ನಮ್ಮ ಜಗತ್ತಿನ ಅತಿ ದೊಡ್ಡ ಸಂಶೋಧನೆಯೆಂದರೆ ಒಬ್ಬ ವ್ಯಕ್ತಿಯ ರಕ್ತವನ್ನು ಇನ್ನೊಬ್ಬ ವ್ಯಕ್ತಿಯ ಜೀವವನ್ನು ಉಳಿಸಲು ಉಪಯೋಗಿಸಲಾಗುತ್ತದೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವನವನ್ನು ಉಳಿಸಲು ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲ ಮತ್ತು ಅಪೇಕ್ಷೆ ಇಲ್ಲದೆ ಕೊಡುವುದಕ್ಕೆ ರಕ್ತದಾನ ಎನ್ನುತ್ತಾರೆ. ಮತ್ತು ರಕ್ತದಾನದ ಬಗ್ಗೆ ಎಷ್ಟು ಜನರಲ್ಲಿ ಗೊಂದಲ ಆತಂಕ ಈಗಲೂ ಇದೆ ರಕ್ತಗಳ ಅವಶ್ಯಕತೆ ಇದ್ದಾಗ ಈಗಲೂ ಸಿಗದಕ್ಕೆ ಇದೇ ಕಾರಣ.

ಒಬ್ಬ ಆರೋಗ್ಯವಂತ ವ್ಯಕ್ತಿಯು ದೇಹದಲ್ಲಿ ಸರಾಸರಿ ಐದು ಪಾಯಿಂಟ್ ಇದರಿಂದ ಆರು ಪಾಯಿಂಟ್ ಅಷ್ಟು ರಕ್ತ ಇರುತ್ತದೆ ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ 350 ಎಂಎಲ್ ಅಷ್ಟು ರಕ್ತದಾನಿ ಯಿಂದ ಸ್ವೀಕರಿಸುವುದರಿಂದ ಯಾವುದೇ ಅಪಾಯವಾಗುವುದಿಲ್ಲ. ರಕ್ತದಾನ ಮಾಡುವುದರಿಂದ ನಿಮ್ಮ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.

ಮಾನಸಿಕ ಆರೋಗ್ಯ ಪ್ರತಿಷ್ಠಾನದ ವರದಿಯ ಪ್ರಕಾರ, ಇತರರಿಗೆ ಸಹಾಯ ಮಾಡುವುದರಿಂದ ನಮ್ಮ ಒತ್ತಡ ಕಡಿಮೆ ಆಗುತ್ತದೆ, ಭಾವನಾತ್ಮಕ ಆರೋಗ್ಯ ಸುಧಾರಣೆಯಾಗುತ್ತದೆ, ನಕಾರಾತ್ಮಕ ಭಾವನೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ, ಪ್ರತ್ಯೇಕತೆಯನ್ನು ಕಡಿಮೆ ಮಾಡುತ್ತದೆ. ಈ ರಕ್ತದಾನವನ್ನು ಮಾಡುವುದರಿಂದ ಸಾಕಷ್ಟು ಅನುಕೂಲತೆಗಳು ಇದೆ ಹೃದಯ ಕಾದದಂತಹ ದೊಡ್ಡ ಕಾಯಿಲೆಗಳು ಬರುವ ಪ್ರಮಾಣ ಕಡಿಮೆಯಾಗುತ್ತದೆ.

ದೇಹದಲ್ಲಿ ಕೆಟ್ಟ ರಕ್ತಗಳ ಬೆಳವಣಿಗೆ ಯಾವುದೇ ಕಾರಣಗಳಿಗೂ ಆಗುವುದಿಲ್ಲ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳು ಬರುವುದಿಲ್ಲ. ದೇಹದ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮಾನಸಿಕ ಒತ್ತಡ ಕೋಪ ಮತ್ತು ಇತರೆ ಯಾವುದೇ ಸಮಸ್ಯೆಗಳು ನಿಮಗೆ ಬರುವುದಿಲ್ಲ ಅಲರ್ಜಿ ಹಾಗೂ ಮದುವೆಗಳು ಆಗುವುದಿಲ್ಲ ನಿಮ್ಮ ದೇಹದಲ್ಲಿರುವ ನಕರಾತ್ಮಕ ಭಾವನೆಗಳು ಅಂದರೆ ನೆಗೆಟಿವ್ ಫೀಲಿಂಗ್ಸ್ ಏನಿದೆ ನೋಡಿ ಅದನ್ನು ತೆಗೆದು ಹಾಕಲು ಇದು ಸಹಾಯ ಮಾಡುತ್ತದೆ.

ಇನ್ನು ಈ ರಕ್ತದಾನವನ್ನು ಯಾರು ಮಾಡಬಹುದು ಎಂದು ನೋಡುವುದಾದರೆ ಇದರಲ್ಲಿ ಹೆಣ್ಣು ಆಗಲಿ ಗಂಡಾಗಲಿ ಯಾವುದೇ ಭೇದಭಾವವಿಲ್ಲ 18 ರಿಂದ 60 ವರ್ಷ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತ ದಾನ ಮಾಡುವವರು ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ತರಬೇತಿ ಪಡೆದ ಸಿಬ್ಬಂದಿ ಈ ತಪಾಸಣೆ ಮಾಡುತ್ತಾರೆ.ರಕ್ತದಾನ ಮಾಡಿದ ಬಳಿಕ ದೇಹದಲ್ಲಿ ರಕ್ತದ ಕೊರತೆಯನ್ನು ಪರಿಗಣಿಸುವ ದೇಹ ತಕ್ಷಣವೇ ಹೊಸ ರಕ್ತದ ಉತ್ಪಾದನೆಗೆ ಕ್ರಮಗಳನ್ನು ಕೈಗೊಳ್ಳುತ್ತದೆ.

ಇದುವರೆಗೆ ನಿಧಾನವಾಗಿ ನಡೆಯುತ್ತಿದ್ದ ಹೊಸ ರಕ್ತದ ಉತ್ಪಾದನೆಗೆ ಈಗ ಚುರುಕು ಬರುತ್ತದೆ. ರಕ್ತ ಉತ್ಪಾದನೆಯಾಗುವುದು ನಮ್ಮ ಅಸ್ಥಿಮಜ್ಜೆಗಳಲ್ಲಿ. ರಕ್ತದಾನದ ಬಳಿಕ ಈ ಅಂಗಗಳಿಗೂ ಹೆಚ್ಚಿನ ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆ ಎದುರಾಗುವ ಮೂಲಕ ಪೂರ್ಣ ಕ್ಷಮತೆಯಲ್ಲಿ ಕೆಂಪು ರಕ್ತಕಣಗಳನ್ನು ಉತ್ಪಾದಿಸತೊಡಗುತ್ತವೆ.ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ.ಹೆಚ್ಚಿನ ಕ್ಯಲೋರಿಯನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ದೇಹದ ತೂಕವನ್ನು ಸಮತೋಲನದಲ್ಲಿ ಇಡಲು ಸಹಕರಿಸುತ್ತದೆ.

Leave a Reply

Your email address will not be published. Required fields are marked *