ಬಿಸಿ ಬಿಸಿ ಒಂದು ಲೋಟ ಕಾಫಿ ಕುಡಿಯುವ ಸರಿ ಇರುತ್ತದೆ ಅದರಲ್ಲೂ ಕೆಲವರಿಗಂತು ಒಂದು ದಿನ ಕಾಫಿ ಕುಡಿಯದೆ ಹೋದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ ಇನ್ನು ಕೆಲವರಿಗಂತೂ ಬೆಳಗಿನ ಸಮಯದಲ್ಲಿ ಇಲ್ಲ ಎಂದರೆ ಮಧ್ಯಾಹ್ನದ ಸಮಯದಲ್ಲಿ ಬಿಸಿ ಬಿಸಿ ಕಾಫಿ ಕುಡಿದರೆ ತಲೆನೋವು ಕಾಡಲು ಶುರುವಾಗುತ್ತದೆ. ಹಾಗಾದರೆ ಈ ಒಂದು ಕಪ್ ಕಾಫಿಯಲ್ಲಿ ಅಂತ ಶಕ್ತಿ ಏನಿದೆ ಎಂದು ನೋಡುವುದಾದರೆ ಕಾಫಿಯಲ್ಲಿ ಕೆಫಿನ್ ಅಂಶ ಯಥೇಚ್ಛವಾಗಿ ಕಂಡುಬರುತ್ತದೆ.
ಇವು ಕೆಲವೊಂದು ಅರೋಗ್ಯ ಸಮಸ್ಯೆಗಳನ್ನು ನಮ್ಮ ಹತ್ತಿರಾನು ಬರದೇ ಇರುವ ಹಾಗೆ ನೋಡಿಕೊಳ್ಳುತ್ತವೆ. ಆದರೆ ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು ಅಷ್ಟೇ, ಹಾಗಾದರೆ ಕಾಫಿ ಕುಡಿಯುವ ಕೆಲವೊಂದು ಆರೋಗ್ಯ ಪ್ರಯೋಜನಗಳ ಬಗ್ಗೆ ನೋಡೋಣ ಬನ್ನಿ. ಸಂಶೋಧನೆ ಹೇಳುವಂತೆ ದಿನ ಬಂದು ಅಥವಾ ಎರಡು ಕಾಫಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಶೇಕಡ 40ರಷ್ಟು ಲಿವರ್ ಕ್ಯಾನ್ಸರ್ ಸಮಸ್ಯೆ ಕಾಡುವ ಸಾಧ್ಯತೆ ಕಡಿಮೆ ಇರುತ್ತದೆ.
ಹೀಗಾಗಿ ದೇಹದ ಪ್ರಮುಖ ಅಂಗವಾದ ಲಿವರ್ ಆರೋಗ್ಯವಾಗಿ ಇರಬೇಕೆಂದರೆ ದಿನಕ್ಕೆ ಕನಿಷ್ಠಪಕ್ಷ ಒಂದು ಬಾರಿ ಆದರೂ ಕಾಫಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಆಹಾರ ಸೇವನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಹಾಗೂ ಹೆಚ್ಚು ತಿನ್ನಬೇಕೆಂಬ ಬಯಕೆಗೆ ಕಡಿವಾಣ ಹಾಕುತ್ತದೆ. ಸುಧಾರಿತ ಚಯಾಪಚಯ ಕ್ರಿಯೆಯು ತೂಕ ಇಳಿಕೆಗೆ ಕಾರಣವಾಗುತ್ತದೆ.ತೂಕ ಇಳಿಕೆಯಲ್ಲಿ ಗರಿಷ್ಠವಾಗಿ ಕಾರ್ಯನಿರ್ವಹಿಸುವುದರಿಂದ ತೂಕ ಇಳಿಕೆ ಖಂಡಿತವಾಗಿ ಆಗುತ್ತದೆ ಎಂದು ಸಾಬೀತುಪಡಿಸಲಾಗಿದೆ.
