಾವು ನೆನೆಸಿ ಸೇವಿಸುವುದರಿಂದ ಎಲ್ಲ ವಸ್ತುಗಳನ್ನು ನಾವು ಹಸಿಯಾಗಿ ಹಾಕಿ ಸೇವಿಸುವುದರಿಂದ ಅನೇಕ ಪೌಷ್ಟಿಕಾಂಶಗಳು ಸಿಗುತ್ತದೆ ಅಂತಾನೆ ಹೇಳುತ್ತಾರೆ.
ಬಾದಾಮಿಯನ್ನು ನೀರಿನಲ್ಲಿ ನೆನೆಸಿದಾಗ ಸಿಪ್ಪೆಯನ್ನು ಸಲೀಸಾಗಿ ತೆಗೆಯಬಹುದು, ಆ ಮೂಲಕ ಬಾದಾಮಿಯಲ್ಲಿನ ಪೋಷಕಾಂಶಗಳು ಸುಲಭವಾಗಿ ದೇಹ ಸೇರುತ್ತವೆ. ನೆನಸಿದ ಬಾದಾಮಿ ಮೃದುವಾಗಿರುತ್ತದೆ, ಹಾಗಾಗಿ ಬೇಗ ಜೀರ್ಣವಾಗುತ್ತದೆ. ಬಾದಾಮಿಯ ವಿಷಯಕ್ಕೆ ಬಂದರೆ, ಡ್ರೈ ಮತ್ತು ನೆನೆಸಿದ ಬಾದಾಮಿ ರುಚಿಯಲ್ಲಿ ಮಾತ್ರವಲ್ಲ, ಅವುಗಳ ಪೌಷ್ಠಿಕಾಂಶದಲ್ಲೂ ಭಿನ್ನವಾಗಿರುತ್ತದೆ. ಡ್ರೈ ಬಾದಾಮಿ ಮೇಲಿನ ಕಂದು ಸಿಪ್ಪೆಯು ಟ್ಯಾನಿನ್ ಅನ್ನು ಹೊಂದಿರುತ್ತದೆ, ಇದು ದೇಹದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ.
ನೆನೆಸಿದ ಬಾದಾಮಿಯ ಸಿಪ್ಪೆ ಸುಲಿಯುವುದು ಸುಲಭವಾಗುವುದರಿಂದ, ಬಾದಾಮಿಯ ಎಲ್ಲಾ ಪೋಷಕಾಂಶಗಳನ್ನು ಸಿಪ್ಪೆ ತೆಗೆಯುವ ಮೂಲಕ ನೀವು ಸುಲಭವಾಗಿ ಪಡೆಯಬಹುದು. ಈ ರೀತಿಯಾಗಿ ಸೇವಿಸುವುದರಿಂದ ಇದು ನಮ್ಮ ಜೀವನ ಕಡೆಗೆ ಉತ್ತಮವಾಗಿ ಕೆಲಸ ಮಾಡುತ್ತದೆ. ಪೌಷ್ಟಿಕಾಂಶಗಳು ಹೇರಳವಾಗಿ ನಮ್ಮ ದೇಹಕ್ಕೆ ಲಭಿಸುತ್ತದೆ ಅಷ್ಟೇ ಅಲ್ಲದೆ ಇದು ಬಹಳಷ್ಟು ಮೃದುವಾಗಿದ್ದು ಹಿರಿಯರು ಮೃದಯರು ಮತ್ತು ಚಿಕ್ಕ ವಯಸ್ಸಿನ ಮಕ್ಕಳಿಗೂ ಸಹ ನೀಡಬಹುದು.
ಹಾಗೆ ಒಮ್ಮೆಲೇ ನಾವು ಬಾದಾಮಿಯನ್ನು ನೇರವಾಗಿ ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಅದನ್ನು ನೆನೆಸಿಟ್ಟು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುಡ್ ಬೈ ಹೇಳಿ. ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಹಾಗಾಗಿ ಇನ್ನು ಮುಂದೆ ನಾವು ಬಾದಾಮಿಯನ್ನು ಸೇವನೆ ಮಾಡಬೇಕು ಅಂತ ಖಂಡಿತ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಆಮೇಲೆ ಸೇವಿಸಿ.ಬಾದಾಮಿಗಳು ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲನ್ನು ಹೆಚ್ಚಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಬಾದಾಮಿಯಲ್ಲಿ ಹಲವಾರು ಅಗತ್ಯ ಪೋಷಕಾಂಶಗಳಿವೆ. ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ. ಇವೆಲ್ಲವೂ ಬಾದಾಮಿ ಒಣಗಿದ್ದಾಗ ಲಭಿಸುವುದಕ್ಕಿಂತ ಹೆಚ್ಚಾಗಿ ನೆನೆಸಿಟ್ಟು ಹಸಿಯಾದಾಗ ಲಭಿಸುತ್ತವೆ.