ನಮಸ್ತೆ ಪ್ರಿಯ ಸ್ನೇಹಿತರೆ, ಮಲಬದ್ಧತೆ ಈ ಹೆಸರನ್ನು ಕೇಳಿದರೆ ಜನರು ತುಂಭಾನೆ ಮುಜುಗರ ಪಡುತ್ತಾರೆ.ಮನುಷ್ಯನು ತಾನು ಸೇವಿಸದ ಆಹಾರ ಸರಿಯಾಗಿ ಜೀರ್ಣವಾಗದೆ ಮಲದ ರೂಪದಲ್ಲಿ ಹೊರಗಡೆ ಹೋಗದೆ ಇದ್ದರೆ ಈ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಹಬ್ಬ ಹರಿದಿನಗಳಲ್ಲಿ ಜಾಸ್ತಿ ಊಟವನ್ನು ಮಾಡಿದರೆ ಅಥವಾ ಜಂಕ್ ಫುಡ್ ಸೇವನೆ ಮಾಡಿದ್ರೆ ಲೇಟ್ ಆಗಿ ಊಟವನ್ನು ಮಾಡಿದರೆ ಆಹಾರವು ಸರಿಯಾಗಿ ಜೀರ್ಣವಾಗದೆ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮಗಳೂ ಬೀರಬಹುದು.

ನಾವು ಯಾವಾಗಲೂ ತೊಂದರೆ ಆದರೆ ಒಂದನ್ನು ಮಾತ್ರ ದೋಷಿಸಬಾರದು ಅದಕ್ಕೆ ಹಲವಾರು ಕಾರಣಗಳು ಇರುತ್ತವೆ. ನಮ್ಮ ದೇಹವು ಅಥವಾ ನಾವು ತಿನ್ನುವ ಆಹಾರ ಪದ್ಧತಿ ಗೆ ಕೇವಲ ಜೀರ್ಣಾಂಗ ವ್ಯವಸ್ಥೆ ಕಾರಣ ಆಗಿರುವುದಿಲ್ಲ. ಇದಕ್ಕೆ ನಮ್ಮ ದೇಹದ ಒಳಭಾಗಿನಲ್ಲಿ ಇರುವ ಸಣ್ಣ ಕರುಳು ದೊಡ್ಡ ಕರುಳು ಕೂಡ ಕಾರಣ ಆಗಿರುತ್ತವೆ. ಎಲ್ಲ ಅಂಶಗಳನ್ನು ನಾವು ಪರಿಗಣನೆ ಮಾಡಿ ತೆಗೆದುಕೊಂಡರೆ ಮಲಬದ್ಧತೆ ಸಮಸ್ಯೆಯನ್ನು ಎದುರಿಸಲು ಇದಕ್ಕೆ ಸಾಕಷ್ಟು ಕಾರಣಗಳು ಇವೆ.

ಹಾಗಾದ್ರೆ ಇದನ್ನು ತಡೆಯುವುದು ಆದರೂ ಹೇಗೆ ಅಂತ ಇಂದಿನ ಲೇಖನದಲ್ಲಿ ಚಿಕ್ಕದಾಗಿ ಒಂದು ಮನೆಮದ್ದು ಚಟ್ನಿ ಬಗ್ಗೆ ತಿಳಿಯೋಣ ಬನ್ನಿ. ಮೊದಲನೆಯದು ನಾವು ತಿಂದ ಆಹಾರವು ಚೆನ್ನಾಗಿ ಜೀರ್ಣವಾಗಿ ಅದು ಮಲದ ರೂಪದಲ್ಲಿ ಹೊರಗಡೆ ಹೋದರೆ ನಮ್ ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ನಮ್ಮ ದೇಹದಲ್ಲಿರುವ ಕಲ್ಮಶ ಸರಿಯಾದ ರೂಪದಲ್ಲಿ ಹೊರಗಡೆ ಹೋಗಲಿಲ್ಲ ಅಂದ್ರೆ ಅದನ್ನು ಮಲಬದ್ಧತೆ ಅಂತ ಕರೆಯುತ್ತಾರೆ.

