ನಮಸ್ಕಾರ ಸ್ನೇಹಿತರೆ ಮನೆಯಿಂದ ಹೊರಗೆ ಹೋಗುವಾಗ ನೀರು ಯಾವ ದಿಕ್ಕಿನಲ್ಲಿ ಹರಿದು ಹೋದರೆ ಒಳ್ಳೆಯದು ಹಾಗೆ ಯಾವ ದಿಕ್ಕಿನಲ್ಲಿ ನೀರು ಹರಿದು ಹೋಗಬಾರದು ಇದರ ಜೊತೆಗೆ ಮನೆಯ ಮುಖ್ಯವಾಗಿಲು ಕಿಟಕಿಗಳು ಯಾವ ಒಂದು ಮರದಿಂದ ಮಾಡಿಸಿಕೊಂಡರೆ ವಾಸ್ತುಶಾಸ್ತ್ರದ ಪ್ರಕಾರ ಒಳ್ಳೆಯದು. ಮುಖ್ಯವಾಗಿ ಮನೆಯ ನ್ಯೂ ಮಾಡುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ನಿರ್ಧರಿಸಬೇಕು ಎಂಬುದನ್ನು ಮುಖ್ಯವಾದ ಅಂಶಗಳ ಬಗ್ಗೆ ಅಥವಾ ನಿಯಮಗಳ ಬಗ್ಗೆ ನಾವು ಇಂದು ನಿಮಗೆ ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ನಿರ್ಮಾಣ ಮಾಡಿಕೊಂಡರು ಕೂಡ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅದು ಏನೆಂದರೆ ಮನೆಯಲ್ಲಿ ವಾಸ್ತು ಪ್ರಕಾರವಾಗಿ ನಿರ್ಮಾಣ ಮಾಡಿದರು ಕೂಡ ಮನೆಯಿಂದ ನಿರು, ಹೊರಗೆ ಹೋಗುವಾಗ ಅದು ಕೂಡ ಸರಿಯಾಗಿ ವಾಸ್ತು ಪ್ರಕಾರ ಮನೆಯಿಂದ ಹೊರ ಹೋದರೆ ಇದರಿಂದ ಮನೆಯವರಿಗೆ ಮತ್ತು ಕುಟುಂಬ ಸದಸ್ಯರಿಗೆ ಶುಭವಾಗುತ್ತದೆ.
ಮನೆಯ ತ್ಯಾಜ್ಯ ನೀರು ಆಗೇಯ ದಿಕ್ಕಿನಿಂದ ಹೋದ್ರೆ ಅದು ಅಶುಭ, ಪುತ್ರ ಸಂತಾನಕ್ಕೆ ಇದು ಅಶುಭವೆಂದು ಪರಿಗಣಿಸಲಾಗಿದೆ.ದಕ್ಷಿಣ ದಿಕ್ಕಿನಿಂದ ಕೊಳಕು ನೀರು ಮನೆಯಿಂದ ಹೊರಗೆ ಹೋಗ್ತಾ ಇದ್ದರೆ ಆ ಮನೆಯ ಸ್ತ್ರೀಯರಿಗೆ ನಷ್ಟ.ತ್ಯಾಜ್ಯ ನೀರು ವಾಯುವ್ಯ ದಿಕ್ಕಿನಿಂದ ಹೊರಗೆ ಹೋಗ್ತಾ ಇದ್ದರೆ ಶತ್ರುಗಳು ಹೆಚ್ಚಾಗ್ತಾರೆ. ಶತ್ರುಗಳ ಭಯ ಕಾಡುತ್ತದೆ.ಉತ್ತರ ದಿಕ್ಕಿನಿಂದ ಕೊಳಕು ನೀರು ಹೊರಗೆ ಹೋಗ್ತಾ ಇದ್ದಲ್ಲಿ ಆ ಮನೆಯ ಗೌರವ ಹೆಚ್ಚಾಗುತ್ತದೆ. ಶುಭ ಫಲಗಳು ದೊರಕುತ್ತವೆ.
ಇನ್ನು ಮನೆಯಿಂದ ಹೊರಗೆ ಹೋಗುವ ನೀರು ಯಾವ ದಿಕ್ಕಿನಿಂದ ಹೋದರೆ ಒಳ್ಳೆಯದು ಇರುವುದಾದರೆ ಈಶಾನ್ಯ ದಿಕ್ಕಿನಿಂದ ಉತ್ತರ ದಿಕ್ಕಿಗೆ ನೀರು ಹರಿದು ಹೋಗಬೇಕು ಅಥವಾ ಈಶಾನ್ಯ ದಿಕ್ಕಿನಿಂದ ಪೂರ್ವ ದಿಕ್ಕಿನ ಕಡೆಗೆ ಮನೆಯಿಂದ ಹೊರಗೆ ಹೋಗುವ ನೀರು, ಹರಿದು ಹೋಗಬೇಕು. ಈ ರೀತಿ ಇದ್ದರೆ ಬಹಳ ಒಳ್ಳೆಯದು ಆರೋಗ್ಯ ದೃಷ್ಟಿಯಿಂದ ಸಂಪೂರ್ಣ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ.
ಇನ್ನು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೋಗುವ ನೀರು, ನೈರುತ್ಯ ದಿಕ್ಕಿಗೆ ಹರಿದು ಹೋಗಬಾರದು. ಇದರಿಂದ ವಾಸ್ತುದೋಷವೂ ಉಂಟಾಗುತ್ತದೆ ಅನಾರೋಗ್ಯ ಸಮಸ್ಯೆಗಳು ಅಧಿಕ ಖರ್ಚು, ಈ ರೀತಿಯಾದ ಸಮಸ್ಯೆಗಳು ಎದುರಾಗುತ್ತವೆ. ತ್ಯಾಜ್ಯ ನೀರು ಈಶಾನ್ಯ ಭಾಗದಿಂದ ಹೋಗುವಂತಿದ್ದರೆ ವೃದ್ಧಿಯಾಗುತ್ತದೆ. ಹೊರಗೆ ಸಂತಾನ ಮನೆಯಲ್ಲಿ ವೃದ್ಧಿಯಾಗುತ್ತದೆ.