ನಮಸ್ತೆ ಪ್ರಿಯ ಓದುಗರೇ, ಬಾಯಿ ಹುಣ್ಣು ಇದನ್ನು ಇಂಗ್ಲಿಷ್ ನಲ್ಲಿ ಅಲ್ಸರ್ ಅಂತ ಕರೆಯುತ್ತಾರೆ. ಈ ಸಮಸ್ಯೆ ಚಿಕ್ಕದಾಗಿ ಕಂಡರೂ ಇದನ್ನು ಅನುಭವಿಸಿದವರಿಗೆ ಗೊತ್ತಾಗುತ್ತದೆ ಇದರ ನೋವು ಏನು ಅಂತ ಅಲ್ವಾ? ಈ ಅಲ್ಸರ್ ಅಂದ್ರೆ ದೇಹದ ಉಷ್ಣತೆ ಹೆಚ್ಚಾಗಿ ಬಾಯಿಯಲ್ಲಿ ಹುಣ್ಣುಗಳ ಮೂಲಕ ಉಷ್ಣತೆಯನ್ನು ಹೊರಗೆ ಹಾಕುವುದು ಅಂತ ಅರ್ಥವನ್ನು ನೀಡಲಾಗುತ್ತದೆ. ಈ ಸಮಸ್ಯೆಯನ್ನು ಎದುರಿಸದೇ ಇರುವ ಜನರಿಲ್ಲ ಈ ಜಗತ್ತಿನಲ್ಲಿ.
ಇದು ಅವರವರ ದೇಹದ ಉಷ್ಣತೆಯ ಮೇಲೆ ಅವಲಂಬಿತವಾಗಿ ಇರುತ್ತದೆ. ಯಾರ ದೇಹದ ಉಷ್ಣತೆ ಹೆಚ್ಚಾಗಿ ಇರುತ್ತದೆ ಅವರು ಈ ಸಮಸ್ಯೆಯನ್ನು ತಿಂಗಳಿಗೊಮ್ಮೆ ಅನುಭವಿಸುತ್ತಾರೆ. ಇನ್ನೂ ಕೆಲವರು ಆರು ತಿಂಗಳಿಗೊಮ್ಮೆ ಆದ್ರೆ ಇನ್ನೂ ಕೆಲವರು ವರ್ಷಕ್ಕೆ ಒಮ್ಮೆ. ಆದ್ರೆ ಈ ಸಮಸ್ಯೆಯು ಎಲ್ಲರಿಗೂ ಒಂದು ಚಮಕ ಅನ್ನು ಕೊಟ್ಟೆ ಕೊಟ್ಟಿರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಜನರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.
ಇದು ಆ ಕ್ಷಣಕ್ಕೆ ಆರಾಮದಾಯಕ ಅನ್ನಿಸಿದರೂ ಕೂಡ ಇದು ಮತ್ತೆ ಬಂದು ಒಕ್ಕರಿಸುವುದಿಲ್ಲ ಅಂತ ಹೇಳಲು ಸಾಧ್ಯವಿಲ್ಲ. ಹಾಗಾದ್ರೆ ಇದಕ್ಕೆ ಏನು ಪರಿಹಾರ ಇಲ್ಲವೇ? ಈ ಸಮಸ್ಯೆ ಹೀಗೆ ಕಾಡುತ್ತಾ ಬಂದ್ರೆ ನಮಗೆ ಇದರಿಂದ ಏನಾದ್ರೂ ಮುಂದೆ ಭವಿಷ್ಯದಲ್ಲಿ ತೊಂದರೆಗಳ ಸುರಿಮಳೆ ಆಗುತ್ತದೆಯೇ? ಚಿಂತೆ ಬೇಡ ಮಿತ್ರರೇ. ಈ ಸಮಸ್ಯೆಯಿಂದ ನೀವು ಬೇಸತ್ತು ಹೋಗಿದ್ದರೆ ಈ ಲೇಖನವನ್ನು ಕೊನೆವರೆಗೂ ಓದಿ ಮರೆಯಬೇಡಿ. ಈಗಾಗಲೇ ಮೇಲೆ ತಿಳಿಸಿದಂತೆ ಬಾಯಿ ಹುಣ್ಣು ಕಾಣಿಸಿಕೊಳ್ಳುವುದು ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾದಾಗ.
