ನಮಸ್ತೆ ಪ್ರಿಯ ಮಿತ್ರರೇ, ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಒಂದಲ್ಲ ಒಂದು ಬಾರಿಯಾದರೂ ಹಲ್ಲು ನೋವಿನಿಂದ ಬಾಧೆಯನ್ನು ಪಟ್ಟಿರುತ್ತಾರೆ. ಈ ಹಲ್ಲು ನೋವಿನ ಸಮಸ್ಯೆ ಅನ್ನುವುದು ಸಾಮಾನ್ಯವಾಗಿ ನಾವು ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದಾಗ ಹಲ್ಲುಗಳ ನೋವು ಕಾಣಿಸುತ್ತದೆ ಜೊತೆಗೆ ವೈದ್ಯರು ಹೇಳುವ ಹಾಗೆ ದಿನದಲ್ಲಿ ಎರಡು ಬಾರಿ ಹಲ್ಲನ್ನು ನಾವು ಸ್ವಚ್ಛ ಗೊಳಿಸಬೇಕು ಅಂತ.
ಆದರೆ ಇದನ್ನು ಯಾರು ಅನುಸರಣೆ ಮಾಡುವುದಿಲ್ಲವೋ ಅವರು ಖಂಡಿತವಾಗಿ ಹಲ್ಲು ನೋವಿನ ಬಾಧೆಯನ್ನು ಪಡಲೇಬೇಕು ಏಕೆಂದರೆ ರಾತ್ರಿ ಹೊತ್ತು ಊಟವನ್ನು ಮಾಡಿ ಹಲ್ಲುಗಳನ್ನು ಸ್ವಚ್ಛಗೊಳಿಸದೆ ರಾತ್ರಿ ಹೊತ್ತು ಆಹಾರದ ಕಣಗಳು ಹಲ್ಲಿನಲ್ಲಿ ಉಳಿದುಕೊಂಡು ಹಲ್ಲುಗಳ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುವಲ್ಲಿ ಸಂದೇಹವಿಲ್ಲ. ಈ ಹಲ್ಲು ನೋವು ಏನಾದರೂ ಬೇರಿನ ಬುಡಕ್ಕೆ ತಗುಲಿದರೆ ತೀವ್ರವಾದ ನೋವನ್ನು ಅನುಭವಿಸಬೇಕಾಗುತ್ತದೆ.
ಅಷ್ಟೇ ಅಲ್ಲದೇ ಇದನ್ನು ನಾವು ನಿರ್ಲಕ್ಷ್ಯ ಮಾಡದೇ ವೈದ್ಯರ ಹತ್ತಿರ ಸಲಹೆ ಮೇರೆಗೆ ತಪಾಸಣೆಯನ್ನು ಮಾಡಿಕೊಳ್ಳಬೇಕು. ಆದರೆ ನಾವು ನಿಮಗೆ ಇಂದಿನ ಲೇಖನದ ಮೂಲಕ ಹಲ್ಲು ನೋವು ಕಾಣಿಸಿಕೊಂಡರೆ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಮನೆಮದ್ದು ತಯಾರಿಸಿ ಸೇವನೆ ಮಾಡಿ ಹಲ್ಲು ನೋವು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಅಂತ ತಿಳಿಸಿ ಕೊಡುತ್ತೇವೆ. ಹಾಗಾದರೆ ಬನ್ನಿ ಮನೆಮದ್ದು ತಿಳಿಯೋಣ. ಹಲ್ಲು ನೋವು ಕಾಣಿಸಿಕೊಂಡರೆ ಅದು ತಕ್ಷಣವೇ ಕಡಿಮೆ ಆಗುವುದಿಲ್ಲ. ಹೀಗಾಗಿ ನೀವು ಈ ಮನೆಮದ್ದು ತಯಾರಿಸಿ ಕುಡಿಯಿರಿ.
