ಸಾಮಾನ್ಯವಾಗಿ ಕರಬೇವು ಎಂದರೆ ನಮ್ಮ ತೆಲೆಗೆ ಬರುವುದು ಅಡುಗೆಗೆ ಬಳಸುವುದಕ್ಕೆ ಆದರೆ ಇದರಲ್ಲಿ ಔಷಧಿಯ ಗುಣಗಳು ಕೂಡ ಇದೆ ಎಂದು ನಿಮಗೆ ಗೊತ್ತಿದೆಯಾ.ದಕ್ಷಿಣ ಭಾರತದ ಅನೇಕ ಅಡುಗೆಗಳಲ್ಲಿ ಸ್ವಾದಿಷ್ಟವಿಲ್ಲದಿದ್ದರೂ ಸುಹಾಸನೆ ನೀಡಲು ಉಪಯೋಗಿಸಲ್ಪಡುವ ಸುಪುತ್ರ ಕಾರ್ಯಗಳಲ್ಲಿ ಕರಿಬೇವೂ ಬಹಳ ಶ್ರೇಷ್ಠ. ರುಚಿಯಲ್ಲಿ ಬೇವಿನಷ್ಟು ಕಹಿ ಇಲ್ಲದಿದ್ದರೂ ಕಪ್ಪಾಗಿದ್ದು ಬೇವಿನಂತೆ ವಿಶೇಷ ಗುಣಗಳು ಇರುವುದರಿಂದ ಕರಿಬೇವಿನ ಕರೆಯಲಾಗುತ್ತದೆ.
ಕರಿಬೇವು ಸಾಮಾನ್ಯವಾಗಿ ಅಡುಗೆಯ ಹಿಂದಿನ ಅಂಗಳದಲ್ಲಿ ಬೆಳೆಯುವ ಮರ. ಆಗ ತಾನೆ ಮರದಿಂದ ಕಿತ್ತು ತಂದ ಸುವಾಸನೆ ಎಲ್ಲಾ ಅಡುಗೆಗಳಿಗೆ ಪರಿಮಳ ನೀಡುತ್ತದೆ. ಇದಕ್ಕೆ ಸಂಸ್ಕೃತದಲ್ಲಿ ಕಾಲಶಾಕ ಎಂದು ಹೆಸರು. ಕಫ ಪಿತ್ತ ರೋಗಗಳನ್ನು ಕಡಿಮೆ ಮಾಡುವುದಾಗಿ ಜಠರದ ರೋಗಗಳಲ್ಲಿ ಮುಂತಾದವುಗಳಲ್ಲಿ ಬಹಳ ಉಪಯುಕ್ತ.
ಕರಿಬೇವು ಸೇವನೆಯಿಂದ ದೇಹದಲ್ಲಿನ ಉಷ್ಣ ಅತಿಯಾದ ಬೆವರು, ದುರ್ವಾಸನೆ ಬರದಂತೆ ಕಾಪಾಡುತ್ತೆ. ಹೌದು ಸರಿ ಸಾಮಾನ್ಯವಾಗಿ ನಾವು ಉಪಯೋಗಿಸುವ ಪೆಸ್ಟ್ ನಲ್ಲೂ ಕೂಡ ಕರಿಬೇವಿನ ಅಂಶವಿರುತ್ತದೆ. ಕರಿಬೇವಿನಲ್ಲಿ ಅಧಿಕ ಕ್ಯಾಲ್ಸಿಯಂ ಅಂಶವಿದ್ದು, ಮೂಳೆಗಳನ್ನು ಬಲಿಷ್ಠಗೊಳಿಸುತ್ತೆ. ಮಾನಸಿಕ ಒತ್ತಡ ತಗ್ಗಿಸುತ್ತೆ. ಇದರಲ್ಲಿರುವ ಅಧಿಕ ಕಬ್ಬಿಣಾಂಶ ದೇಹಕ್ಕೆ ಬಲವನ್ನು ನೀಡುತ್ತೆ.
