ನಮಸ್ತೆ ಪ್ರಿಯ ಓದುಗರೇ ಸಪೋಟ ಹಣ್ಣು, ಈ ಹಣ್ಣು ನೋಡಲು ಗುಂಡಾಕಾರದಲ್ಲಿ ಇದ್ದು ರುಚಿಯಲ್ಲಿ ತುಂಬಾನೇ ತುಂಬಾನೇ ಸಿಹಿಯಾಗಿ ಇರುತ್ತದೆ. ಈ ಹಣ್ಣನ್ನು ಇಷ್ಟ ಪಡದೆ ಇರುವವರು ಯಾರಿಲ್ಲ ಅಂತ ಹೇಳಬಹುದು. ಈ ಹಣ್ಣಿನಲ್ಲಿ ಪ್ರಕ್ಟೋಸ್ ಮತ್ತು ಸುಕ್ರೋಸ್ ಎಂಬ ಎರಡು ಸಿಹಿ ಅಂಶಗಳು ಇದರಲ್ಲಿ ಅಡಗಿವೆ. ಇದನ್ನು ಆಡು ಭಾಷೆಯಲ್ಲಿ ಚಿಕ್ಕು ಅಂತ ಕರೆಯುತ್ತಾರೆ ಸಪೋಟ ಹಣ್ಣನ್ನು ನಿತ್ಯವೂ ಸೇವನೆ ಮಾಡುವುದರಿಂದ ತುಂಬಾನೇ ಆರೋಗ್ಯಕರ ಲಾಭಗಳು ಇವೆ. ಅದರಲ್ಲಿ ಮುಖ್ಯವಾಗಿ ಇದು ಚರ್ಮದ ಕಾಂತಿಗೆ ತುಂಬಾನೇ ಒಳ್ಳೆಯದು. ಮತ್ತು ಕೂದಲಿಗೆ ಒಂದು ಅತ್ಯದ್ಭುತವಾದ ಔಷಧ ಅಂತ ಹೇಳಬಹುದು.
ಅಮೆರಿಕ ಮೆಕ್ಸಿಕೊ ಬ್ರೆಜಿಲ್ ಎಂಬ ದೇಶದ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಹಾಗೆಯೇ ನಮ್ಮ ಭಾರತ ದೇಶದಲ್ಲಿ ವರ್ಷ ಪೂರ್ತಿಯಾಗಿ ಲಭಿಸುವ ಹಣ್ಣುಗಳಲ್ಲಿ ಒಂದಾಗಿದೆ. ಹಾಗೆಯೇ ಇದರ ಒಳಗಡೆ ಕಪ್ಪು ಬಣ್ಣದ ಉದ್ದನೆಯ ಬೀಜವು ಕೂಡ ಇರುತ್ತದೆ. ಈ ಹಣ್ಣಿನ ಆರೋಗ್ಯಕರ ಲಾಭಗಳ ಪಟ್ಟಿ ಮಾಡುತ್ತಾ ಹೋದರೆ ಶಬ್ದಗಳು ಸಾಲದು. ಈ ಹಣ್ಣಿನಲ್ಲಿ ಅಧಿಕವಾದ ಪೋಷಕಾಂಶಗಳು ಇದ್ದು ಜೊತೆಗೆ ಗ್ಲೂಕೋಸ್ ಅನ್ನು ಹೊಂದಿದ್ದು ದೇಹಕ್ಕೆ ದುಪ್ಪಟ್ಟು ಶಕ್ತಿಯನ್ನು ನೀಡುತ್ತದೆ.
ಈ ಹಣ್ಣಿನಲ್ಲಿ ವಿಟಮಿನ್ ಎ ಅಂಶವಿದ್ದು ಇದು ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು. ಗ್ಲುಕೋಸ್ ಇದರಲ್ಲಿ ಅಡಗಿರುವುದು ಇದನ್ನು ಕ್ರೀಡಾಪಟು ಗಳು ಈ ಹಣ್ಣು ಹೆಚ್ಚು ತಿನ್ನಲು ಶಿಫಾರಸು ಮಾಡಲಾಗುತ್ತದೆ. ಇದು ಟ್ಯಾನ್ ಗಳ ಮೂಲಕ ಕೆಲಸ ಮಾಡುತ್ತದೆ. ಇದು ಉರಿ ಊತ ಪ್ರತಿವಿರೋಧಿ ಆಗಿ ಕೆಲಸವನ್ನು ಮಾಡುತ್ತದೆ. ಅಂದರೆ ಅನ್ನನಾಳ ಜಠರ ಉರಿತ ಜೀರ್ಣಾಂಗಕ್ಕೆ ಸಂಭಂದ ಪಟ್ಟ ಎಲ್ಲ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಈ ಸಪೋಟ ಹಣ್ಣು.
ನೋವು ಉರಿ ಊತ ಸಮಸ್ಯೆಗೆ ಇದು ಪರಿಣಾಮಕಾರಿಯಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಎ ಇರುವುದರಿಂದ ಇದು ತ್ವಚೆಯ ವಿನ್ಯಾಸವನ್ನು ಅಧಿಕಗೊಳಿಸುತ್ತದೆ. ಸಪೋಟ ಹಣ್ಣು ಉತ್ಕರ್ಷಕ ನಿರೋಧಕ ಪೋಷಕಾಂಶಗಳು ಇದ್ದು ಇದು ಕ್ಯಾನ್ಸರ್ ನಿಂದ ರಕ್ಷಣೆಯನ್ನು ಮಾಡುತ್ತದೆ. ದೊಡ್ಡ ಪ್ರಮಾಣದಲ್ಲಿ ಇದರಲ್ಲಿ ಕ್ಯಾಲ್ಸಿಯಂ ಫಾಸ್ಫರಸ್ ಇರುವಿಕೆ ಮೂಳೆಗಳನ್ನು ಬಲಿಷ್ಠ ಮಾಡುತ್ತದೆ. ಸಪೋಟ ಹಣ್ಣು ಕಬ್ಬಿಣ ಅಂಶ ಹೊಂದಿರುವ ಕಾರಣ ಇದು ಮೂಳೆಗಳಿಗೆ ಶಕ್ತಿಯನ್ನು ಒದಗಿಸಿ ಅವುಗಳು ಕುಂಠಿತವಾಗಿ ಆಗದಂತೆ ನೋಡಿಕೊಳ್ಳುತ್ತದೆ.
ನೀವು ಮಲಬದ್ಧತೆ ಸಮಸ್ಯೆಯನ್ನು ಹೊಂದಿದ್ದರೆ ನಿತ್ಯವೂ ಸಪೋಟ ಹಣ್ಣು ಸೇವನೆ ಮಾಡುತ್ತಾ ಬನ್ನಿ ಇದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಈ ಹಣ್ಣಿನಲ್ಲಿ ಸಕ್ರೋಸ್ ಮತ್ತು ಪ್ರಕ್ಟೋಸ್ ಎಂಬ ಸಕ್ಕರೆಯ ಅಂಶ ಅಡಗಿದೆ. ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿತ್ಯವೂ ಸಪೋಟ ಹಣ್ಣು ಸೇವನೆ ಮಾಡುತ್ತಾ ಬನ್ನಿ. ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಜೊತೆಗೆ ದೃಷ್ಟಿ ದೋಷ ನಿವಾರಣೆ ಆಗುತ್ತದೆ. ಪ್ರತಿದಿನವೂ ಸಪೋಟ ಹಣ್ಣು ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹಾಗೆಯೇ ಶ್ವಾಸಕೋಶ ಸಂಭಂದ ಪಟ್ಟ ಕಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಪ್ರೊಟೀನ್, ಖನಿಜಗಳು ಲವಣಗಳು, ಪೊಟ್ಯಾಶಿಯಂ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆಂಟಿ ಬ್ಯಾಕ್ಟೀರಿಯಲ ಆಂಟಿ ವೈರಸ ಅಂಶಗಳನ್ನು ಹೊಂದಿದ್ದು ಇದು ದೇಹಕ್ಕೆ ಹಲವಾರು ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ. ಗರ್ಭಿಣಿಯರು ವೃದ್ಧರು ಈ ಹಣ್ಣು ತಿನ್ನಲೆಬೇಕು. ಏಕೆಂದರೆ ಇದು ದೇಹಕ್ಕೆ ಅಗತ್ಯವಾದ ಕಬ್ಬಿಣ ಅಂಶವನ್ನು ಒದಗಿಸಿ ಕೊಡುತ್ತದೆ. ಅತಿಯಾದರೆ ಅಮೃತವೂ ವಿಷವೇ. ಅದಕ್ಕಾಗಿ ನೀವು ವೈದ್ಯರ ಸಲಹೆ ಮೇರೆಗೆ ಈ ಹಣ್ಣು ಬಳಕೆ ಮಾಡಿ.