ಒಂದು ಗ್ಲಾಸ್ ಹಾಲು ಮತ್ತು ಬಾದಾಮಿಯನ್ನು ತಿನ್ನುವುದರಿಂದ ಎಷ್ಟುಪೊಟ್ಯಾಶಿಯಂ ಅಂಶವು ದೇಹಕ್ಕೆ ದೊರೆಯುತ್ತದೆ ಅಷ್ಟೊಂದು ಪೊಟ್ಯಾಶಿಯಂ ಅಂಶವನ್ನು ಒಂದು ಬಾಳೆಹಣ್ಣು ತಿನ್ನುವುದರಿಂದ ನಾವು ಪಡೆಯಬಹುದು. ಬಾಳೆಹಣ್ಣಿನಲ್ಲಿ ಸಮೃದ್ಧವಾದ ಪೋಷಕಾಂಶಗಳಿವೆ. ಇದರಲ್ಲಿರುವ ಆರೋಗ್ಯಕರ ಅಂಶದಿಂದಾಗಿ ಸ್ನಾಯುಗಳು, ಮೂಳೆ, ಹೃದಯದ ಆರೋಗ್ಯ, ಜೀರ್ಣ ಕ್ರಿಯೆ ಸೇರಿದಂತೆ ಅನೇಕ ಸಂಗತಿಗಳಿಗೆ ಧನಾತ್ಮಕ ಶಕ್ತಿ ಹಾಗೂ ಪೋಷಣೆಯನ್ನು ನೀಡುತ್ತವೆ.
ಬಾಳೆ ಹಣ್ಣಿನಲ್ಲಿ ಕಬ್ಬಿಣ , ವಿಟಮಿನ್ ಬಿ, ವಿಟಮಿನ್ ಬಿ6 ಸಮೃದ್ಧವಾಗಿವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರ ನೈಸರ್ಗಿಕ ಸಿಹಿಯು ದೇಹಕ್ಕೆ ಸಾಕಷ್ಟು ಸಿಹಿಯನ್ನು ನೀಡುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಏನು ಲಾಭ ಹಸಿದ ಹೊಟ್ಟೆಗೆ ಬಾಳೆಹಣ್ಣಿನ ಸೇವನೆಯಿಂದ ಆಗುವ ಪ್ರಯೋಜನಗಳು ಏನೆಲ್ಲ ಇದೆ. ಬಾಳೆಹಣ್ಣಿನ ವೈಶಿಷ್ಟ್ಯತೆಗೆ ಏನು ಮತ್ತು ಬಾಳೆಹಣ್ಣನ್ನು ಯಾವಾಗ ಹೇಗೆ ತಿನ್ನಬೇಕು ಎಂಬೆಲ್ಲ ಪ್ರಶ್ನೆಗಳಿಗೆ ಬಾಳೆಹಣ್ಣು ಸುಲಿದಂತೆ ಸಲಿಸಾದ ಮಾಹಿತಿ ಇಲ್ಲಿ ನೀಡಲಾಗಿದೆ.
ಬಾಳೆಹಣ್ಣು ನೈಸರ್ಗಿಕವಾಗಿ ಸಿಗುವಂತಹ ಹಣ್ಣು ಬಾಳೆಹಣ್ಣು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ನಾವು ರಾಜ್ಯದಲ್ಲಿಯೂ ಹೆಚ್ಚಾಗಿ ಬಾಳೆಹಣ್ಣು ಬೆಳೆಯುತ್ತಾರೆ ಮಾರುಕಟ್ಟೆಯಲ್ಲಿ ಬೇರೆ ಹಣ್ಣುಗಳಿಗಿಂತ ಸ್ವಲ್ಪ ಕಡಿಮೆ ಬೆಲೆಯಲ್ಲಿ ಸಿಗುವಂತಹ ಬಾಳೆಹಣ್ಣನ್ನು ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಇವೆ. ಹೆಣ್ಣು ಉಪ್ಪಿನಂಶ ಇರುವ ಆಹಾರ ಸೇವನೆಯ ನಂತರ ರಕ್ತದ ರಕ್ತದೊತ್ತಡ ಮಟ್ಟವನ್ನು ನಿಯಂತ್ರಣದಲ್ಲಿಡಲು ಪೊಟ್ಯಾಶಿಯಂ ಅಂಶವಿರುವ ಬಾಳೆಹಣ್ಣು ಸೇವನೆ ಸಹಾಯಕವಾಗುತ್ತದೆ.
ನಿಯಮಿತವಾಗಿ ಬಾಳೆಹಣ್ಣು ಸೇವನೆಯಿಂದ ಕಾಲಾಂತರದಲ್ಲಿ ಪಾಶ್ವಾಯು ಅಪಾಯ ಕಡಿಮೆಯಾಗುತ್ತದೆ. ಬಾಳೆಹಣ್ಣಿನಲ್ಲಿ ನಾರಿನ ಅಂಶ ಹೇರಳವಾಗಿರುವುದರಿಂದ ಹೈಡ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಳೆಹಣ್ಣನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡಿಕೊಳ್ಳಬಹುದು. ಮತ್ತು ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶವು ಇರುವುದರಿಂದ ಅದು ರಕ್ತದ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚು ಮಾಡುತ್ತಾರೆ.
ಒಂದು ಗ್ಲಾಸ್ ಹಾಲು ಮತ್ತು ಬಾದಾಮಿಯನ್ನು ತಿನ್ನುವುದರಿಂದ ಎಷ್ಟು ಪೊಟ್ಯಾಶಿಯಂ ಅಂಶವು ದೇಹಕ್ಕೆ ದೊರೆಯುತ್ತದೆ ಅಷ್ಟೊಂದು ಪೊಟ್ಯಾಶಿವಂಶವನ್ನು ಒಂದು ಬಾಳೆಹಣ್ಣು ತಿನ್ನುವುದರಿಂದ ನಾವು ಪಡೆಯಬಹುದು. ಸೈನಸ್ ಅಂತಹ ಸಮಸ್ಯೆಯಿಂದ ಬಳಲುತ್ತಿದ್ದವರೇ ಅಂತ ವ್ಯಕ್ತಿಗಳು ಬಾಳೆಹಣ್ಣಿನ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಈ ಸಮಸ್ಯೆಗೆ ಬೇಗನೆ ಉಪಶಮನ ಕಂಡುಕೊಳ್ಳಬಹುದು.
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ಸೇವಿಸುವುದರ ಮೂಲಕ ವ್ಯಾಯಾಮ, ಯೋಗ ಅಥವಾ ಯಾವುದೇ ದೇಹ ದಂಡನೆಯನ್ನು ಮಾಡಬಹುದು ಎಂದು ಹೇಳುತ್ತಾರೆ. ಆದರೆ ತಜ್ಞರು ಹೇಳುವ ಪ್ರಕಾರ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬರೇ ಬಾಳೆ ಹಣ್ಣನ್ನು ಸವಿಯಬಹುದು. ಬಾಳೆ ಹಣ್ಣಿನಲ್ಲಿ ಅಧಿಕ ಮ್ಯಾಗ್ನೀಸಿಯಮ್ ಹೊಂದಿರುವುದರಿಂದ ಖಾಲಿ ಹೊಟ್ಟೆಯಲ್ಲಿ ಸವಿದರೆ ಜೀರ್ಣ ಕ್ರಿಯೆಯ ಮೇಲೆ ನೇರ ಪ್ರಭಾವ ಬೀರುವುದು.