ಕೆಲವರು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಂಡು ಕೆಲಸ ಮಾಡುವವರಿಗೆ ಹೆಚ್ಚಾಗಿ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಅನೇಕ ಬಾರಿ, ಬೆಳಿಗ್ಗೆ ಎದ್ದ ನಂತರ, ಕುತ್ತಿಗೆಯಲ್ಲಿ ನೋವು ಅಥವಾ ಬಿಗಿತ ಉಂಟಾಗುತ್ತದೆ. ಎತ್ತರದ ದಿಂಬಿನ ಮೇಲೆ ತಲೆ ಇಟ್ಟಾಗ, ಗಟ್ಟಿಯಾದ ಹಾಸಿಗೆ ಮೇಲೆ ಮಲಗೋದ್ರಿಂದ ಅಥವಾ ರಾತ್ರಿಯಲ್ಲಿ ಮಲಗುವಾಗ ಸರಿಯಾದ ಭಂಗಿಯಲ್ಲಿ ಮಲಗದೇ ಇದ್ದರೆ ಆವಾಗ ಕುತ್ತಿಗೆ ನೋವಾಗುತ್ತೆ.
ಇದರಿಂದ ಕುತ್ತಿಗೆಯನ್ನು ಆ ಕಡೆ ಈ ಕಡೆ ತಿರುಗಲು ಕಷ್ಟವಾಗುತ್ತದೆ ಅಂತಹವರು ಈ ಮನೆಮದ್ದನ್ನು ಬಳಸಿ ನೋವನ್ನು ನಿವಾರಿಸಿಕೊಳ್ಳಿ. ಬೇವಿನ ಹೂವಿರುವ ಸೊಪ್ಪನ್ನು ತಂದು ಜರ್ಜಿ ಪೇಸ್ಟ್ ಮಾಡಿಕೊಳ್ಳಿ ಇದನ್ನು ಬೆಳಿಗ್ಗೆ ಹಾಗೂ ಸಂಜೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ತಿಂದು ಒಂದು ಗ್ಲಾಸ್ ಬಿಸಿನೀರು ಕುಡಿಯಿರಿ. ಇದನ್ನು ಎರಡು ಮೂರು ತಿಂಗಳು ಪ್ರತಿದಿನ ಮಾಡಿ ಹೀಗೆ ಮಾಡುವುದರಿಂದ ಈ ತರಹದ ಕುತ್ತಿಗೆ ನೋವು ಮುಂದೆ ಕಾಣಿಸುವುದಿಲ್ಲ.
ಕೆಲವೊಮ್ಮೆ ನಮ್ಮ ಜೀವನ ಶೈಲಿಯ ಕಾರಣದಿಂದ ನಮ್ಮ ಆರೋಗ್ಯವು ಹದಗೆಡುತ್ತದೆ. ಸ್ಮಾರ್ಟ್ ಫೋನ್ನಲ್ಲಿ ದೀರ್ಘ ಕಾಲ ಸಮಯ ಕಳೆಯುವುದು, ದೀರ್ಘ ಸಮಯಗಳ ಕಾಲ ಕಂಪ್ಯೂಟರ್ ನೋಡುವುದು ಅಥವಾ ಲ್ಯಾಪ್ ಟಾಪ್ ಬಳಕೆ ಮಾಡುವುದರಿಂದ ಕತ್ತು ನೋವಿಗೆ ಒಳಗಾಗುತ್ತದೆ. ಮಲಗುವ ಭಂಗಿಯ ಕಾರಣದಿಂದಲೂ ಕತ್ತು ನೋವಿಗೆ ಒಳಗಾಗುವ ಸಾಧ್ಯತೆಗಳಿರುತ್ತವೆ.
ಒಂದು ಟೀ ಸ್ಪೂನ್ ತುಳಸಿರಸ ಒಂದು ಟೀ ಸ್ಪೂನ್ ಹಸುವಿನ ತುಪ್ಪ ಒಂದು ಟೀ ಸ್ಪೂನ್ ಕಾಳು ಮೆಣಸಿನ ಪುಡಿ ಮೂರನ್ನು ಮಿಕ್ಸ್ ಮಾಡಿಕೊಂಡು ಬೆಳಿಗ್ಗೆ ಹಾಗೂ ಸಂಜೆ ಖಾಲಿ ಹೊಟ್ಟೆಯಲ್ಲಿ ತಿಂದು ಒಂದು ಗ್ಲಾಸ್ ಬಿಸಿನೀರು ಕುಡಿಯಿರಿ ಇದನ್ನು ಎರಡು ಮೂರು ತಿಂಗಳು ಪ್ರತಿದಿನ ಮಾಡಿ ಇದರ ಜೊತೆಗೆ ಮನೆಯಲ್ಲಿ ತಯಾರಿಸಿದ ಒಂದು ಆಯಿಲ್ ನಿಂದ ಕುತ್ತಿಗೆ ಮಸಾಜ್ ಮಾಡಬೇಕು ಹೆಸರು ಇವೆರಡರಲ್ಲಿ ಒಂದನ್ನು 50 ಗ್ರಾಂ ಎಳ್ಳೆಣ್ಣೆ ಜೊತೆ ಬಿಸಿ ಮಾಡಿಕೊಳ್ಳಿ ನಂತರ ಅದನ್ನು ತಣ್ಣಗಾಗಿಸಿಕೊಂಡು ಕುತ್ತಿಗೆ ನೋವು ಇರುವ ಜಾಗದಲ್ಲಿ ಹಚ್ಚಿ ಐದು ಇಪ್ಪತ್ತು ನಿಮಿಷ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನ ಈ ಸ್ನಾನ ಮಾಡಿ ಇದನ್ನು ದಿನದಲ್ಲಿ ಒಂದು ಬಾರಿ ಯಾವ ಸಮಯದಲ್ಲಾದರೂ ಮಾಡಬಹುದು.
ಅಲ್ಲದೆ, ನೀವು ತುಂಬಾ ಗಟ್ಟಿಯಾದ ದಿಂಬುಗಳನ್ನು ಬಳಸುತ್ತಿದ್ದರೆ ಅದು ನಿಮ್ಮ ಕುತ್ತಿಗೆಯ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಅಂತಹ ಸಂದರ್ಭದಲ್ಲಿ, ಮೃದುವಾದ ದಿಂಬುಗಳನ್ನು ಆರಿಸಿಕೊಳ್ಳಿ ಅಥವಾ ಮೂಳೆಚಿಕಿತ್ಸೆಯಿಂದ ಆರಿಸಿಕೊಳ್ಳಿ, ಕುತ್ತಿಗೆ ನೋವಿನಿಂದ ಹೋರಾಡುವ ಜನರಿಗೆ ಅವು ಉತ್ತಮವಾಗಿವೆ. ಬೆನ್ನುಮೂಳೆಯ ಸಮಸ್ಯೆಗಳಿಂದಾಗಿ ಬೆನ್ನು ನೋವನ್ನು ನಿವಾರಿಸುತ್ತದೆ.