ಒಂದರಿಂದ ಎರಡು ಟೀ ಚಮಚದಷ್ಟು ಎಲೆ ರಸವನ್ನು ಒಂದು ಟೀ ಚಮಚ ನಿಂಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದು ಮುಂಜಾನೆ ಬರುವ ವಾಂತಿ ಅಜೀರ್ಣ ಅತಿಯಾದ ಜಿಡ್ಡು ಪದಾರ್ಥ ಸೇವನೆಯಿಂದ ಉಂಟಾದ ತೊಂದರೆ ಮತ್ತು ಮೂಳೆ ಸರಿಯಾಗಿ ಬೆಳೆಯದಿರುವುಕ್ಕಿಗೆ ಬಹಳ ಉಪಯುಕ್ತ. ಪ್ರತಿ ಮುಂಜಾನೆ ಎಂಟರಿಂದ ಹತ್ತು ತಾಚೆ ಎಲೆಗಳನ್ನು ಐದು ಸೇವಿಸುವುದರಿಂದ ಮಧುಮೇಹ ರೋಗವನ್ನು ಬಾರದಂತೆ ತಡೆಗಟ್ಟಲು ಉಪಯೋಗವಾಗಬಹುದು.
ಬೊಜ್ಜುರೋಗವನ್ನು ಬಾರದಂತೆ ಇಡಬಹುದು.ಗಾಯಗಳು ಬೇಗ ವಾಸಿಯಾಗಲು ಎಲೆಗಳನ್ನು ಸ್ವಲ್ಪ ಅರಿಶಿನದೊಂದಿಗೆ ನೆನೆದು ಹಚ್ಚಬೇಕು. ಇದರಿಂದ ಸುಟ್ಟ ಗಾಯ ವಾಸಿಯಾಗುತ್ತದೆ. ಕರಿಬೇವು ಒಂದು ಅತ್ಯುತ್ತಮ ಸೌಂದರ್ಯ ಸಾಧನ ಅಂತಲೂ ಹೇಳಬಹುದು. ಕರಿಬೇವಿನಲ್ಲಿರುವ ಔಷಧೀಯ ಗುಣಗಳು, ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತೆ. ಚರ್ಮದಲ್ಲಿನ ಸುಕ್ಕು ದೂರ ಮಾಡಿ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತೆ.
ಚರ್ಮವನ್ನು ತಾಜಾತನದಿಂದ ಇಡುವುವುದಲ್ಲದೆ ವೃದ್ದಾಪ್ಯವನ್ನು ತಡೆಯುತ್ತೆ.ಮುಖದ ಮೇಲಿನ ಮಚ್ಚೆಗಳು, ಮೊಡವೆಗಳನ್ನು ಸಹ ನಿವಾರಣೆ ಮಾಡುತ್ತೆ. ದೇಹದಲ್ಲಿ ಪೋಷಕಾಂಶದ ಕೊರತೆಯಾದಾಗ ಮಕ್ಕಳಿಗೆ ಕೂದಲು ಬೇಗ ಬಿಳಿಯಾಗುತ್ತದೆ. ಇತ್ತೀಚಿನ ಕಾಲದಲ್ಲಿ ಮಕ್ಕಳಿಗೆ ತುಂಬಾನೇ ಬೇಗ ಬಿಳಿಕೂಲು ಆಗುವುದು ಸರಿ ಸಾಮಾನ್ಯವಾಗಿದೆ. ಇಂತಹ ಸಮಸ್ಯೆಗೆ ಕರಿಬೇವು ತುಂಬಾ ಸಹಕಾರಿಯಾಗಿದೆ. ಹಾಗು ಕೂದಲ ಬೆಳವಣಿಗೆಗೂ ಉಪಯುಕ್ತವಾಗಿದೆ .
ಕರಿಬೇವಿನ ಎಲೆಗಳನ್ನು ಒಣಗಿಸಿ, ಅದನ್ನು ಕೊಬ್ಬರಿ ಎಣ್ಣೆಯಲ್ಲಿ, ಎಣ್ಣೆ ಹಸಿರು ಬಣ್ಣಕ್ಕೆ ಬರುವ ವರೆಗೂ ಕುದಿಸಬೇಕು. ನಂತರ ತಣಿಸಿ ಕೂದಲಿಗೆ ಪ್ರತಿ ವಾರಕೊಮ್ಮೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಇದನ್ನು ನೀವು ಬಾಟಲಿ ಅಥವಾ ಯಾವಾಗ ಹಚ್ಚುತ್ತೀರಿ ಅಂದು ಈ ಮಿಶ್ರಣವನ್ನು ತಯಾರು ಮಾಡಿಕೊಂಡು ಹಚ್ಚಿಕೊಳ್ಳಬಹುದು ಇದರಿಂದ ಬಿಳಿಕೂದಲು ಸಾಧ್ಯತೆಯನ್ನು ತುಂಬಾನೇ ಕಡಿಮೆ ಮಾಡಬಹುದು.