ಮನುಷ್ಯನ ಹಲ್ಲಿನ ನಡುವೆ ಅಂತರವಿದ್ದರೆ ಕೆಲವು ಅದೃಷ್ಟವೂ ಹೌದು, ಕೆಲ ದುರಾದೃಷ್ಟವೂ ಹೌದು. ಒಳ್ಳೆಯ ಕೆಡಕು ವಿಚಾರಗಳ ಬಗ್ಗೆ ತಿಳಿಸಿಕೊಡುತ್ತೇನೆ ಈ ಮಾಹಿತಿಯನ್ನು ಓದಿ. ಸಾಮುದ್ರಿಕ ಶಾಸ್ತ್ರದ ಪ್ರಕಾರ ತಮ್ಮ ಹಲ್ಲುಗಳ ನಡುವೆ ಅಂತರವನ್ನು ಹೊಂದಿರುವವರು ಅಂತಹ ಜನರು ತಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ರೀತಿಯಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಸೃಜನಶೀಲರು ಹಲ್ಲುಗಳ ನಡುವೆ ಖಾಲಿ ಜಾಗವಿದ್ದರೆ ಅಂತಹ ಜನರು ತುಂಬಾ ಬುದ್ಧಿವಂತರು.
ಮತ್ತು ಸೃಜನಶೀಲರು ಎಂದು ನಂಬಲಾಗುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಬುದ್ಧಿವಂತಿಕೆಯಿಂದಾಗಿ ಜೀವನದಲ್ಲಿ ಮುಂದುವರೆಯುವಿರಿ. ನೈಜ ಜೀವನದಲ್ಲಿ ಹಲ್ಲುಗಳ ನಡುವಿನ ಅಂತರವನ್ನು ಸೌಂದರ್ಯ ಮತ್ತು ಸಾಮರ್ಥ್ಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಫ್ರೆಂಚ್ ಭಾಷೆಯಲ್ಲಿ ಇದನ್ನು ಡೆಂಜರ್ ಹೊರಗನ್ ಎಂದು ಕರೆಯಲಾಗುತ್ತದೆ. ಅಂದರೆ ಅದೃಷ್ಟ ಎಂದು ಅರ್ಥ ಇತರ ಮನುಷ್ಯನಿಗೆ ಹಲ್ಲುಗಳ ನಡುವೆ ಅಂತರವಿದ್ದರೆ ಅದೃಷ್ಟವಿರುತ್ತದೆ ಅಂತ ಫ್ರೆಂಚ್ ಹಾಗೂ ಇಂಗ್ಲಿಷರು ಕೂಡ ಬರೆದುಕೊಂಡಿದ್ದಾರೆ.
ಸಾಮೂದ್ರಿಕ ಶಾಸ್ತ್ರದ ಪ್ರಕಾರ ಹಲ್ಲುಗಳ ನಡುವೆ ಜಾಗವನ್ನು ಅಂತರವನ್ನು ಹೊಂದಿರುವ ಜನರು ತುಂಬಾ ಮಾತನಾಡುತ್ತಾರೆ. ಮತ್ತು ಜನರು ತಮ್ಮ ಮಾತುಗಳಿಂದ ಬೇಗನೆ ಪ್ರಭಾವಿತರಾಗುತ್ತಾರೆ ಎಂದು ಸಾಮೂಹಿಕ ಶಾಸ್ತ್ರದಲ್ಲಿ ಉಲ್ಲೇಖಗಳು ನಮಗೆ ಸಿಗುತ್ತದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂತಹ ಜನರು ಆಹಾರವನ್ನು ತುಂಬಾ ಇಷ್ಟ ಪಡುತ್ತಾರೆ. ಅವರು ವಿವಿಧ ರೀತಿಯ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಹಲ್ಲುಗಳ ನಡುವೆ ಅಂತರವಿರುವವರಿಗೆ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ.
ಅವರನ್ನು ಉತ್ತಮ ಹಣಕಾಸು ವ್ಯವಸ್ಥಾಪಕರೆಂದೆ ಪರಿಗಣಿಸಲಾಗುತ್ತದೆ. ಅಂದರೆ ಅವರು ಹಣದ ಖಾತೆಯನ್ನು ನಿಭಾಯಿಸುವುದು ಉಂಟು ಖಚಿತ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಗಳು ನಮಗೆ ಸಿಗುತ್ತದೆ. ಬಾಚಿಹಲ್ಲುಗಳ ನಡುವೆ ಅಂತರವಿರುವ ವ್ಯಕ್ತಿಗಳು ಅತಿ ಹೆಚ್ಚಿನ ಧೈರ್ಯ ಹೊಂದಿರುವ ವ್ಯಕ್ತಿಗಳಾಗಿದ್ದು ಆತ್ಮ ವಿಶ್ವಾಸವುಳ್ಳವರಾಗಿರುತ್ತಾರೆ. ಯಾವುದೇ ಕೆಲಸದಲ್ಲಿ ಹೆಚ್ಚಿನ ಅಪಾಯ ಅಥವಾ ಗಂಡಾಂತರವಿದ್ದರೂ ಇವರು ಆ ಸವಾಲನ್ನು ಎದುರಿಸುವ ಸ್ಥೈರ್ಯವನ್ನು ಹೊಂದಿದ್ದು ಒಂದು ಪ್ರಯತ್ನದ ಹೊರತಾಗಿ ಹಿಂದೇಟು ಹಾಕದ ವ್ಯಕ್ತಿಗಳಾಗಿರುತ್ತಾರೆ.
ಯಾವುದೇ ಕೆಲಸದಲ್ಲಿ ಎದುರಾಗುವ ಪರಿಣಾಮದ ಹೊರತಾಗಿಯೂ ಇವರು ಸತತವಾಗಿ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅಲ್ಲದೇ ಈ ಪ್ರಯತ್ನದಲ್ಲಿ ಇವರು ತಮ್ಮ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಈ ಕೆಲಸವನ್ನು ಪೂರೈಸಲು ಯತ್ನಿಸುತ್ತಾರೆ. ಇವರು ಕೈಗೊಳ್ಳುವ ನಿರ್ಧಾರಗಳು ಹೆಚ್ಚಾಗಿ ಅಂತರ್ದೃಷ್ಟಿಯನ್ನೇ ಅವಲಂಬಿಸಿರುತ್ತವೆ ಹಾಗೂ ಹೆಚ್ಚಿನ ಸಮಯ ಈ ನಿರ್ಧಾರಗಳು ಸರಿಯೂ ಆಗಿರುತ್ತವೆ.