ವೀಕ್ಷಕರೆ ಮಜ್ಜಿಗೆ ಭೂಲೋಕದ ಅಮೃತ ಇದ್ದಹಾಗೆ ಎಷ್ಟು ವರ್ಷಗಳಿಂದ ನಾವು ಮಜ್ಜಿಗೆಯನ್ನು ಕುಡಿಯುತ್ತಾ ಬಂದಿದ್ದೇವೆ ಎಷ್ಟೋ ಸಲ ಮದುವೆಗೆ ಹೋದಾಗ ಊಟದ ನಂತರ ಮಜ್ಜಿಗೆಯನ್ನು ಸೇವನೆ ಮಾಡದೆ ಇದ್ದರೆ ಆ ಊಟ ಅಪೂರ್ಣ ವೆನಿಸುತ್ತದೆ. ಮಜ್ಜಿಗೆ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ ಮಜ್ಜಿಗೆ ಕೇವಲ ಆಹಾರ ಪದಾರ್ಥವಲ್ಲ ಔಷಧೀಯ ಗುಣಗಳು ಇವೆ. ಮಜ್ಜಿಗೆ ಎನ್ನುವುದು ಮಾನವನ ದೇಹಕ್ಕೆ ಅಮೃತದ ಸಮ ಎಂದರೆ ತಪ್ಪಾಗುವುದಿಲ್ಲ.
ಬನ್ನಿ ಊಟದ ನಂತರ ಮಜ್ಜಿಗೆಯನ್ನು ಕುಡಿದರೆ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಎನ್ನುವುದರ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ. ಮೊದಲನೆಯದಾಗಿ ಮಜ್ಜಿಗೆಯಲ್ಲಿ ಯಾವೆಲ್ಲಾ ರೀತಿಯ ಪೌಷ್ಟಿಕಾಂಶಗಳಿವೆ ಎನ್ನುವುದಾದರೆ ಮಜ್ಜಿಗೆಯಲ್ಲಿ ಕ್ಯಾಲೋರಿ ಜೊತೆ ಪ್ರೋಟೀನ್ ಇದೆ ಕಾರ್ಬೋಹೈಡ್ರೇಟ್ ಇದೆ ಫ್ಯಾಟ್ ಇದೆ ಫೈಬರ್ ಇದೆ ಕ್ಯಾಲ್ಸಿಯಂ ಇದೆ ಸೋಡಿಯಂ ಇದೆ ಮತ್ತು ವಿಟಮಿನ್ b12 ಕೂಡ ಇದೆ ಇಷ್ಟೆಲ್ಲ ಪೌಷ್ಟಿಕಾಂಶಗಳನ್ನು ಒಳಗೊಂಡಿರುವಂತಹ ಮಜ್ಜಿಗೆಯನ್ನು ನಾವು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಮೂಳೆಗಳಿಗೆ ರಕ್ಷಣೆ ಸಿಗುತ್ತದೆ.
ಮಜ್ಜಿಗೆ ಯಲ್ಲಿ ಅಗತ್ಯವಾಗಿರುವಂತಹ ವಿಟಮಿನ್ ಡಿ ಹಾಗೂ ತಮ್ಮ ಪ್ರಮಾಣದ ಕ್ಯಾಲ್ಸಿಯಂ ಇರುವುದರಿಂದ ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ನಮ್ಮ ಮೂಳೆಗಳಿಗೆ ರಕ್ಷಣೆ ಸಿಗುತ್ತದೆ. ಇಂದು ನಮ್ಮ ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಾಗಬೇಕೆಂದರೆ ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗು ಸ್ವಲ್ಪ ಉಪ್ಪು ಬೆರೆಸಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ಜೀರ್ಣ ಶಕ್ತಿ ಹೆಚ್ಚಾಗುತ್ತದೆ ಇನ್ನು ಮಜ್ಜಿಗೆಯಲ್ಲಿ ಕಲ್ಲು ಸಕ್ಕರೆ ಅಥವಾ ಸಕ್ಕರೆಯನ್ನು ಬೆರೆಸಿ ಕುಡಿಯುವುದರಿಂದ ಪಿತ್ತ ದಿಂದ ಕಾಡುವ ಎದೆ ಉರಿ ಶಮನವಾಗುತ್ತದೆ.
