ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ನೇರಳೆ ಹಣ್ಣು ಸೇವನೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುತ್ತೇವೆ. ಸಾಮಾನ್ಯವಾಗಿ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಬಹಳ ಉಪಯೋಗಕಾರಿ ಆಗಿರುತ್ತವೆ. ಹಳ್ಳಿಗಳಲ್ಲಿ ಸಿಗುವ ಬೆಟ್ಟ ಗುಡ್ಡಗಳಲ್ಲಿ ದೊರೆಯುವ ಹಣ್ಣುಗಳು ಬಹಳ ಒಳ್ಳೆಯದು ನಮ್ಮ ಆರೋಗ್ಯಕ್ಕೆ ಆದರೆ ಅವುಗಳ ಬಗ್ಗೆ ನಮಗೆ ಅರಿವು ಇರುವುದಿಲ್ಲ. ಹೀಗಾಗಿ ಇಂದಿನ ಲೇಖನದಲ್ಲಿ ನಾವು ಒಂದು ವಿಶೇಷವಾದ ಹಣ್ಣಿನ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇಷ್ಟಕ್ಕೂ ಆ ಹಣ್ಣು ಯಾವುದು ಅಂತ ನಿಮಗೆ ಕುತೂಹಲ ಇರಬಹುದು.
ಅದುವೇ ನೇರಳೆ ಹಣ್ಣು ಅಥವಾ ಜಾಮಬಳೆ ಹಣ್ಣು. ಈ ಹಣ್ಣು, ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಮತ್ತು ಹೃದಯದ ಸಮಸ್ಯೆಗಳನ್ನು ದೂರವಿಡಲು ನೇರಳೆಹಣ್ಣು ಪ್ರಯೋಜನಕಾರಿಯಾಗಿದೆ. ಈ ಹಣ್ಣಿನಲ್ಲಿರುವ ಆಹಾರದ ಫೈಬರ್ಗಳು ಮತ್ತು ಆಂಟಿಆಕ್ಸಿಡೆಂಟ್ಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಪ್ಲೇಕ್ ರಚನೆಯನ್ನು ತಡೆಯಲು ಸೂಕ್ತವಾಗಿದೆ. ಹಣ್ಣಿನಲ್ಲಿ ಪೊಟ್ಯಾಸಿಯಮ್ ಇದೆ, ಇದು ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗಳಂತಹ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ನೇರಳೆ ಹಣ್ಣು ರಕ್ತವನ್ನು ಶುದ್ಧೀಕರಿಸಿ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ನಿಮ್ಮ ಚರ್ಮವನ್ನು ಕಾಂತಿಯುತ ಮತ್ತು ಹೊಳೆಯುವಂತೆ ಮಾಡುತ್ತದೆ. ಮೊಡವೆ ಮತ್ತು ಕಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಗುಣಲಕ್ಷಣಗಳು ಹೆಚ್ಚುವರಿ ತೈಲ ಉತ್ಪಾದನೆಯನ್ನು ತಟಸ್ಥಗೊಳಿಸಲು ಮತ್ತು ಕಪ್ಪು ಕಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಸಹ ಕಡಿಮೆ ಮಾಡುತ್ತದೆ.
ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕರುಳಿನ ಸಮಸ್ಯೆ ಮತ್ತು ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆಯಬಹುದು. ಅದೇ ರೀತಿ ಇದರ ಎಲೆಗಳನ್ನು ಅಗಿದು ರಸ ಕುಡಿದ್ರೆ ಅಲ್ಸರ್ ನಿವಾರಣೆಯಾಗುತ್ತದೆ. ನಿಯಮಿತವಾಗಿ ನೇರಳೆ ಹಣ್ಣಿನ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಬಹುದು. ಈ ಹಣ್ಣಿನಲ್ಲಿ ಐರನ್ ಅಂಶ ಇರುವುದರಿಂದ ಇದು ರಕ್ತ ಶುದ್ಧ ಮಾಡುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕೆಟ್ಟ ಉಸಿರಾಟದ ಸಮಸ್ಯೆಯನ್ನು ದೂರ ಮಾಡಬಹುದು.
ಹಾಗೆಯೇ ಚರ್ಮದ ಉರಿ ಸಮಸ್ಯೆಗೆ ನೇರಳೆ ಹಣ್ಣಿನ ಪೇಸ್ಟ್ಗೆ ಸಾವಿಸಿ ಎಣ್ಣೆ ಮಿಶ್ರ ಮಾಡಿ ಉರಿ ಇರುವ ಜಾಗಕ್ಕೆ ಲೇಪನ ಮಾಡಿದ್ರೆ ಉರಿ ಶಮನವಾಗುತ್ತದೆ. ನೇರಳೆಯ ಬೀಜಗಳನ್ನು ಒಣಗಿಸಿ, ಪುಡಿ ಮಾಡಿ ಸಂಗ್ರಹಿಸುವ ಆರ್ಯುವೇದ ತಜ್ಞರು, ಅದನ್ನು ಹಲವು ಕಾಯಿಲೆಗಳಿಗೆ ಔಷಧವಾಗಿ ಬಳಸುತ್ತಾರೆ. ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವ ಗುಣ ನೇರಳೆ ಬೀಜದಲ್ಲಿದೆ. ಬೀಜದಲ್ಲಿರುವ ಹೈಪೋಗ್ಲೈಸೆಮಿಕ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ.
ಜೊತಗೆ ಜಾಂಬೊಲಿನ್ ಮತ್ತು ಜಾಂಬೊಸೈನ್ ಎನ್ನುವ ಅಂಶಗಳು, ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ನೆರವಾಗುತ್ತವೆ. ಜೊತೆಗೆ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶವು ದೇಹವನ್ನು ನೈಸರ್ಗಿಕವಾಗಿ ಶುದ್ಧವಾಗಿಸುತ್ತದೆ. ಅಲ್ಲದೆ, ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಕ್ಯಾನ್ಸರ್ ವಿರೋಧಿ ಗುಣಗಳೂ ಇದರಲ್ಲಿವೆ.ನೇರೆಳೆ ಎಲೆಗಳನ್ನು ಜಗಿಯುವುದರಿಂದ ಬಾಯಿಯಿಂದ ದುರ್ಗಂಧ ಹೊಮ್ಮುವುದು ನಿಲ್ಲುತ್ತದೆ. ಜೊತೆಗೆ ಹಲ್ಲುಗಳು ಸದೃಢವಾಗುತ್ತವೆ.