ಅಷ್ಟೇ ಅಲ್ಲದೆ ಆರೋಗ್ಯಕರವಾದ ಆಹಾರ ಪದ್ಧತಿ ಜೊತೆಗೆ ಸರಿಯಾದ ಜೀವನ ಶೈಲಿಯನ್ನು ಅನುಸರಿಸಿ ಇನ್ನು ಒಮ್ಮೆ ಹೆಚ್ಚಿಸಿಕೊಂಡ ತೂಕವನ್ನು ಮತ್ತೆ ಇಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಇದಕ್ಕೆ ತುಂಬಾ ಶ್ರಮ ವಹಿಸಬೇಕಾಗುತ್ತದೆ ಇಲ್ಲವಾದಲ್ಲಿ ಅವರಿಗೆ ಖಂಡಿತವಾಗಿಯೂ ತೂಕ ಇಳಿಸಲು ಆಗದು. ಮೊಟ್ಟಮೊದಲು ತೂಕ ಇಳಿಸಿಕೊಳ್ಳಲು ಬಯಸುವವರು ಕಟ್ಟುನಿಟ್ಟಿನ ಆರೋಗ್ಯಕಾರಿ ಆಹಾರ ಕ್ರಮ ವ್ಯಾಯಾಮವನ್ನು ಸರಿಯಾಗಿ ಅನುಸರಿಸಬೇಕು ಇದರ ಜೊತೆಗೆ ಪ್ರತಿದಿನ ಒಂದು ಕಪ್ ಸಕ್ಕರೆ ಬೆರೆಸಿದ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.
ಪ್ರಮುಖವಾಗಿ ಕಾಫಿಯಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶ ಇರುವುದರಿಂದ ದೇಹದ ತೂಕ ಇಳಿಸಲು ಇದು ಸಹಕಾರಿಯಾಗಿದೆ. ಇನ್ನು ಮಧುಮೇಹ ರೋಗಿಗಳು ತಮ್ಮ ಆಹಾರ ಪದ್ಧತಿಯಲ್ಲಿ ಎಷ್ಟು ಜಾಗರೂಕತೆ ವಹಿಸುತ್ತಾರೆ ಅಷ್ಟು ಒಳ್ಳೆಯದು. ಹೀಗಾಗಿ ಆದಷ್ಟು ಆರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಪಾನೀಯಗಳನ್ನು ಸೇವನೆ ಮಾಡಬೇಕು. ಇನ್ನು ಮುಂಜಾನೆ ಟೀ ಕಾಫಿ ಕುಡಿಯುವ ವಿಚಾರದಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕು ಯಾವುದೇ ಕಾರಣಕ್ಕೂ ಕೂಡ ಸಕ್ಕರೆ ಬೆರೆಸದ ಟೀ ಅಥವಾ ಕಾಫಿ ಕುಡಿದರೆ ಒಳ್ಳೆಯದು.
ಇನ್ನೂ ಒಂದು ಅಧ್ಯಯನದ ವರದಿಯ ಪ್ರಕಾರ ಕಾಫಿಯಲ್ಲಿ ಸಿಗುವ ಕೆಫಿನ್ ಅಂಶ ತನ್ನ ಆಂಟಿ ಆಕ್ಸಿಡೆಂಟ್ ಹಾಗೂ ಮ್ಯಾಗ್ನಿಸಿಯಂ ಅಂಶದ ಪ್ರಮಾಣದಿಂದ ಸಕ್ಕರೆ ಕಾಯಿಲೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆಯಂತೆ. ಕಾಫಿಯು ಕ್ಯಾಲೊರಿ ಬರ್ನ್ ಮಾಡಿ ಹಸಿವನ್ನು ನಿಗ್ರಹಿಸುತ್ತದೆ. ಹಾಗೆಯೇ, ಹೆಚ್ಚು ತಿನ್ನಬೇಕೆಂಬ ಬಯಕೆಗೆ ಕಡಿವಾಣವನ್ನು ಹಾಕುತ್ತದೆ ಎಂಬುದಾಗಿ ಈ ವರದಿ ತಿಳಿಸಿದೆ. ಹಸಿರು ಕಾಫಿ ಬೀಜ ಹಾಗೂ ಹುರಿದ ಕಾಫಿ ಬೀಜಗಳಲ್ಲಿರುವ ನೈಸರ್ಗಿಕವಾಗಿ ಆಮ್ಲಗಳಾಗಿ ಕಂಡುಬರುತ್ತದೆ.