ಈ ಸಮಸ್ಯೆಯನ್ನು ಹೋಗಲಾಡಿಸಲು ಮುಖ್ಯವಾಗಿ ಬೇಕಾಗಿರುವುದು ನಾರಿನ ಅಂಶ ಇರುವ ಆಹಾರ ಪದಾರ್ಥ. ಅದುವೇ ಸಬ್ಬಸಗಿ ಸೊಪ್ಪು. ಇದನ್ನು ಚೆನ್ನಾಗಿ ತೊಳೆದು ಅದರ ಕಾಂಡವನ್ನು ತೆಗೆದು ನೀರು ಉಪ್ಪು ಅರಿಶಿಣವನ್ನು ಹಾಕಿ ಚೆನ್ನಾಗಿ ನೆನೆಸಿಡಿ. ಈಗ ಈ ಸಬ್ಬಸಗಿ ಸೊಪ್ಪಿನ ಚಟ್ನಿ ಮಾಡಲು ಬೇಕಾದ ಸಾಮಗ್ರಿಗಳು ಅಂದ್ರೆ ಮೊದಲಿಗೆ ಸಬ್ಬಸಗಿ ಸೊಪ್ಪು, ಕಾಯಿತುರಿ, ಉಪ್ಪು, ಹುಣಸೆ ಹಣ್ಣು, ಒಣ ಮೆಣಸಿನ, ಕಾಯಿ, ಸ್ವಲ್ಪಎಣ್ಣೆ ಉದ್ದಿನ ಬೇಳೆ.

ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಡೀ. ಅದರಲ್ಲಿ ಎಣ್ಣೆ ಹಾಕಿ ಉದ್ದಿನ ಬೇಳೆ ಹುರಿದುಕೊಳ್ಳಿ. ನಂತ್ರ ಸ್ವಲ್ಪ ಎಣ್ಣೆಯನ್ನು ಹಾಕಿ ಸಬ್ಬಸಗಿ ಸೊಪ್ಪು ಹಾಕಿ ಹುರಿದುಕೊಳ್ಳಿ. ನಂತ್ರ ತಣ್ಣಗಾಗಲು ಬಿಡಿ ಆಮೇಲೆ ಮಿಕ್ಸಿ ಜಾರಿಗೆ ಈ ಸೊಪ್ಪು ಹಾಕಿಕೊಳ್ಳಿ ಆಮೇಲೆ ಅದಕ್ಕೆ ಕಾಯಿತುರಿ ಒಣ ಮೆಣಸಿನ ಕಾಯಿ ಮತ್ತು ಹುಣಸೆ ಹಣ್ಣು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನಂತ್ರ ಅದರ ಮೇಲೆ ಹುರಿದ ಉದ್ದಿನ ಬೇಳೆ ಹಾಕಿಕೊಳ್ಳಿ.

ಅಥವಾ ನಿಮಗೆ ಇಷ್ಟವಾದರೆ ನೀವು ಅದನ್ನು ಚಟ್ನಿಗೆ ಹಾಕುವ ಹಾಗೆ ಅದಕ್ಕೆ ಒಗ್ಗರಣೆ ಹಾಕಿಕೊಳ್ಳಿ. ಹಾಕಿದ ನಂತರ ಅದನ್ನು ಚೆನ್ನಾಗಿ ಕುದಿಸಿಕೊಳ್ಳಿ ಇದರಿಂದ ಅದರ ವಾಸನೆ ಕೂಡ ಹೋಗುತ್ತದೆ. ಇದನ್ನು ನೀವು ಚಪಾತಿ ದೋಸೆ ಇಡ್ಲಿ ಎಲ್ಲ ಆಹಾರದ ಜೊತೆಗೆ ಸೇವನೆ ಮಾಡಬಹುದು. ಇದರಲ್ಲಿ ವಿಟಮಿನ್ ಎ ಮತ್ತು ಸಿ ಮತ್ತು ಇನ್ನಿತರ ಪೋಷಕಾಂಶಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಮುಖ್ಯವಾಗಿ ಇದು ಮಲಬದ್ಧತೆಯನ್ನು ನಿವಾರಿಸಲು ತುಂಬಾನೇ ಸಹಾಯ ಮಾಡುತ್ತದೆ. ಅಷ್ಟೊಂದು ಪರಿಣಾಮಕಾರಿ ಆಗಿದೆ ಒಮ್ಮೆ ಪ್ರಯತ್ನ ಮಾಡಿ ನೋಡಿ.

Leave a Reply

Your email address will not be published. Required fields are marked *