ನಮಸ್ತೆ ಪ್ರಿಯ ಓದುಗರೇ, ಕಾಲ್ಗೆಜ್ಜೆ ಮತ್ತು ಕಾಲುಂಗುರ ಮಹಿಳೆಯರ ಹದಿನಾರು ಶೃಂಗಾರ ಸಾಧನಗಳಲ್ಲಿ ಒಂದಾಗಿದೆ. ಮಹಿಳೆಯರ ಸೌಂದರ್ಯ ಮತ್ತು ಅವರ ಆರೋಗ್ಯವನ್ನು ಮುಮ್ಮಡಿಗೊಳಿಸುವಲ್ಲಿ ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಕಾಲ್ಗೆಜ್ಜೆ ಅಂದ್ರೆ ತುಂಬಾನೇ ಇಷ್ಟ ಇನ್ನೂ ಕಾಲುಂಗುರ ಮದುವೆ ಆದ ಹೆಣ್ಣು ಮಕ್ಕಳಿಗೆ ಶೋಭೆಯನ್ನು ತರುತ್ತದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಾಲ್ಗೆಜ್ಜೆ ಮತ್ತು ಕಾಲುಂಗುರ ವಿವಿಧ ವಿನ್ಯಾಸ ಅಥವಾ ಡಿಸೈನ್ ನಲ್ಲಿ ದೊರೆಯುತ್ತವೆ.
ಇದೇ ಕಾರಣದಿಂದ ಎಲ್ಲರೂ ಇದರತ್ತ ಆಕರ್ಷಣೆಯನ್ನು ಹೊಂದುತ್ತಾರೆ. ಕಾಲ್ಗೆಜ್ಜೆ ಮತ್ತು ಕಾಲುಂಗುರ ಧರಿಸುವುದರಿಂದ ಆಗುವ ಆರೋಗ್ಯಕರ ಲಾಭಗಳು ಯಾವುದೆಂದು ಎಳೆ ಎಳೆಯಾಗಿ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಸ್ವಲ್ಪ ಸಮಯವಿದ್ದರೆ ಈ ಮಾಹಿತಿಯನ್ನು ಕೊನೆವರೆಗೂ ಓದಿ.
ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಹಿರಿಯರು ಮೊದಲಿನ ಕಾಲದಿಂದಲೂ ಈ ಕಾಲುಂಗುರ ಮತ್ತು ಗೆಜ್ಜೆಯನ್ನು ಹಾಕಿಕೊಳ್ಳುತ್ತಿದ್ದರು ಇದರ ಮುಖ್ಯ ಉದ್ದೇಶ ಏನೆಂದರೆ ಸಾಮಾನ್ಯವಾಗಿ ಗಂಡು ಮಕ್ಕಳು ಸಹಜವಾಗಿ ಮಾತನಾಡುತ್ತಾರೆ ಅಥವಾ ಕೋಪದಿಂದ ಬೈಗುಳಗಳನ್ನು ಬೈಯುತ್ತಾರೆ. ಅಂಥಹ ಸಮಯದಲ್ಲಿ ಹೆಣ್ಣಿನ ಈ ಕಾಲುಂಗುರ ಮತ್ತು ಗೆಜ್ಜೆ ಶಬ್ದವನ್ನು ಕೇಳಿ ಅವರು ಸುಮ್ಮನೆ ಆಗುತ್ತಾರೆ. ಇದರ ಅರ್ಥ ಅವರು ಎಷ್ಟೊಂದು ಹೆಣ್ಣಿಗೆ ಗೌರವ ಕೊಡುತ್ತಿದ್ದರು ಅಂತ ಇದಕ್ಕೆ ಮೂಲ ಕಾರಣ ಕಾಲುಂಗುರ ಮತ್ತು ಗೆಜ್ಜೆ ನಾದವೇ ಕಾರಣ ಅಂತ ಹೇಳಿದರೆ ತಪ್ಪಾಗಲಾರದು.
