ನೋಡಿ ಇವತ್ತಿನ ದಿವಸ ಮಾನಸಿಕ ಒಂದು ಒತ್ತಡ ಆಗಿರಬಹುದು ಇಲ್ಲ ಅಂದರೆ ನೆಗೆಟಿವ್ ಥಾಟ್ಸ್ ಅಂತ ಹೇಳಿ ಅಂದರೆ ಋಣಾತ್ಮಕ ಚಿಂತನೆಗಳು ನಕರಾತ್ಮಕ ಚಿಂತನೆಗಳು ಇವು ಯಾಕೆ ಬರುತ್ತೆ ಇವುಗಳನ್ನು ಹೇಗೆ ಸರಿ ಮಾಡಿಕೊಳ್ಳಬೇಕು. ಸಾಕಷ್ಟು ಜನರಿಗೆ ಈ ರೀತಿ ಆಗುತ್ತಾ ಇದೆ. ಏನು ಎಂದರೆ ಸುಮ್ಮನೆ ಹೋಗಿ ರೂಮಿನಲ್ಲಿ ಇಟ್ಟುಕೊಳ್ಳುವುದು ಒಬ್ಬರೇ ಕುಳಿತುಕೊಳ್ಳುವುದು ಇನ್ನೊಬ್ಬರಿಗೆ ಮಾತನಾಡಿಸಿಕೊಳ್ಳುವುದಕ್ಕೆ ಅವಕಾಶ ಆಗುವುದಿಲ್ಲ.

ಇವೆಲ್ಲ ಕಾರಣಗಳು ಏನೆಂದರೆ, ಮಕ್ಕಳಿಗೆ ನಾವು ಚಿಕ್ಕನಿಂದಲೇ ಚೇತರಿಸುವುದು. ಏನು ಎಂದರೆ ಕಂಪರಿಸನ್ ಮಾಡುವುದು. ಆ ಮಗು ಚೆನ್ನಾಗಿ ಓದುತಿದೆ ನೀನು ಯಾಕೆ ಓದುತ್ತಾ ಇಲ್ಲ ಅವನು ಪಕ್ಕದ ಮನೆಯಲ್ಲಿ ಹೇಗೆ ಹೋಗುತ್ತಾನೆ ನಿನಗೆ ಯಾಕೆ ಆಗುತ್ತಾ ಇಲ್ಲ. ಈ ರೀತಿ ಮಕ್ಕಳಿಗೆ ನೀವು ಹಿಂಸೆ ಕೊಡುವಂತಹದ್ದು ನಿಮಗೆ ಅದು ಸರಿ ಅನಿಸಬಹುದು ಆದರೆ ಮಕ್ಕಳ ಮನಸ್ಸಿನಲ್ಲಿ ಅದು ಸಕರಾತ್ಮಕ ಚಿಂತನೆಗಳಿಗೆ ಅದು ಅವಕಾಶ ಮಾಡಿಕೊಡುತ್ತದೆ.

ಹೇಗೆ ಅಂತ ಹೇಳಿದರೆ ನೋಡಿ ಈಗ ಒಬ್ಬ ಮಗು ಅವನ ಸಾಮರ್ಥ್ಯ ಎಷ್ಟಿರುತ್ತೆ ಅಷ್ಟು ಓದುತ್ತಾನೆ ಅದಕ್ಕೂ ಮೀರಿ ಆಗುವುದಿಲ್ಲ ಯಾಕೆಂದರೆ ಯಾರು ಯಾರಿಗೆ ಇಷ್ಟಿಷ್ಟು ಇರಬೇಕು ಅಷ್ಟ್ ಇಷ್ಟು ಇರುತ್ತೆ. ಮನಸ್ಸಿನಲ್ಲಿ ಆದರೆ ಇದಕ್ಕೆ ಇನ್ನೂ ನಾವು ತಂದೆ ತಾಯಿಯಾದವರು ಮಕ್ಕಳಿಗೆ ಫೋರ್ಸ್ ಮಾಡಬಾರದು. ಅಂದರೆ ಅಷ್ಟೇ ಮಾರ್ಕ್ಸ್ಗಾಗಿ ಇಷ್ಟು ಮಾರ್ಕ್ಸ್ ತೆಗಿ ಅಂತ ಕಂಪರಿಸನ್ ಮಾಡೋದು ಮಾಡಿದಾಗ ಏನು ಆಗುತ್ತದೆ ನಿಧಾನವಾಗಿ ಮಕ್ಕಳ ಮನಸ್ಸಿನಲ್ಲಿ ನಕರಾತ್ಮಕ ಚಿಂತನೆಗಳು ಮೂಡುತ್ತಾ ಹೋಗುತ್ತವೆ.

ಈಗ ನೋಡಿ ತಂದೆ-ತಾಯಿ ಆದವರು ಮಕ್ಕಳ ಎದುರಿಗೆ ಜಗಳ ಮಾಡುವಂತಹದ್ದು ಹಾಗೆ ಹೀಗೆ ಅಂತ ನೋಡಿ ಕೂಗಿ ಆಡುವಂತಹದ್ದು ಹೊಡಿಯೋದು ಬಡಿಯೋದು ಮಾಡುತ್ತಾ ಇರುತ್ತೀರಿ ಮಕ್ಕಳು ನೋಡಿಬಿಟ್ಟು ಖಿನ್ನತೆಗೆ ಒಳಗಾಗಿಬಿಡುತ್ತಾರೆ. ಇದು ಕೂಡ ಮಕ್ಕಳಿಗೆ ನಕಾರಾತ್ಮಕ ಚಿಂತನೆಗಳು ಮಾಡಿಕೊಡುವುದಕ್ಕೆ ಅವಕಾಶ ಮಾಡಿಕೊಳ್ಳಲಾಗುತ್ತದೆ ಏಕೆಂದರೆ ಮಕ್ಕಳ ಎದುರಿಗೆ ಜಗಳ ಏಕೆಂದರೆ ಮಕ್ಕಳು ಅಬ್ಸರ್ವ್ ಮಾಡುತ್ತಾ ಇರುತ್ತಾರೆ ಏನಾದರೂ ಕಲಿಯಬೇಕು ನೋಡಬೇಕು ಎನ್ನುವ ಛಲ ಒಂದು ತರ ಮಾನಸಿಕವಾಗಿ ಅವರಿಗೆ ಹಂಬಲಿಸುತ್ತ ಇರುತ್ತಾರೆ ಅನಿಸುತ್ತಾ ಇರುತ್ತದೆ.

ಇಂತದೆ ಮನೆಯಲ್ಲಿ ಆಯಿತು ಎಂದರೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ ಮನಸ್ಸಿನಲ್ಲಿ ಇಟ್ಟುಕೊಂಡು ಮುಂದೆ ನನಗೂ ಹೀಗೆ ಆಗಬಹುದು ನಾನು ಮದುವೆಯಾದರೆ ಮುಂದೆ ಹೀಗೆ ಆಗಬಹುದು ನನ್ನ ಹೆಂಡತಿ ಹೀಗೆ ಮಾಡಬಹುದು ನನ್ನ ಗಂಡ ಹೀಗೆ ಮಾಡಬಹುದು ಎನ್ನುವುದು ಮನಸ್ಸಿಗೆ ತೆಗೆದುಕೊಂಡು ಮದುವೆ ಆಗಲಿ ಹಿಂಜರಿಯುತ್ತಾರೆ ಕೊನೆಗೆ ಏಕಾಂಗಿಯಾಗಿ ಇರುವುದಕ್ಕೆ ಅವಕಾಶ ಮಾಡಿಕೊಟ್ಟಂಗೆ ಆಗುತ್ತದೆ.

Leave a Reply

Your email address will not be published. Required fields are marked *