ಮೊದಲಿಗೆ ಒಂದು ಲೋಟ ನೀರು ತೆಗೆದುಕೊಳ್ಳಿ. ಅದರಲ್ಲಿ ಒಂದು ಅರ್ಧ ಇಂಚು ಪಟಿಕವನ್ನು ಹಾಕಿ. ಈ ಪಟಿಕ ಅನ್ನುವುದು ಸಾಮಾನ್ಯವಾಗಿ ಆಯುರ್ವೇದ ಅಂಗಡಿಯಲ್ಲಿ ದೊರೆಯುತ್ತದೆ. ಇದನ್ನು ಚೆನ್ನಾಗಿ ನೀರಿನಲ್ಲಿ 20-30 ಸೆಕೆಂಡ್ಸ್ ವರೆಗೆ ಹಾಗೆ ಬಿಡಿ. ನಂತರ ಈ ನೀರನ್ನು ನೀವು ಬಾಯಲ್ಲಿ ಹಾಕಿ ಮೂವತ್ತು ಸೆಕೆಂಡ್ಸ್ ಗಳವರೆಗೆ ಹಾಕಿ ಚೆನ್ನಾಗಿ ಮುಕ್ಕಳಿಸಬೇಕು. ಅದನ್ನು ನುಂಗಬಾರದು ಚೆನ್ನಾಗಿ ಮುಕ್ಕಳಿಸಿ ಉಗಿಯಬೇಕು. ಈ ರೀತಿ ಮೂರು ಬಾರಿ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಬಾಯಿಯಲ್ಲಿ ಅಡಗಿರುವ ಬ್ಯಾಕ್ಟೀರಿಯಾ ಹೊರಗೆ ಹೋಗುತ್ತದೆ.
ಜೊತೆಗೆ ಹಲ್ಲುಗಳಲ್ಲಿ ನೋವು ಕಾಣಿಸಿಕೊಂಡಿದ್ದಲ್ಲಿ ನೋವು ಉಪಶಮನ ಆಗುತ್ತದೆ. ಈ ಪಟಿಕದಲ್ಲಿ ಇರುವ ಆಂಟಿ ಸೆಪ್ಟಿಕ್ ಗುಣಗಳು ಬಾಯಿಯಲ್ಲಿ ಅಡಗಿರುವ ಬ್ಯಾಕ್ಟೀರಿಯಾ ಅನ್ನು ಹೊರ ಹಾಕಲು ತುಂಬಾನೇ ಅತ್ಯದ್ಭುತವಾಗಿ ಸಹಾಯ ಮಾಡುತ್ತದೆ. ಈ ರೀತಿಯಾಗಿ ಈ ನೀರು ಉಪಯೋಗ ಮಾಡುವುದರಿಂದ ಹಲ್ಲು ನೋವು ತಕ್ಷಣವೇ ಕಡಿಮೆ ಆಗುತ್ತದೆ. ಪಟಿಕವನ್ನು ಸೇವನೆ ಮಾಡುವುದರಿಂದ ಏನಾದರೂ ಅಡ್ಡ ಪರಿಣಾಮಗಳೂ ಬೀರುತ್ತದೆ ಅಂತ ತಪ್ಪು ಕಲ್ಪನೆ ಬೇಡ ಮಿತ್ರರೇ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ.
ಹಾಗೆಯೇ ನಿಮಗೆ ಕೇವಲ ಹಲ್ಲು ನೋವು ಬಂದಾಗ ಮಾತ್ರ ಈ ಮನೆಮದ್ದು ಬಳಕೆ ಮಾಡುವುದಲ್ಲದೆ ಹತ್ತು ದಿನಕ್ಕೆ ಒಮ್ಮೆಯಾದರೂ ಈ ರೀತಿ ನೀರು ಮಾಡಿ ಬಾಯಿ ಮುಕ್ಕಳಿಸಿದರೆ ನಿಮ್ಮ ಹಲ್ಲುಗಳು ನೋವಿನಿಂದ ಬಾಧೆಯನ್ನು ಪಡುವ ಅಗತ್ಯವಿಲ್ಲ. ಹಾಗೆಯೇ ನಿಮ್ಮ ಹಲ್ಲುಗಳು ಒಸಡುಗಳು ಸದೃಢವಾಗುತ್ತದೆ. ಮತ್ತೆ ಯಾವತ್ತೂ ಹಲ್ಲು ನೋವು ಕಾಣುವುದು ಅಪರೂಪವಾಗುತ್ತದೆ. ಅಷ್ಟೇ ಅಲ್ಲದೇ ಇದು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ. ನೋಡಿದ್ರಲಾ ಹಲ್ಲು ನೋವಿಗೆ ಅದ್ಭುತವಾದ ಮನೆಮದ್ದು ಅಂತ ತುಂಬಾನೇ ಸರಳವಾದ ಸುಗಮವಾದ ಮನೆಮದ್ದು ಇದಾಗಿದೆ ಒಮ್ಮೆ ಬಳಕೆ ಮಾಡಿ.