ಹಾಗೆಯೇ ಈ ಕಾಲುಂಗುರ ಮತ್ತು ಗೆಜ್ಜೆ ಧರಿಸುವುದರಿಂದ ಆಕೆಯು ಇನ್ನೊಬ್ಬರ ಅರ್ಧಾಂಗಿ ಅಂತ ಬೇರೆ ಗಂಡು ತಿಳಿದುಕೊಂಡು ಆಕೆಯನ್ನು ಕೆಟ್ಟ ದೃಷ್ಟಿ ಇಂದ ನೋಡುವುದಿಲ್ಲ. ಅಷ್ಟೊಂದು ಪವಿತ್ರತೆ ಅಷ್ಟೊಂದು ಮಹತ್ವವನ್ನು ಹೊಂದಿದೆ. ಈ ಕಾಲುಂಗುರ ಮತ್ತು ಗೆಜ್ಜೆ ಅದಕ್ಕಾಗಿ ಹಿರಿಯರು ಈ ಪದ್ಧತಿಯನ್ನು ರೂಢಿಯಲ್ಲಿ ಜಾರಿಗೆ ತಂದಿದ್ದಾರೆ.
ಜೊತೆಗೆ ಇದು ಆರೋಗ್ಯಕರವಾಗಿ ಕೂಡ ತುಂಬಾನೇ ಸಹಾಯ ಮಾಡುತ್ತದೆ. ಮೊದಲಿಗೆ ಇದು ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಬೆನ್ನು ಮೂಳೆಗಳ ನೋವಿನಿಂದ ರಕ್ಷಣೆಯನ್ನು ಮಾಡುತ್ತದೆ. ದೇಹದಲ್ಲಿ ಇರುವ ನರಮಂಡಲವನ್ನು ಸಧೃಡ ಮಾಡುತ್ತದೆ. ಹಾಗೆಯೇ ಮಹಿಳೆಯರ ಋತುಚಕ್ರ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವನ್ನು ಹೋಗಲಾಡಿಸಲು ಸಹಕಾರಿ ಆಗಿದೆ. ಮಹಿಳೆಯರು ಬೆಳ್ಳಿಯ ಕಾಲ್ಗೆಜ್ಜೆ ಕಾಲುಂಗುರ ಧರಿಸುವುದರಿಂದ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ.
ಇದರಿಂದ ಕಾಲುಗಳಲ್ಲಿ ಉಂಟಾಗುವ ಉರಿಯೂತವನ್ನು ಕೂಡ ಕಡಿಮೆ ಮಾಡುತ್ತದೆ. ಮತ್ತು ದೇಹದಲ್ಲಿ ಇಮ್ಯುಣಿಟಿ ಪವರ್ ಹೆಚ್ಚಿಸುತ್ತದೆ. ಮುಟ್ಟಿನ ಸಮಸ್ಯೆ, ಹಾರ್ಮೋನ್ ಗಳ ಏರುಪೇರು, ಬಂಜೆತನ ಸಮಸ್ಯೆ ಎಲ್ಲ ಸಮಸ್ಯೆಗಳನ್ನು ಕಾಲ್ಗೆಜ್ಜೆ ಮತ್ತು ಕಾಲುಂಗುರ ಧರಿಸುವುದರಿಂದ ಹೋಗಲಾಡಿಸಬಹುದು. ಅಷ್ಟೇ ಅಲ್ಲದೇ ಈ ಗೆಜ್ಜೆ ನಾದ ವಾತಾವರಣವನ್ನೂ ಶುದ್ಧವಾಗಿ ಪವಿತ್ರವಾಗಿ ಇರಿಸುತ್ತದೆ. ಕಾಲ್ಗೆಜ್ಜೆ ಮತ್ತು ಕಾಲುಂಗುರವನ್ನು ಧರಿಸುವುದರಿಂದ ದೇವಾನು ದೇವತೆಗಳು ಆಕರ್ಷಿತವಾಗಿ ನಮಗೆ ಆಶೀರ್ವಾದವನ್ನು ನೀಡುತ್ತಾರೆ.
ಇನ್ನು ಕಾಲಿಗೆ ಬೆಳ್ಳಿ ಕಾಲುಂಗರ ಹಾಗೂ ಗೆಜ್ಜೆ ಧರಿಸುವ ಹೆಣ್ಣುಮಕ್ಕಳು ಸದಾ ಆರೋಗ್ಯವಾಗಿರುತ್ತಾರೆ. ಇದು ನಮ್ಮ ಸಂಪ್ರದಾಯ ಆಗಿದ್ದು ಇದರಿಂದ ಆಗುವ ಹಲವಾರು ಪ್ರಯೋಜನಗಳ ಬಗ್ಗೆ ತಿಳಿದುಕೊಂಡು ನಾವು ಬಳಕೆ ಮಾಡಬೇಕು ಅದುವೇ ಆರೋಗ್ಯವಾಗಿ ವೈಜ್ಞಾನಿಕವಾಗಿ ಸಾಂಪ್ರದಾಯಕವಾಗಿ. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.