ನಮಸ್ತೆ ಪ್ರಿಯ ಓದುಗರೇ, ಆರೋಗ್ಯವೇ ಭಾಗ್ಯ ಅನ್ನುವ ಮಾತು ಎಷ್ಟು ಸತ್ಯವೋ ಹಾಗೆಯೇ ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಆಗಿರುತ್ತದೆ ಅಲ್ಲವೇ? ನಾವು ನಿತ್ಯವೂ ಆಹಾರದಲ್ಲಿ ತರಕಾರಿ ಸೊಪ್ಪುಗಳನ್ನು ಕಾಯಿಪಲ್ಯಗಳನ್ನೂ ತಿಂದರೆ ಮಾತ್ರ ದೇಹವು ಸದೃಢವಾಗಿ ಆರೋಗ್ಯವಾಗಿ ಇರುತ್ತದೆ ಅಂತ ಭಾವಿಸುವುದು ತಪ್ಪಾಗುತ್ತದೆ ಗೆಳೆಯರೇ. ಈ ಆಹಾರದ ಜೊತೆಗೆ ನಾವು ಹಲವಾರು ಬಗೆಯ ಹಣ್ಣುಗಳನ್ನು ಸೇವನೆ ಮಾಡಬೇಕು. ನಮ್ಮ ಆರೋಗ್ಯವೂ ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿ ಇರುತ್ತದೆ.
ಹಣ್ಣುಗಳು ಈ ಹಣ್ಣುಗಳಲ್ಲಿ ನಮಗೆ ವೈದ್ಯರು ಗುಣ ಪಡಿಸಲು ಸಾಧ್ಯವಾಗದೆ ಇರುವ ಪೋಷಕಾಂಶಗಳನ್ನು ಔಷಧಿಯ ಗುಣಗಳನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಎಂಥಹ ಭಯಂಕರವಾದ ರೋಗ ರುಜಿನಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುತ್ತವೆ. ಅದರಲ್ಲಿ ಹೇಳುವುದಾದರೆ ಸೇಬು ಹಣ್ಣು. ದಿನಕ್ಕೆ ಒಂದು ಸೇಬು ಹಣ್ಣು ಸೇವನೆ ನಿಮ್ಮನ್ನು ವೈದ್ಯರಿಂದ ತುಂಬಾ ದಿನಗಳವರೆಗೆ ದೂರವಿರುವಂತೆ ಮಾಡುತ್ತದೆ. ಆನ್ ಆ್ಯಪಲ್ ಕೀಪ್ಸ್ ಅವೇ ಫ್ರಮ್ ಡಾಕ್ಟರ್ ಈ ಗಾದೆ ಮಾತು ಕೇಳಲು ಎಷ್ಟು ಚೆನ್ನಾಗಿ ಇದೆ ಅಲ್ಲವಾ ಸ್ನೇಹಿತರೇ. ಹೀಗೆ ಹಲವಾರು ಬಗೆಯ ಹಣ್ಣುಗಳು ದೊಡ್ಡದಾದ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುತ್ತದೆ ಅದರಲ್ಲಿ ದಾಳಿಂಬೆ.
ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನಾವು ದಾಳಿಂಬೆ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ತಿಳಿಯೋಣ ಅದರಲ್ಲೂ ಈ ದಾಳಿಂಬೆ ಕ್ಯಾನ್ಸರ್ ಅನ್ನು ತಡೆಗಟ್ಟಲು ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ ಅಂತ ಸವಿಸ್ತಾರವಾಗಿ ತಿಳಿದುಕೊಳ್ಳೋಣ ಬನ್ನಿ. ನಮ್ಮ ಭಾರತ ದೇಶದಲ್ಲಿ ತುಂಬಾ ಜನರು ಕ್ಯಾನ್ಸರ್ ಎಂಬ ಮಹಾಮಾರಿ ರೋಗಕ್ಕೆ ತುತ್ತಾಗಿ ತುಂಬಾ ಜನರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ಅವರ ಆಹಾರ ಪದ್ಧತಿ. ಕೆಲವು ಹಣ್ಣುಗಳು ನಿರ್ಧಿಷ್ಟವಾದ ಕಾಯಿಲೆಗಳಿಗೆ ರಾಮಬಾಣ ಆಗಿವೆ.