ಮತ್ತು ಮಜ್ಜಿಗೆಯಲ್ಲಿ ಉಪ್ಪು ಹಾಗು ಹಸಿ ಶುಂಠಿ ರಸವನ್ನು ಬೆರೆಸಿ ಸೇವನೆ ಮಾಡುವುದರಿಂದ ವಾಂತಿ ಕೂಡ ಕಡಿಮೆಯಾಗುತ್ತದೆ. ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಗಳು ಅಧಿಕವಾಗಿರುತ್ತವೆ. ಮಜ್ಜಿಗೆಯಲ್ಲಿ ಇರುವಂತಹ ಕೆಲವೊಂದು ಅಂಶಗಳು ಜೈವಿಕ ಸಕ್ರಿಯ ಪ್ರೋಟೀನ್ ಗಳಿಂದ ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ನ್ನು ತಗ್ಗಿಸುವುದು ಮತ್ತು ಬ್ಯಾಕ್ಟೀರಿಯಾ ಹಾಗೂ ಸೋಂಕು ವಿರೋಧಿ ಗುಣಗಳನ್ನು ಹೊಂದಿದೆ. ನಿಯಮಿತವಾಗಿ ಮಜ್ಜಿಗೆ ಕುಡಿದರೆ ಅದರಿಂದ ರಕ್ತದೊತ್ತಡವು ಗಣನೀಯವಾಗಿ ಕಡಿಮೆ ಆಗಿರುವುದು ಅಧ್ಯಯನಗಳಿಂದಲೂ ಪತ್ತೆ ಆಗಿದೆ.
ಇದನ್ನು ಕುಡಿಯುವುದರಿಂದ ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತದೆ ಮತ್ತು ಅರ್ಧ ಲೋಟ ಮಜ್ಜಿಗೆಗೆ ಇಂಗು ಮತ್ತು ಉಪ್ಪು ಬೆರೆಸಿ ಕೊಡುವುದರಿಂದ ಕಡಿಮೆ ಹೊತ್ತಿನಲ್ಲಿ ಹೊಟ್ಟೆ ನೋವು ಕೂಡ ಕಡಿಮೆಯಾಗುತ್ತದೆ ಮಜ್ಜಿಗೆಯಲ್ಲಿರುವ ಪೊಟ್ಯಾಶಿಯಂ ಅಂಶವು ಸಹಾಯ ಮಾಡುತ್ತದೆ. ಹಾಗೂ ಇದರಲ್ಲಿ ಇರುವಂತ ಕ್ಯಾಲ್ಸಿಯಂ ಮತ್ತು ಉತ್ತಮವಾದ ನಮ್ಮ ಮೂಳೆಗಳಿಗೆ ಅಗತ್ಯ ಇರುವ ಶಕ್ತಿಯನ್ನು ಕೂಡ ನಿಯಂತ್ರಿಸುತ್ತದೆ. ರಕ್ತನಾಳಗಳಲ್ಲಿ ಲೇಪಿತವಾಗಿರುವಂತಹ ಕೊಬ್ಬಿನ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಹಾಗೂ ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ ಜಠರದ ತೀಕ್ಷ್ಣ ಸ್ನಾಯುವನ್ನು ಕೂಡ ಕಡಿಮೆ ಮಾಡುತ್ತದೆ.
ಇನ್ನು ಮಜ್ಜಿಗೆಯಲ್ಲಿ ಇರುವಂತಹ ಅತಿ ಹೆಚ್ಚು ಪೋಸ್ಟಕಾಂಶಗಳಿಂದನಮ್ಮ ದೇಹಕ್ಕೆ ಹಲವಾರು ರೀತಿಯಾದಂತಹ ಆರೋಗ್ಯ ಉಪಯೋಗಗಳು ಕೂಡ ಆಗುತ್ತವೆ. ನಿಯಮಿತವಾಗಿ ಮಜ್ಜಿಗೆ ಕುಡಿದರೆ ಅದರಿಂದ ರಕ್ತದೊತ್ತಡವು ಗಣನೀಯವಾಗಿ ಕಡಿಮೆ ಆಗಿರುವುದು ಇಂಥ ಮಾಹಿತಿ ವೈದ್ಯರಿಂದಲೂ ಕೂಡ ಕೇಳಲ್ಪಟ್ಟಿದೆ. ಹಾಗಾಗಿ ಕೇವಲ ಮಜ್ಜಿಗೆ ನಮ್ಮ ದೇಹಕ್ಕೆ ತಂಪನ್ನು ಕೂಡ ಕೊಡೋದಲ್ಲದೆ ಆರೋಗ್ಯದ ನೆಪದಲ್ಲಿ ಕೂಡ ಹಲವಾರು ರೀತಿಯಾದಂತಹ ಸಹಾಯ ಮಾಡುತ್ತದೆ.