ಗೆಳೆಯರೇ ಮಳೆಗಾಲ ಬಂದರೆ ಸಾಕು ಕರಾವಳಿ ಮತ್ತು ಮಳೆನಾಡಿನ ಮಂದಿಗೆ ಸಮಾರಂಭ. ಅವರಿಗೆ ಕಿರಿಕಿರಿ ಅನಿಸಿದರೂ ಕೂಡ ಅವರ ಸಂಭ್ರಮಕ್ಕೆ ಕಾರಣ ಮಳೆಗಾಲದಲ್ಲಿ ಮಾತ್ರ ನಿಸರ್ಗದಲ್ಲಿ ಸಿಗುವ ಕೆಲವೊಂದು ವಸ್ತುಗಳನ್ನು ಸವಿಯುವುದು ಅನ್ನುವುದು. ಮಳೆಗಾಲದಲ್ಲಿ ಮಾತ್ರ ಸಿಗುವ ಹಣವೇ ಮರಕೆಸು ಕಳಲೆ ಇದರ ರುಚಿ ಸವಿದವನೇ ಬಲ್ಲ. ಕರಾವಳಿ ಹಾಗೂ ಮಳೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಸಿಗುವ ಅನೇಕ ಆಹಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು ಹಾಗೂ ಅತ್ಯಂತ ಆರೋಗ್ಯಕರವಾದದ್ದು ಕಳಲೆ. ಗೆಳೆಯರೇ ಕಳಲೆ ಎಂದರೆ ಬಹುತೇಕರಿಗೆ ಗೊತ್ತಿರಲ್ಲ ಹಾಗಾಗಿ ಮೊದಲಿಗೆ ಕಳಲೆ ಎಂದರೆ ಏನು ಎಂಬುದನ್ನು ನಾನು ನಿಮಗೆ ಹೇಳುತ್ತೇವೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಬಿದಿರಿಗೆ ಅತ್ಯಂತ ಪ್ರಮುಖವಾದ ಕಾಲ ಯಾಕೆಂದರೆ ಮಳೆಗಾಲದ ಆರಂಭ ಬಿದಿರಿನ ಅಂಶ ಸಮಯ. ಹಾಗಾಗಿ ಈ ಸಮಯದಲ್ಲಿ ಬಿಸಿಲಿನ ಬುಡದಲ್ಲಿ ಮಳಕೆಯ ರೀತಿಯಲ್ಲಿ ಗಿಡ ಹುಟ್ಟಿಕೊಳ್ಳುತ್ತದೆ ಇದನ್ನು ಕಳಲೆ ಎಂದು ಕರೆಯುತ್ತಾರೆ. ಸ್ವಲ್ಪ ಎತ್ತರಕ್ಕೆ ಹೋದಾಗ ಇದನ್ನು ಕತ್ತರಿಸಿ ಅದರ ಮೇಲಿನ ಸಿಪ್ಪೆಗಳನ್ನು ತೆಗೆದು ಉಳಿದ ಭಾಗದ ತಿರುಳನ್ನು ಸಣ್ಣದಾಗಿ ಕತ್ತರಿಸಿ ಮೂರು ದಿನಗಳ ಕಾಲ ನೀರಿನಲ್ಲಿ ಹಾಕಿ ಪ್ರತಿದಿನ ನೀರು ಬದಲಾಯಿಸುತ್ತಾ ನಾಲ್ಕನೇ ದಿನ ಇದನ್ನು ಆಹಾರ ಖಾದ್ಯಗಳಿಗೆ ಬಳಸುತ್ತಾರೆ.
ಗೆಳೆಯರೇ ಈ ಕಳಲೆಯನ್ನು ಬಿದಿರಿನ ಚಿಗುರು ಎಂದು ಕರೆಯುತ್ತಾರೆ. ಈ ಭಾಗದಲ್ಲಿ ಕಣಿಲೆ ಎನ್ನುತ್ತಾರೆ ಇನ್ನು ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿರುವ ಕಳಲೆಯನ್ನು ಬಳಕೆ ಮಾಡುವಾಗ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಇದರಲ್ಲಿ ಸೈನೋಜನಿಕ್ ಗ್ಲೈಕೋಸೈಡ್ ಅನ್ನುವ ವಿಷರೂಪದ ನೈಸರ್ಗಿಕ ಜೀವನ ಇರುವುದರಿಂದ ಈ ಮೂರು ದಿನ ನೀರು ಬದಲಾಯಿಸಿ ಚೆನ್ನಾಗಿ ಕುದಿಸಿ ಬಳಕೆ ಮಾಡಬೇಕು.
ಹಾಗೆ ಮಾಡಿಕೊಡುವುದರಿಂದ ನಮ್ಮ ದೇಹದಲ್ಲಿ ಸರಿ ಸಾಮಾನ್ಯವಾಗಿ ಉಂಟಾಗುವ ಹಲವಾರು ರೋಗಗಳನ್ನು ದೂರ ಮಾಡಬಹುದು. ಬಿದಿರಿನ ಚಿಗುರಲ್ಲಿ ಸಾಕಷ್ಟು ಪ್ರೋಟೀನ್, ಕಾರ್ಬೋಹೈಡ್ರೇಟ್, ನಾರಿನಂಶ, ಖನಿಜಗಳು ಇರುತ್ತವೆ. ಇದರಲ್ಲಿ ಕೊಬ್ಬು ಮತ್ತು ಸಕ್ಕರೆಯ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಇದು ಅತ್ಯುತ್ತಮ ಆಹಾರ ಪದಾರ್ಥಗಳಾಗುವುದು.
ಹೌದು ವೈದ್ಯರ ಪ್ರಕಾರ ಈ ಕಳಲೆ ಅತಿ ಹೆಚ್ಚು ಮಧುಮೇಹ ರೋಗಗಳಿಗೆ ಬರೆದುಕೊಡುತ್ತಾರೆ. ಕಳಲೆಯಲ್ಲಿ ನ್ಯೂಟ್ರಾಸ್ಯುಟಿಕಲ್ ಎಂದು ಕರೆಯಲ್ಪಡುವ ದೊಡ್ಡ ನಾರಿನಂಶ ಅಧಿಕವಾಗಿರುತ್ತದೆ. ಇದು ಕರುಳಿನ ಸಮಸ್ಯೆ ನಿಭಾಯಿಸಲು ಸಹಾಯ ಮಾಡುವುದು.
ನಮ್ಮ ದೇಹದಲ್ಲಿ ಅತಿಯಾದ ಕೆಟ್ಟ ಕೊಲೆಸ್ಟ್ರಾಲ್ ಇರುತ್ತದೆ ಹಾಗಾಗಿ ಕಳಲೆ ಈ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುವುದರ ಜೊತೆಗೆ ರಕ್ತದ ಸ್ಥಿತಿ ಸಮತೋಲನದಲ್ಲಿ ಇರುವಂತೆ ಮಾಡುವುದು. ಹಾಗೆ ರಕ್ತ ಪರಿಶುದ್ಧವನ್ನು ಮಾಡುತ್ತದೆ ಮತ್ತೆ ಹೃದಯಕ್ಕೆ ಸಂಬಂಧಿಸಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುವುದು. ಹಾಗಾಗಿ ಸುಮಾರು ಕಡೆ ಹೋದಾಗ ವೈದ್ಯರು ಇದನ್ನು ಸೇವಿಸಲು ಹೆಚ್ಚಾಗಿ ಆದ್ಯತೆಯನ್ನು ಕೊಡುತ್ತಾರೆ.