ಕೃಷ್ಣನಿಗೆ ಪ್ರಿಯವಾದ ಹೂವು ಎಂದರೆ ಅದು ಪಾರಿಜಾತ. ಅನೇಕ ಪುರಾಣ ಕಥೆಗಳಲ್ಲಿ ಪಾರಿಜಾತ ಹೂವಿನ ಹೆಸರು ಕೇಳಿ ಬರುತ್ತದೆ. ಅದೇ ರೀತಿ ಈ ಪಾರಿಜಾತ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಒಂದು ಪುಟ್ಟ ಹೂವು. ಇಡೀ ಮನೆ ತುಂಬಾ ಪರಿಮಳವನ್ನು ಸೂಸಬಲ್ಲದು ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು. ದೀರ್ಘಕಾಲದ ಜ್ವರ ಸಂಧಿವಾತ ಕೀಲು ನೋವು ಬೆನ್ನು ನೋವಿನ ಚಿಕಿತ್ಸೆಗಾಗಿ ಪಾರಿಜಾತದ ಎಲೆಗಳನ್ನು ಬಳಸಲಾಗುತ್ತದೆ. ಈ ಬಾರಿ ಜೊತೆ ಗಿಡವು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
ಉತ್ಕರ್ಷನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಹೊಂದಿರುವ ಈ ಗಿಡ ಆರೋಗ್ಯಕ್ಕೆ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದರೆ ಅವುಗಳು ಯಾವುವು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ವಿಪರೀತ ಕಾಡುವ ಕೀಲುನೋವು ಶಮನ ಮಾಡುವ ಗುಣ ಪಾರಿಜಾತ ಗಿಡಕ್ಕಿದೆ, ಇದರ ಎಲೆಗಳಿಂದ ಮಾಡುವ ಕಷಾಯ ಸಂಧಿವಾತ ನೋವು ಕಡಿಮೆಯಾಗುವುದು. ಪ್ರತಿದಿನ ಮುಂಜಾನೆ ಪಾರಿಜಾತದ ಎಲೆಗಳ ಕಷಾಯ ಕುಡಿಯುತ್ತಿದ್ದರೆ ಸಂಧಿವಾತ ನಿಯಂತ್ರಣಕ್ಕೆ ಬರುತ್ತದೆ.
ಮಳೆಗಾಲದಲ್ಲಿ ಡೆಂಗ್ಯೂ ಜ್ವರ ಸಾಮಾನ್ಯ. ಇದೊಂದು ಮಹಾಮಾರಿಯೂ ಹೌದು. ಪಾರಿಜಾತ ಎಲೆಗಳ ಕಷಾಯ ಡೆಂಗ್ಯೋ ಜ್ವರಕ್ಕೂ ಉಪಯುಕ್ತ. ಪಾರಿಜಾತದ ಗಿಡ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಿನಂತೆ ಕೆಲಸ ಮಾಡುತ್ತದೆ. ಅದರಲ್ಲೂ ಬೆನ್ನು ನೋವಿನಂತ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ ಆದರೆ ನೆನಪಿಡಿ ವೈದ್ಯರ ಸಲಹೆ ಇಲ್ಲದೆ ಇದನ್ನು ಸೇವನೆ ಮಾಡುವುದು ಅಷ್ಟು ಹಿತವಲ್ಲ. ಪಾರಿಜಾತ ಮೂರರಿಂದ ನಾಲ್ಕು ಎಲೆಗಳನ್ನು ನೀರಿನಲ್ಲಿ ಕುದಿಸಿ ನಂತರ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.
ಇದು ಬೆನ್ನು ನೋವು ಮತ್ತು ದೇಹದ ಯಾವುದಾದರೂ ಭಾಗದಲ್ಲಿ ತವಿದ್ದರೆ ನಿವಾರಣೆ ಮಾಡುತ್ತದೆ. ಇನ್ನು ಇತ್ತೀಚಿಗೆ ಅನೇಕ ಜನರು ಸಂಧಿವಾತದಿಂದ ಬಳಲುತ್ತಿರುವುದನ್ನು ಕಾಣಬಹುದು ಕುಳಿತರೆ ಮಲಗಿದರೆ ಹೇಳಲು ಆಗದೆ ಒದ್ದಾಡುತ್ತಾರೆ. ಇಂತಹವರಿಗೆ ಪಾಲಿಜಾತ ಹೇಳಿ ಮಾಡಿಸಿದ ಮನೆಮದ್ದಾಗಿದೆ. ಪಾರಿಜಾತ ಎಲೆ ಹೂ ತೊಗಟೆಗಳನ್ನು ಸುಮಾರು 5 g ತೆಗೆದುಕೊಂಡು 200 ಗ್ರಾಂ ನೀರಿನಲ್ಲಿ ಕಷಾಯ ಮಾಡಿ. ನೀರನ್ನು ಚೆನ್ನಾಗಿ ಕುದಿಸಿ ಕಾಲು ಭಾಗಕ್ಕೆ ಇಳಿಸಿ. ನಂತರ ಅದನ್ನು ಸೋಸಿ ಕೊಂಡು ಸೇವನೆ ಮಾಡಿ. ಜೀರ್ಣ ಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಪಾರಿಜಾತದ ಬೀಜದ ಪುಡಿಯನ್ನೂ ನೀರಿನೊಂದಿಗೆ ಬೆರೆಸಿ ಸೇವಿಸಿ.
ಸಮಸ್ಯೆಯಿಂದ ಮುಕ್ತರಾಗಿ. ಪಾರಿಜಾತ ಗಿಡದ ಎಲೆಯಿಂದ ಮಾಡಿದ ಕಷಾಯ ಕೆಮ್ಮು ಹಾಗೂ ಜಂತುಹುಳ ನಿವಾರಣೆಗೆ ಬಳಸುತ್ತಾರೆ. ಮಕ್ಕಳಿಗೆ ಇದರ ಎಲೆಯ ಔಷಧ ಮಾಡಿ ನೀಡಲಾಗುವುದು. ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುವಲ್ಲಿಯೂ ಪಾರಿಜಾತ ಎಲೆಯ ಕಷಾಯ ಪರಿಣಾಮಕಾರಿಯಾಗಿದೆ. ಪಾರಿಜಾತ ಬೀಜವನನ್ನು ಸಂಗ್ರಹಿಸಿ ಪುಡಿ ಮಾಡಿ ಇದನ್ನು ಔಷಧಿಯಾಗಿ ಕಾಮಲೆ ರೋಗ ನಿವಾರಣೆಗೆ ಕೂಡ ಬಳಸಲಾಗುವುದು.