ನೇರಳೆ ಹಣ್ಣು ಎಸ್ಟು ರುಚಿಯೋ ಅಷ್ಟೇ ಆರೋಗ್ಯಕ್ಕೆ ಒಳ್ಳೆಯದು ಕೂಡ, ಕೇವಲ ಹಣ್ಣು ಮಾತ್ರವಲ್ಲ ಅದರಲ್ಲಿರುವ ಬೀಜವು ಸಹ ಔಷದೀಯ ಗುಣಗಳನ್ನು ಒಳಗೊಂಡಿದೆ. ಹಣ್ಣನ್ನು ತಿಂದು ಬೀಜವನ್ನು ಉಗುಳುತ್ತಿರುವ ಅಭ್ಯಾಸವಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ ಬೀಜವನ್ನು ಸಂಗ್ರಹಿಸಿ ಅವುಗಳನ್ನು ಪುಡಿಮಾಡಿ ಶೇಖರಿಸಿಟ್ಟುಕೊಳ್ಳುವ ಅಭ್ಯಾಸ ರುಡಿಯಲ್ಲಿಟ್ಟುಕೊಳ್ಳಿ.

ಸಂಪೂರ್ಣ ಆರೋಗ್ಯವಂತರಾಗಿ ಇರುವುದಕ್ಕಾಗಿ ಪ್ರಕೃತಿಯಲ್ಲಿ ಸಿಗುವ ಆಹಾರ ಪದಾರ್ಥಗಳು, ಹಣ್ಣುಗಳನ್ನು ತೆಗೆದುಕೊಳ್ಳಬೇಕು. ಅಂತಹ ಸಿಜನೀನಲ್ಲಿ ಸಿಗುವಂತಹ ಹಣ್ಣುಗಳಲ್ಲಿ ನೇರಳೆಹಣ್ಣು ಕೂಡ ಒಂದು ಇದನ್ನು ಚಿಕ್ಕ ಮಕ್ಕಳಿಂದ ಇಡಿದು ವಯಸ್ಕರ ವರೆಗೂ ಕೂಡ ನೇರಳೆ ಹಣ್ಣನ್ನು ಇಷ್ಟಪಡುತ್ತಾರೆ. ಈ ಹಣ್ಣು ಕೆಲವೊಂದು ರೋಗಗಳನ್ನು ನಿಯಂತ್ರಣ ಮಾಡುವ ಶಕ್ತಿ ಕೂಡ ಹೊಂದಿದೆ. ನೇರಳೆ ಹಣ್ಣು ಅಷ್ಟೇ ಅಲ್ಲದೆ ಅದರ ಏಲೆ, ಬೀಜ, ಬೇರು ಕೂಡ ದೇಹಕ್ಕೆ ಬೇಕಾದ ಅನೇಕ ರೀತಿಯ ಕೆಲಸಗಳನ್ನು ಮಾಡುತ್ತವೆ ಆಕ್ಸಾಲಿಕ್ ಟಾನ್ಮಿಕ್ ಆಮ್ಲ, ವಿಟಮಿನ್, ಕ್ರೋಮಿಯಂ ನಂತಹುಗಳು ನೇರಳೆ ಹಣ್ಣಿನಲ್ಲಿ ಸಮೃದ್ಧಿಯಾಗಿ ಇರುತ್ತವೆ ನೇರಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೆಯೇ ಇದು ಅನೇಕ ರೀತಿಯ ಔಷದಿ ಗುಣಗಳನ್ನು ಹೊಳಗೊಂಡಿದೆ.

ನೇರಳೆ ಹಣ್ಣು ಮಧುಮೇಹದಿಂದ ಬಳಲುತ್ತಿರುವವರಿಗೆ ಈ ಹಣ್ಣಿನ ಬೀಜ ತುಂಬಾ ಪ್ರಯೋಜನಕಾರಿಯಾಗಿದೆ ಇದು ಬ್ಲಡ್ ಶುಗರ್ ಲೆವೆಲ್ ನ್ನು ಕಂಟ್ರೋಲ್ ಮಾಡುವುದಲ್ಲದೆ ಸಾಧಾರಣವಾಗಿ ಬರುವ ಡಯಾಬಿಟಿಕ್ ಲಕ್ಷಣಗಳು ಮತ್ತು ಯುರಿನೇಷನ್ ನಂತಹ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದರ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿ ನೀರಿನಲ್ಲಿ ಹಾಕಿಕೊಂಡು ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ.

