ಕಲ್ಲು ಸಕ್ಕರೆಯ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಆದರೆ ಕಲ್ಲು ಸಕ್ಕರೆಯನ್ನು ಕೇವಲ ಸಿಹಿ ಪದಾರ್ಥವನ್ನಾಗಿ ಮತ್ತು ಸಿಹಿಯನ್ನು ತಯಾರಿಸಲು ಮಾತ್ರ ಬಳಸುವ ವಿಧಾನಗಳು ನಮ್ಮಲ್ಲಿ ತಿಳಿದಿದೆ ಮತ್ತು ಹೆಚ್ಚು ಪ್ರಚಲಿತವಾಗಿವೆ ಕಲ್ಲು ಸಕ್ಕರೆಯೂ ತುಂಬ ಪೋಷಕಾಂಶಗಳನ್ನು ಹೊಂದಿದ್ದು ನಿಮ್ಮ ಕೆಮ್ಮಿಗೆ ಉತ್ತಮ ಮನೆ ಮದ್ದು ಆಗಿದೆ . ನಮ್ಮ ದಿನನಿತ್ಯದಲ್ಲಿ ಸಾಮಾನ್ಯವಾಗಿ ಕಾಣುವಂತಹ ರೋಗವೆಂದರೆ ಅದು ಕೆಮ್ಮು ಅತಿ ಹೆಚ್ಚು ಕೆಮ್ಮು ತಾಳಲಾರದೆ ನಾವು ವೈದ್ಯರ ಹತ್ತಿರ ಹೋಗುತ್ತೇವೆ.
ಕಲ್ಲು ಸಕ್ಕರೆ ನಿಮ್ಮ ಗಂಟಲಿನಲ್ಲಿ ಸಂಗ್ರಹವಾಗಿರುವ ಲೋಳೆಯನ್ನು ತಡೆಯಗೊಳಿಸಲು ಸಹಾಯ ಮಾಡುತ್ತದೆ. ಮಿಶ್ರೀಯನ್ನು ಕರಿಯಲ್ಪಡುವ ಇದನ್ನು ನೀವು ಬಾಯ್ ಫ್ರೆಶ್ನರ್ ಎಂದು ತಿಳಿಯಬಹುದು. ಆದರೆ ಇದು ಹೆಚ್ಚಿನ ಪ್ರಯೋಜನಗಳನ್ನು ಕೂಡ ಹೊಂದಿದೆ ಅತ್ಯುತ್ತಮ ಜೀರ್ಣಕ್ರಿಯೆ ಹಿಮೋಗ್ಲೋಬಿನ್ ಮತ್ತು ಶಕ್ತಿ ವರ್ಧಕ ವಾಗಿರುವುದಲ್ಲದೆ ಇದು ಕೆಮ್ಮು ಮತ್ತು ಗಂಟಲಿನ ನೋವಿನಿಂದ ನಿಮ್ಮ ಸಮಸ್ಯೆಯನ್ನು ನಿವಾರಿಸುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಇದನ್ನು ಮಿಶ್ರಿ ಖಾದಿ ಶ ಕ್ಕರ್ ಮತ್ತು ರಾಕ್ ಕ್ಯಾಂಡಿ ಎಂದು ಕರೆಯಲಾಗುತ್ತದೆ.
ಆದಿಕಾಲದಲ್ಲಿ ಇದರ ಪ್ರಯೋಜನಗಳು ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿವೆ. ಇದು ಹೊಂದಿರುವ ಕೆಲವು ಪೋಷಕಾಂಶಗಳು ಕೆಮ್ಮಿಗೆ ಪರಿಹಾರವನ್ನು ನೀಡುತ್ತವೆ ಉಂಟಾಗುವ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಇದು ತ್ವರಿತವಾಗಿ ನಿಮಗೆ ಪರಿಹಾರವನ್ನು ನೀಡುತ್ತದೆ ನೀವೇನಾದರೂ ಕೆಮ್ಮಿಯ ಸಮಸ್ಯೆಯಿಂದ ಬಳಲುತ್ತಿದ್ದು ಇನ್ನು ನೀವು ಇದನ್ನು ಪ್ರಯತ್ನಿಸುತ್ತಿದ್ದರೆ ಸ್ವತಃ ಪರಿಹಾರಕ್ಕಾಗಿ ಬಳಸುವುದು ಹೇಗೆ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ.