ಇನ್ನೂ ನೀವು ತುಂಬಾನೇ ಗಟ್ಟಿಯಾದ ಪದಾರ್ಥಗಳನ್ನು ಕೂಡ ತಿಂದಾಗ ಒಂದಕ್ಕೊಂದು ತಾಗಿ ಕೂಡ ಈ ಬಾಯಿ ಹುಣ್ಣು ಸಮಸ್ಯೆ ಉದ್ಭವ ಆಗುತ್ತದೆ. ಇದರಿಂದ ನಮಗೆ ಊಟ ಮಾಡಲು ಆಗುವುದಿಲ್ಲ ತುಂಬಾನೇ ಕಷ್ಟ ಆಗುತ್ತದೆ. ಊಟವನ್ನು ಮಾಡದೇ ಇದ್ದರೆ ದೇಹವು ಸುಸ್ತು ಪರಿಸ್ಥಿತಿಗೆ ಹೋಗುವಂತೆ ಮಾಡುತ್ತದೆ ಈ ಅಲ್ಸರ್. ಏನು ತಿನ್ನಲು ಬಾಯಿಗೆ ನಾಲಿಗೆಗೆ ಖಾರವಾದ ಪದಾರ್ಥಗಳನ್ನು ಹತ್ತಲು ಕೊಡುವುದಿಲ್ಲ ಅಷ್ಟೊಂದು ಹಿಂಸೆ ಆಗುತ್ತದೆ ಈ ಬಾಯಿ ಹುಣ್ಣು ಆದಾಗ.
ಈ ಸಮಸ್ಯೆಯಿಂದ ತುಂಬಾನೇ ಬೇಸತ್ತು ಬೇಸತ್ತು ಜನರು ಏನು ಮಾಡುತ್ತಾರೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮಾಡುತ್ತಾರೆ ಮೆಡಿಕಲ್ ನಲ್ಲಿ ದೊರೆಯುವ ಜೆಲ್ ಅನ್ನು ಹಚ್ಚುತ್ತಾರೆ. ಹೀಗೆ ಹಲವಾರು ವಿಧವನ್ನು ಅವರು ಅನುಸರಣೆ ಮಾಡುತ್ತಾರೆ.ಆದರೆ ಇದರಿಂದ ಅಲ್ಸರ್ ಅಷ್ಟೊಂದು ಬೇಗನೆ ಕಡಿಮೆ ಆಗುವುದಿಲ್ಲ. ಆದ್ರೆ ನೀವು ಹಿಂಸೆ ಪಡುವ ಅವಶ್ಯಕತೆ ಇಲ್ಲ ಮಿತ್ರರೇ ನಾವು ತಿಳಿಸುವ ಈ ಮನೆಮದ್ದು ಒಮ್ಮೆ ಮಾಡಿ ನೋಡಿ. ಖಂಡಿತವಾಗಿ ಈ ಅಲ್ಸರ್ ಸಮಸ್ಯೆಯಿಂದ ನೀವು ಮುಕ್ತಿಯನ್ನು ಪಡೆಯಬಹುದು.
ನಿಮಗೆಲ್ಲರಿಗೂ ಗೊತ್ತೇ ಇದೆ ಸ್ನೇಹಿತರೇ ಬಾರ್ಲಿ. ಈ ಬಾರ್ಲಿ ಅನ್ನು ನೀವು ನೋಡಿರುತ್ತೀರಿ. ಈ ಬಾರ್ಲಿಯು ಮುಖ್ಯವಾಗಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಬಳಕೆ ಮಾಡುತ್ತಾರೆ. ನೀವು ಈ ಬಾರ್ಲಿ ಅನ್ನು ಪುಡಿ ಮಾಡಿ ಚಪಾತಿ ಜೊತೆಗೆ ಸೇವನೆ ಮಾಡಬಹುದು ಅಥವಾ ಹೇಗಾದ್ರೂ ನಿಮಗೆ ಬೇಕಾದ ರೀತಿಯಲ್ಲಿ ನೀವು ಸೇವಿಸಬಹುದು. ಆದ್ರೆ ಈ ಸಮಸ್ಯೆಗೆ ನೀವು ಬಾರ್ಲಿ ಹಾಲು ಮಾಡಿ ಕುಡಿಯಬೇಕು. ಬಾರ್ಲಿ ಅನ್ನು ಸ್ವಲ್ಪ ಹುರಿದುಕೊಂಡು ಅದನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.
ಈ ಪುಡಿಯನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ ನಂತ್ರ ಇದನ್ನು ಚೆನ್ನಾಗಿ ಕುದಿಸಿಕೊಳ್ಳಿ ನಂತ್ರ ಇದಕ್ಕೆ ಹಾಲನ್ನು ಸ್ವಲ್ಪ ಹಾಕಿ ನಿಮಗೆ ಇಷ್ಟವಾದರೆ ಬೆಲ್ಲವನ್ನು ಕೂಡ ನೀವು ಹಾಕಿ ಕುಡಿಯಬಹುದು. ಈ ಮನೆಮದ್ದು ನೀವು ದಿನದಲ್ಲಿ ಎರಡು ಮೂರು ಬಾರಿ ಕುಡಿಯಬಹುದು. ಇದರಿಂದ ನಿಮ್ಮ ಬಾಯಿ ಹುಣ್ಣು ಶಮನವಾಗುತ್ತದೆ.