ಅದರಲ್ಲಿ ಈ ದಾಳಿಂಬೆ. ಈ ಹಣ್ಣು ಸೇವನೆ ಮಾಡುವುದರಿಂದ ಕ್ಯಾನ್ಸರ್ ನಿಂದ ಮುಕ್ತಿಯನ್ನು ಪಡೆಯಬಹುದು. ಜೊತೆಗೆ ಈ ಹಣ್ಣು ಸೇವನೆ ಮಾಡುವುದರಿಂದ ಕ್ಯಾನ್ಸರ್ ನಿಂದ ಚಿಕಿತ್ಸೆ ಇಂದ ಉಂಟಾಗುವ ಅಡ್ಡ ಪರಿಣಾಮವನ್ನು ಕೂಡ ಪಡೆಯಬಹುದು ಹಣ್ಣಿನಿಂದ. ಕ್ಯಾನ್ಸರ್ ನಲ್ಲಿ ಹಲವಾರು ಬಗೆಯ ವಿಧಗಳಿವೆ. ಸ್ತನ ಕ್ಯಾನ್ಸರ್ ಬ್ರೈನ್ ಕ್ಯಾನ್ಸರ್ ಇನ್ನಿತರ. ಈ ಬಗೆಯ ಕ್ಯಾನ್ಸರ್ ಕಾರಕ ನಿಯಂತ್ರಣಕ್ಕೆ ದಾಳಿಂಬೆ ರಸ ಮನೆಮದ್ದಾಗಿದೆ. ಅಂದ್ರೆ ಇದು ಕ್ಯಾನ್ಸರ್ ಜೀವಕೋಶಗಳ ನಾಶಕ್ಕೆ ಸಹಕಾರ ನೀಡುತ್ತದೆ.
ಜೊತೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸ್ತನ ಕ್ಯಾನ್ಸರ್ ಎಂಬ ರೋಗವನ್ನು ಕೂಡ ಈ ದಾಳಿಂಬೆ ಹಣ್ಣು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಹೀಗಾಗಿ ಈ ದಾಳಿಂಬೆ ದಿನನಿತ್ಯದ ಆಹಾರ ಶೈಲಿಯಲ್ಲಿ ನೀವು ಬಳಕೆ ಮಾಡಿದ್ರೆ ನಿಮಗೆ ಯಾವುದೇ ಅಡ್ಡ ಪರಿಣಾಮಗಳೂ ಬೀರುವುದಿಲ್ಲ. ಅಷ್ಟೇ ಅಲ್ಲದೇ ಇದು ರಕ್ತ ಹೀನತೆ ಸಮಸ್ಯೆಯನ್ನು ಹೊಡೆದೋಡಿಸುತ್ತದೆ. ಮತ್ತು ಹೃದಯ ಸಂಬಂಧಿ ನಿಯಂತ್ರಣಕ್ಕೆ ಕೂಡ ಇದು ಸಹಾಯ ಮಾಡುತ್ತದೆ.
ದಾಳಿಂಬೆ ರಸ ಮಾಡಿ ಕುಡಿಯುವುದರಿಂದ ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಆಂಟಿ ಬಯೋಟಿಕ್ ಗುಣಗಳು ಶರೀರದ ಜೀವಕೋಶಗಳಿಗೆ ಹಾನಿ ಉಂಟು ಮಾಡದಂತೆ ತಡೆಯುತ್ತದೆ.ಇಷ್ಟೆಲ್ಲ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಈ ದಾಳಿಂಬೆ ಹಣ್ಣಿನ ಸೇವನೆ ಮಾಡಿ ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.