ಮುಖ್ಯವಾಗಿ ಎರಡು ವಿಧದ ಕೆಮ್ಮುಗಳಿವೆ ಒಂದು ಉತ್ಪಾದಕ ಕೆಮ್ಮು ಅಥವಾ ಉತ್ಪಾದಕವಲ್ಲದ ಕೆಮ್ಮು ಉತ್ಪಾದಕ ಕೆಮ್ಮು ಲೋಳೆಯ ಅಥವಾ ಕಫವನ್ನು ಉತ್ಪಾದಿಸುತ್ತದೆ ಆದರೆ ಉತ್ಪಾದಕವಲ್ಲದ ಕೆಮ್ಮು ಯಾವುದೇ ರೀತಿಯ ಲೋಳೆಯನ್ನು ಉಂಟು ಮಾಡುವುದಿಲ್ಲ. ಕಲ್ಲು ಸಕ್ಕರೆ ಸಾಮಾನ್ಯವಾಗಿ ಉತ್ಪಾದಕ ಕೆಮ್ಮು ಇರುವವರಿಗೆ ಸಹಾಯಮಾಡುತ್ತದೆ. ಹಾಗಾಗಿ ನಿಮಗೆ ಕಾಡುವಂತಹ ಒಣ ಕೆಮ್ಮನ್ನು ಹೋಗಲಾಡಿಸಲು ಎರಡು ಮಿಶ್ರಣವನ್ನು ಸೇವಿಸಿದರೆ ನಿಮ್ಮ ಕೆಮ್ಮು ಆದಷ್ಟು ದೂರವಾಗಬಹುದು.
ನಿಮ್ಮ ಮೂಗಿನಿಂದ ರಕ್ತಸ್ರಾವವಾಗುವ ಸಮಸ್ಯೆಯಿದ್ದರೆ ಕಲ್ಲು ಸಕ್ಕರೆಯನ್ನು ಪ್ರತಿನಿತ್ಯ ಸೇವಿಸಿ. ಈ ಸಮಸ್ಯೆಗೆ ಕಲ್ಲು ಸಕ್ಕರೆ ಮೂಲಕ ತಕ್ಷಣ ಪರಿಹಾರ ಕೂಡ ಕಂಡುಕೊಳ್ಳಬಹುದು. ಕಲ್ಲು ಸಕ್ಕರೆಯ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಜೀರ್ಣಕಾರಿ ಗುಣಗಳಿದ್ದು, ಇದರಿಂದ ಆಹಾರ ತ್ವರಿತವಾಗಿ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಆದ್ದರಿಂದ ಆಹಾರವನ್ನು ಸೇವಿಸಿದ ಬಳಿಕ, ಖಂಡಿತವಾಗಿಯೂ ಕಲ್ಲು ಸಕ್ಕರೆ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ಕಲ್ಲು ಸಕ್ಕರೆಯಲ್ಲಿ ಹೆಚ್ಚಿನ ಪ್ರಮಾಣದ ಶಕ್ತಿಯ ಅಂಶವಿದೆ ಎಂದು ಹೇಳುತ್ತಾರೆ.
ಇದರಿಂದ ನಿಮ್ಮ ದೇಹಕ್ಕೆ ಹೊಸ ಚೈತನ್ಯ ಸಿಕ್ಕಿದಂತಾಗಿ, ನಿಮ್ಮ ಮಾನಸಿಕ ಆರೋಗ್ಯ ಸಹ ಉತ್ತಮಗೊಂಡು ಮನಸ್ಸು ಮತ್ತು ದೇಹ ಸದಾ ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಆದಷ್ಟು ಕಲ್ಲು ಸಕ್ಕರೆ ತಿಂದರೆ ನಂತರ ಮೆಣಸಿನ ಕಾಳು ಸೇವಿಸಿದ ರಿಂದ ನಿಮ್ಮ ಆರೋಗ್ಯದಲ್ಲಿ ಆದಷ್ಟು ಬೆಳವಣಿಗೆ ಕಂಡು ಬರುತ್ತದೆ, ಏಕೆಂದರೆ ಈ ಎರಡು ಪದಾರ್ಥಗಳು ನಮ್ಮ ಆರೋಗ್ಯದ ಮೇಲೆ ಅತಿ ಹೆಚ್ಚು ಪರಿಣಾಮವನ್ನು ಬೀಳುತ್ತದೆ ಹಾಗಾಗಿ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ ತೆಗೆದುಕೊಂಡರೆ ನಿಮ್ಮ ಕೆಮ್ಮು ಆದಷ್ಟು ಹೋಗಲಾಡಿಸಬಹುದು.