ನೇರಳೆ ಹಣ್ಣು ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆಯನ್ನು ದೂರಮಾಡುವಲ್ಲಿ ಸಹಾಯ ಮಾಡುತ್ತದೆ ಈ ಹಣ್ಣಿನಲ್ಲಿ ಪೊಟಾಶಿಯಂ ಅತ್ಯಧಿಕವಾಗಿ ಇರುತ್ತದೆ 100 ಗ್ರಾಂ ಹಣ್ಣಿನಲ್ಲಿ 55mg ನಸ್ಟು ಪೊಟಾಶಿಯಂ ಇರುತ್ತದೆ. ಅನಾರೋಗ್ಯಕರ ಆಹಾರ ತೆಗೆದುಕೊಳ್ಳುವವರಲ್ಲಿ ಕೆಲವು ಪೌಷ್ಠಿಕಾಂಶಗಳನ್ನು ಕೊರತೆಯಿಂದ ಹೃದಯದ ಖಾಯಿಲೆಗೆ ಕೂಡ ದಾರಿಮಾಡಿ ಕೊಡುತ್ತದೆ ಆದ್ದರಿಂದ ಯಾಂಟಿ ಆಕ್ಸಿಡೆಂಟ್ ಸಮೃದ್ಧಿಯಾಗಿ ಇರುವ ನೇರಳೆ ಹಣ್ಣು ಮತ್ತು ಟೊಮೆಟೊ ನಂತಹ ಹಣ್ಣುಗಳನ್ನು ಆಗಾಗ ತೆಗೆದುಕೊಳ್ಳುವುದರಿಂದ ಹೃದಯ ಆರೋಗ್ಯವಾಗಿ ಇರುವುದಕ್ಕೆ ಸಹಾಯ ಮಾಡುತ್ತದೆ ಈ ಹಣ್ಣಿನಲ್ಲಿ ಯಾಂಟಿ ಆಕ್ಸಿಡೆಂಟ್ ಮೆದುಳಿಗೆ ಮತ್ತು ಹೃದಯಕ್ಕೆ ಔಷಧಿಯಾಗಿ ಕೆಲಸ ಮಾಡುತ್ತವೆ ಹಾಗೆಯೇ ವೈಟ್ ಡಿಸ್ಚಾರ್ಜ್ ನಿವಾರಣೆಗೂ ಕೂಡ ತುಂಬಾ ಚೆನ್ನಾಗಿ ಸಹಾಯ ಮಾಡುತ್ತದೆ.

ನೇರಳೆ ಹಣ್ಣಿನಲ್ಲಿ ಇರುವ ಯಾಂಟಿ ಭ್ಯಾಕ್ಟಿರಿಯಲ್ ಲಕ್ಷಣಗಳಿಂದ ದಂಥ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ ನೇರಳೆ ಹಣ್ಣು ತೆಗೆದುಕೊಳ್ಳುವವರಲ್ಲಿ ಹಲ್ಲು ಮತ್ತು ಒಸಡು ತುಂಬಾ ದೃಢವಾಗಿ ಇರುತ್ತವೆ ನೇರಳೆ ಹಣ್ಣಿನ ಎಲೆಯನ್ನು ಕುಟ್ಟಿ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ನೋವು, ಬಾವು, ಹುಣ್ಣು, ಇಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ಏಲೆಯನ್ನು ಜಗಿದು ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ವಾಸನೆ ಕೂಡ ಕಡಿಮೆಯಾಗುತ್ತದೆ.

ಹೊಟ್ಟೆಗೆ ಸಂಬಂದಿಸಿದ ಹಲವಾರು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೇರಳೆ ಬೀಜಗಳನ್ನು ಬಳಸಬಹುದು ನೇರಳೆ ಬೀಜಗಳಲ್ಲಿರುವ ಫೈಬರ್ ಅಂಶವು ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕರುಳಿನಲ್ಲಿನ ಹುಣ್ಣುಗಳು, ಉರಿಯೂತ, ಮತ್ತು ಹುಣ್ಣುಗಳನ್ನು ಎದುರಿಸಲು ನೇರಳೆ ಬೀಜಗಳನ್ನು ಬಳಸಬಹುದು.

ನೇರಳೆ ಬೀಜ ಸೇವಿಸುವುದರಿಂದ ಮಲಬದ್ಧತೆ, ಅತಿಸಾರ, ಮುಂತಾದ ಹೊಟ್ಟೆಗೆ ಸಂಬಂದಿಸಿದ ಅನೇಕ ಸಮಸ್ಯೆಗಳು ಬರದಂತೆ ತಡೆಗಟ್ಟಬಹುದು ಇದು ಹೊಟ್ಟೆನೋವು, ಹೊಟ್ಟೆಯ ಸೋಂಕು, ಇತ್ಯಾದಿಗಳನ್ನು ಕಡಿಮೆ ಮಾಡುತ್ತದೆ ಹಾಗೆಯೇ ನೇರಳೆ ಬೀಜಗಳು ರಕ್ತವನ್ನು ಶದ್ಧೀಕರಿಸುವುದಲ್ಲದೆ ರಕ್ತಹೀನತೆ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇದು ಕಬ್ಬಿಣದಿಂದ ಸಮೃದ್ಧಿಯಾಗಿದ್ದು ದೇಹ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಒಟ್ಟಿನಲ್ಲಿ ನಿಮಗೆ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿಕೊಂಡು ಆರೋಗ್ಯಕರ ಜೀವನಕ್ಕಾಗಿ ನೇರಳೆ ಬೀಜವನ್ನು ನಿಮ್ಮ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳಿ.

Leave a Reply

Your email address will not be published. Required fields are marked *