ಪ್ರಕೃತಿಯು ನಮಗೊಂದು ನೀಡುವಂತಹ ಪ್ರತಿಯೊಂದು ಹಣ್ಣು ಹಾಗೂ ತರಕಾರಿಗಳಲ್ಲಿ ಹಲವಾರು ರೋಗಗಳ ಔಷಧಿಯ ಗುಣಗಳು ಇವೆ ಎನ್ನುವುದು ನಮಗೆ ತಿಳಿದಿದೆ. ಆದರೆ ನಾವು ಮಾತ್ರ ಇವುಗಳನ್ನು ಸೇವಿಸಲು ಉದಾಸೀನತೆ ತೋರಿಸುತ್ತೇವೆ ಸಾಮಾನ್ಯವಾಗಿ ಬೇಸಿಗೆಕಾಲದಲ್ಲಿ ಹೆಚ್ಚು ಕಂಡುಬರುವಂತಹ ಬಿಳಿ ನೇರಳೆ ಅಥವಾ ಬಿಳಿ ಜಂಬುವಿನಲ್ಲಿ ಹಲವಾರು ಬಗೆಯ ಔಷಧಿ ಗುಣಗಳು ಇವೆ. ಈ ಹಣ್ಣು ಅಧಿಕ ನೀರಿನಂಶದಿಂದ ಕೂಡಿರುತ್ತದೆ. ಹಾಗಾಗಿ ಇದನ್ನು ಕಚ್ಚಾ ರೂಪದಲ್ಲಿಯೇ ಸವಿಯಬಹುದು.
ಸಿಹಿ ರುಚಿಯನ್ನು ಹೊಂದಿರುವ ಈ ಹಣ್ಣನ್ನು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಇತರ ಹಣ್ಣುಗಳ ಸಂಯೋಜನೆಯಲ್ಲಿ, ಸಲಾಡ್‍ಗಳ ರೂಪದಲ್ಲಿ ಸವಿಯಬಹುದು ಜಂಬು ನೀರಲಿಯಲ್ಲಿ ಹಲವಾರು ಬಣ್ಣಗಳನ್ನು ನಾವು ಕಾಣುತ್ತೇವೆ. ಪ್ರತಿಯೊಂದರಲ್ಲೂ ಅದರದ್ದೇ ಆಗಿರುವಂತಹ ಆರೋಗ್ಯದ ಗುಣಗಳು ಇವೆ. ಇದರಲ್ಲಿ ವಿಟಮಿನ್ ಸಿ ಜೊತೆಗೆ ಆಹಾರದ ನಾರಿನ ಅಂಶವು ಇದೆ ಅದೇ ರೀತಿ ಕ್ಯಾಲ್ಸಿಯಂ ಥೈಮೇಟ್ ಮತ್ತು ಕಬ್ಬಿನಾಂಶವೂ ಇದೆ ಇದರಲ್ಲಿ ಇರುವಂತಹ ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಹಾಗಾದರೆ ಬಿಳಿ ಜಾಮೂನಿನಿಂದ ಯಾವೆಲ್ಲ ಗುಣಗಳು ಪಡೆಯಬಹುದು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.
ನೇರಳೆ ಹಣ್ಣಿನ ರೂಪಾಂತರದ ಹಣ್ಣೇ ಜಂಬು ನೇರಳೆ ಹಣ್ಣು. ಇದನ್ನು ಜಂಬು ನೇರಳೆ, ಬಿಳಿ ನೇರಳೆ ಹಾಗೂ ನೀರಿನ ಸೇಬು ಎಂತಲೂ ಕರೆಯುತ್ತಾರೆ. ಬೇಸಿಗೆಯ ಸಮಯದಲ್ಲಿ ದೊರೆಯುವ ಈ ಹಣ್ಣನ್ನು ಸವಿಯುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಮೃದು ಹಾಗೂ ನೀರಿನಂಶದಿಂದ ಕೂಡಿರುವ ಈ ಹಣ್ಣನ್ನು ಸವಿಯಲು ಹೆಚ್ಚು ಆಹ್ಲಾದವು ದೊರೆಯುವುದು. ಕಚ್ಚಾ ಹಣ್ಣನ್ನು ಸವಿಯುವುದರ ಮೂಲಕ ನಿರ್ಜಲೀಕರಣ ಮತ್ತು ಜೀರ್ಣಕ್ರಿಯೆಯ ಸಮಸ್ಯೆನ್ನು ಸುಲಭವಾಗಿ ನಿವಾರಿಸಬಹುದು.
ಮಧುಮೇಹಿಗಳು ಇದನ್ನು ಸೇವನೆ ಮಾಡಿದ ವೇಳೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ತುಂಬಾ ಸಹಕಾರಿಯಾಗಿದೆ. ಬಿಳಿ ಜಾಮುನಿನ ಬೀಜದಿಂದ ಮಾಡಿರುವಂತಹ ಹುಳಿಯನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಕೆ ಮಾಡಬಹುದು. ಅಷ್ಟೇ ಅಲ್ಲದೆ ಬಿಳಿ ಜಾಮೂನಿನಲ್ಲಿ ಶೇಕಡ 93 ರಷ್ಟು ನಾರಿನ ಅಂಶ ಇರುವ ಕಾರಣ ಇದು ಸಾಮಾನ್ಯವಾಗಿ ಕಾಡುವ ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರ ಮಾಡುತ್ತದೆ. ಅತಿಸಾರ ನಿಯಂತ್ರಣ ಮಾಡಲು ಇದು ಸಹಕಾರಿಯಾಗಿದೆ. ಅಜೀರ್ಣದ ಪ್ರಮುಖ ಸಮಸ್ಯೆಯಾಗಿರುವ ವಾಯುವನ್ನು ಇದು ದೂರ ಮಾಡುವುದು.
ಅಷ್ಟಿಲ್ಲದ ಇದರಲ್ಲಿ ಅತ್ಯಧಿಕ ಪ್ರಮಾಣದ ನೀರಿನ ಅಂಶ ಮತ್ತು ನೈಸರ್ಗಿಕ ತಂಪು ಕಾರಕ ಗುಣಗಳು ಇರುವ ಕಾರಣದಿಂದಾಗಿ ಇದು ದೇಹವನ್ನು ತಂಪಾಗಿ ಇಡಲು ಸಹಕಾರಿ ಮತ್ತು ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ಆಘಾತವನ್ನು ಇದು ಕಡಿಮೆ ಮಾಡುವುದು ಹಾಗೂ ನೈರ್ಜಲಿಕರಣವನ್ನು ಇದು ತಡೆಯುತ್ತದೆ. ಇದು ಬಿಳಿ ಜಾಮುನಿನಲ್ಲಿ ಇರುವಂತಹ ಕೆಲವೊಂದು ಜೈವಿಕಾಂಶಗಳಿಂದಾಗಿ ಇದು ಶಿಲೀಂದ್ರ ಮತ್ತು ಸೂಕ್ಷ್ಮಾಣುವಿನಿಂದ ಬರುವ ಸೋಂಕನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು.