ನಮಸ್ತೆ ಪ್ರಿಯ ಓದುಗರೇ, ನೀವು ಪ್ರಸ್ತುತ ವ್ಯವಹಾರವನ್ನು ವಿಸ್ತರಿಸಲು ಬಯಸಿದರೆ ಮತ್ತು ಅದಕ್ಕಾಗಿ ಹಣದ ಅಗತ್ಯವಿದ್ದರೆ, ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 10 ಲಕ್ಷ ರೂಪಾಯಿವರೆಗೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಯೋಜನೆ 2015ರಿಂದಲೇ ಜಾರಿಯಲ್ಲಿದೆ. ಮುದ್ರಾ ಲೋನ್ ಯೋಜನೆ ಅಂದ್ರೆ ಚಿಕ್ಕ ಚಿಕ್ಕ ಉದ್ಯಮಗಳನ್ನು ಪ್ರಾರಂಭ ಮಾಡುವುದು ಇವುಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದು ಇವರಿಗೆ ಉದ್ಯಮವನ್ನು ಶುರು ಮಾಡಲು ಸುಲಭವಾಗಿ ಸಲೀಸವಾಗಿ ಲೋನ್ ಸಿಗಬೇಕು ಅನ್ನುವ ಉದ್ದೇಶದ ಸಲುವಾಗಿ ಈ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ.
ಈ ಮುದ್ರಾ ಲೋನ್ ಯೋಜನೆಯಲ್ಲಿ ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಶಿಶು, ಕಿಶೋರ್ ಮತ್ತು ತರುಣ್ ಅಂತ. ಮೊದಲಿಗೆ ಶಿಶು ಯೋಜನೆಯಲ್ಲಿ ಹೆಚ್ಚುವರಿ ಆಗಿ 50000 ಸಾವಿರ ರೂಪಾಯಿಯವರೆಗೆ ನಿಮಗೆ ಲೋನ್ ಸಿಗುತ್ತದೆ. ಕಿಶೋರ್ ಸ್ಕೀಮ್ ನಲ್ಲಿ ನೀವು ಮೊದಲೇ ಬಿಸಿನೆಸ್ ಶುರು ಮಾಡಿ ಅದನ್ನು ಮತ್ತಷ್ಟು ದೊಡ್ಡದಾಗಿ ಪರಿವರ್ತನೆ ಮಾಡಲು ಅಥವಾ ರಾ ಮೆಟೀರಿಯಲ್ ಖರೀದಿ ಮಾಡಲು ನಿಮಗೆ 50000-5ಲಕ್ಷ ರೂಪಾಯಿವರೆಗೆ ನಿಮಗೆ ಲೋನ್ ನೀಡುತ್ತಾರೆ.
ತರುಣ್ ಸ್ಕೀಮ್ ಅನ್ನು ದೊಡ್ಡ ದೊಡ್ಡ ಬಿಜಿನೆಸ್ ಉದ್ಯಮಿಗಳಿಗೆ 5-10 ಲಕ್ಷದ ವರೆಗೆ ಲೋನ್ ಅನ್ನು ಕೊಡುತ್ತಾರೆ ಇದನ್ನು ತರುಣ್ ಲೋನ್ ಸ್ಕೀಮ್ ಅಂತ ಕರೆಯುತ್ತಾರೆ. ಈ ಸ್ಕೀಂ ನಿಂದ ಲೋನ್ ಅನ್ನು ಪಡೆದುಕೊಂಡು ನೀವು ಮೆಡಿಕಲ್ ಶಾಪ ಓಪನ್ ಮಾಡಬಹುದು ರಿಪೇರಿ ಶಾಪ ಹಾಕಬಹುದು ಟೈಲರಿಂಗ್ ತರಬೇತಿ ನೀಡಲು ನೀವು ಲೋನ್ ಪಡೆಯಬಹುದು, ಬಸ್ ಅಂದ್ರೆ ಟ್ರಾನ್ಸ್ಪೋರ್ಟಟೇಶನ್ ಅಭಿವೃದ್ದಿ ಮಾಡಲು ಹಾಲಿನ ಡೈರಿ ಶುರು ಮಾಡಲು ಹಣವನ್ನು ಪಡೆಯಬಹುದು ಹೀಗೆ ಚಿಕ್ಕ ಚಿಕ್ಕ ಉದ್ಯಮವನ್ನು ಶುರು ಮಾಡಲು ಲೋನ್ ಪಡೆಯಬಹುದು.
