ನಿಂಬೇಲಿಯ ಪ್ರಯೋಜನಗಳ ಬಗ್ಗೆ ಸಾಕಷ್ಟು ಕೇಳಿರಬಹುದು. ಆದರೆ ಇದರ ಎಲೆಗಳು ಸಹ ಯಾವುದೇ ಔಷಧಿಗಳಿಗಿಂತ ಕಡಿಮೆ ಇಲ್ಲ ಎಂಬುದು ನಿಮಗೆ ತಿಳಿದಿದೆಯೇ. ಅನೇಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ನಿಂಬೆ ಎಲೆಗಳನ್ನು ಬಳಸಬಹುದು. ಆದರೆ ಅನೇಕ ಜನರು ನಿಂಬೆ ಎಲೆಗಳನ್ನು ಕಹಿ ಮತ್ತು ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸುತ್ತಾರೆ ಆದರೆ. ಈ ಎಲೆಗಳನ್ನು ತಿನ್ನುವುದರಿಂದ ಅಥವಾ ಅದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಅನೇಕ ಪ್ರಯೋಜನಗಳು ಇವೆ. ಹಾಗಾದರೆ ಅವುಗಳು ಯಾವುವು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ.

ನಿಂಬೆ ಎಲೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಹಾಗಂತ ನೀವು ಅದನ್ನು ಜಗಿಯುವುದನ್ನು ತಪ್ಪಿಸಬೇಕು ನೀವು ಅದನ್ನು ಜ್ಯೂಸ್ ಗ್ರೂಪಲ್ಲಿ ಸೇವಿಸಬಹುದು ಅಥವಾ ಚಹಾದಲ್ಲಿ ಮಿಕ್ಸ್ ಮಾಡಬಹುದು. ನಿಂಬೆ ಎಲೆಗಳು ಆಂಟಿವೈರಲ್ ಆಂಟಿ ಆಕ್ಸಿಡೆಂಟ್ ಅಲ್ಕೋ ಲೈಟ್ ಗಳು ಫಿನಾಲಿಟ್ ಅಂಶಗಳನ್ನು ಒಳಗೊಂಡಿದೆ ಇದರೊಂದಿಗೆ ಕಾರ್ಬೋಹೈಡ್ರೇಟ್ ಗಳು ಪ್ರೋಟೀನ್ಗಳು ಮತ್ತು ಕೊಬ್ಬಿನಂತಹ ಪೋಷಕಾಂಶಗಳು ಸಹ ಇದರಲ್ಲಿ ಇವೆ. ನಿಂಬೆ ಎಲೆಗಳು ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುತ್ತಾರೆ ನಿಂಬೆ ಎಲೆಗಳಿಂದ ರಸಗು ಪೆರಿ ಎಂಬ ಕರಗಬಲ್ಲ ರಸವನ್ನು ಹೊಂದಿರುತ್ತದೆ.

ಇದು ತೂಕ ನಷ್ಟದಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ತೂಕ ಇಳಿಸಬೇಕು ಎಂಬುವವರು ನಿಂಬೆ ಎಲೆಯನ್ನು ಕುದಿಸಿ ಮತ್ತು ಆ ನೀರನ್ನು ಕುಡಿಯಿರಿ ಇನ್ನು ಸಂಶೋಧನೆಯ ಪ್ರಕಾರ ನಿಮಗೆ ರಾತ್ರಿ ನಿದ್ದೆ ಬರದಿದ್ದರೆ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಿಂಬೆ ಎಲೆಗಳು ನಿಮಗೆ ಉತ್ತಮ ಎಲೆಗಳಾಗಿ ಕೆಲಸ ಮಾಡುತ್ತವೆ. ಇನ್ನ ನಿಂಬೆಹಣ್ಣಿನ ಸಿಪ್ಪೆ ನಿಂಬೆ ಹಣ್ಣಿಗೆ ಹೋಲಿಸಿದರೆ ನಿಂಬೆಹಣ್ಣಿನ ಸಿಪ್ಪೆಯಲ್ಲಿ ಸುಮಾರು ಐದರಿಂದ ಹತ್ತು ಪಟ್ಟು ಹೆಚ್ಚು ವಿಟಮಿನ್ ಅಂಶಗಳು ಸಿಗುತ್ತವೆ.

ಅದಕ್ಕಾಗಿ ನಿಂಬೆಹಣ್ಣಿನ ಸಿಪ್ಪೆ ಹಲವಾರು ರೋಗಗಳಿಗೆ ಮನೆಮದ್ದಾಗಿದೆ. ನಿಂಬೆಹಣ್ಣು ಕೇವಲ ನಿಮ್ಮ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ಬಹಳಷ್ಟು ಸೋಂಕುಗಳಿಂದ ನಿಮಗೆ ರಕ್ಷಣೆ ನೀಡುತ್ತದೆ.ಆಂಟಿ ಆಕ್ಸಿಡೆಂಟ್ ಅಂಶಗಳು ಇದರಲ್ಲಿ ಅಪಾರ ಪ್ರಮಾಣದಲ್ಲಿ ಕಂಡು ಬರುವುದರಿಂದ ನಿಂಬೆಹಣ್ಣಿನ ಸಿಪ್ಪೆಯಲ್ಲಿ ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೊರಡುವಂತಹ ಗುಣವಿದೆ ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕೆಲಸ ಇದರಿಂದ ಆಗುತ್ತದೆ. ನಿಂಬೆ ಸಿಪ್ಪೆ ಎಷ್ಟು ಪ್ರಾಮುಖ್ಯತೆಯನ್ನು ಏಕೆ ಹೊಂದಿದೆ ಗೊತ್ತಾ.

ನಿಂಬೆಹಣ್ಣಿನ ಸಿಪ್ಪೆಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಇರುತ್ತವೆ. ಇವು ತುಂಬಾ ಶಕ್ತಿಯುತವಾಗಿ ಕೆಲಸ ಮಾಡುವುದರಿಂದ ಬಾಯಿಯಲ್ಲಿ ಸೋಂಕುಕಾರಕ ರೋಗಾಣುಗಳು ಇಲ್ಲದಂತೆ ಮಾಡುವ ಅದ್ಭುತ ಗುಣಲಕ್ಷಣಗಳು ನಿಂಬೆಹಣ್ಣಿನ ಸಿಪ್ಪೆಯಲ್ಲಿ ಸಿಗುತ್ತದೆ ಎಂದು ಹೇಳಬಹುದು. ದೇಹದಲ್ಲಿ ಯಾವುದೇ ಕಾರಣಕ್ಕೂ ಕ್ಯಾನ್ಸರ್ಕಾರಕ ಜೀವಕೋಶಗಳು ಅಭಿವೃದ್ಧಿ ಆಗದಂತೆ ತಡೆಯುವ ಪ್ರಭಾವಗಳು ನಿಂಬೆಹಣ್ಣಿನ ಸಿಪ್ಪೆಯಲ್ಲಿ ಸಿಗುತ್ತವೆ.

Leave a Reply

Your email address will not be published. Required fields are marked *