ಈ ಯೋಜನೆಯನ್ನು ಸೆಂಟ್ರಲ್ ಗವರ್ನಮೆಂಟ್ ಮಾಡುವುದರಿಂದ ಈ ಯೋಜನೆಯ ಲೋನ್ ಅನ್ನು ನೀವು ಎಲ್ಲ ಬ್ಯಾಂಕಿನಲ್ಲಿ ಪಡೆಯಬಹುದು. ಇದು ಕೇವಲ 10-15 ದಿನಗಳಲ್ಲಿ ನಿಮಗೆ ಹಣ ಸಿಗುತ್ತದೆ. ಈ ಲೋನ್ ರಿಪೇ ಮಾಡುವುದಕ್ಕೆ ನಿಮಗೆ ಐದು ವರ್ಷದವರೆಗೆ ಸಮಯಾವಕಾಶ ನೀಡಲಾಗುತ್ತದೆ. ಜೊತೆಗೆ ಈ ಲೋನ್ ಪಡೆಯಲು ನಿಮಗೆ ಕನಿಷ್ಠ 18 ವರ್ಷ ಆಗಿದ್ದು 65 ವರ್ಷದ ಒಳಗಡೆ ನೀವು ವಯೋಮಿತಿಯನ್ನು ಹೊಂದಿರಬೇಕು.
ಕೆಲವು ಬ್ಯಾಂಕ್ ಗಳು ಈ ಅರ್ಜಿಯನ್ನು ಪಡೆದುಕೊಳ್ಳುವಾಗ ಹಣವನ್ನು ಪಡೆಯುತ್ತಾರೆ ಕೆಲವು ಬ್ಯಾಂಕ್ ಪಡೆಯುವುದಿಲ್ಲ. ಹಾಗಾದ್ರೆ ಬನ್ನಿ ಇದಕ್ಕೆ ಬೇಕಾದ ಡಾಕ್ಯುಮೆಂಟ್ ಅನ್ನು ತಿಳಿಯೋಣ. ಪ್ರಧಾನ ಮಂತ್ರಿ ಮುದ್ರಾ ಲೋನ್ ಯೋಜನೆಯಲ್ಲಿ ಬರುವ ಶಿಶು ಸ್ಕೀಮ್ ನಲ್ಲಿ ನೀವು ಲೋನ್ ಪಡೆಯುತ್ತಿದ್ದರೆ ನೀವು ಆಧಾರ ಕಾರ್ಡ್ ವೋಟರ್ ಐಡಿ ರೆಸಿಡೆನ್ಸಿ ಪ್ರೂಫ್ ಯಾವುದಕ್ಕೆ ನೀವು ಲೋನ್ ತೆಗೆದುಕೊಳ್ಳಲು ಬಯಸುವಿರಿ ಅದನ್ನು ಲಗತ್ತಿಸಬೇಕು ಫೋಟೋ ಮತ್ತು ಬಿಜಿನೆಸ್ ವಿಳಾಸ, ಜಾತಿ ಪ್ರಮಾಣ ಪತ್ರ ಇನ್ನಿತರ ಪ್ರೂಫ್ ಅನ್ನು ಹಚ್ಚಿ ಕೊಡಬೇಕು.
ಶಿಶು ಲೋನ್ ಪಡೆಯಲು ನಿಮಗೆ ಯಾವುದೇ ಫೀಸ್ ಕಟ್ಟಬೇಕಾದ ಅವಶ್ಯಕತೆ ಇಲ್ಲ. ಎರಡನೆಯದು ಮತ್ತು ಮೂರನೆಯ ಸ್ಕೀಮ್ ಗೆ ಒಂದೇ ಬಗೆಯ ಅರ್ಜಿ ಇರುತ್ತದೆ. ಇದರಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ನೀವು ತುಂಬಬೇಕು. ಇದಕ್ಕೆ ಬೇಕಾದ ಡಾಕ್ಯುಮೆಂಟ್ ಅಂದ್ರೆ ನೀವು ಬ್ಯಾಂಕ್ ನಿಂದ ಅರ್ಜಿಯನ್ನು ತುಂಬುವಾಗ ಅದರ ಹಿಂದೆ ಬರೆದಿರುವ ಡಾಕ್ಯುಮೆಂಟ್ ಅನ್ನು ಲಗತ್ತಿಸಿ ಬ್ಯಾಂಕ್ ನಲ್ಲಿ ನೀಡಬೇಕು. ಕೇವಲ 10-15 ದಿನಗಳಲ್ಲಿ ನಿಮಗೆ ಲೋನ್ ಸಾಂಕ್ಷನ್ ಆಗುತ್ತದೆ. ನೀವು ಸುಲಭವಾಗಿ ನಿಮ್ಮ ಚಿಕ್ಕ ಉದ್ಯಮವನ್ನು ಶುರು ಮಾಡಬಹುದು.