WhatsApp Group Join Now

ಕರ್ನಾಟಕದ ಎಲ್ಲಾ ರೈತರಿಗೂ ಬಸವರಾಜ್ ಬೊಮ್ಮಾಯಿ ಅಂದರೆ ಕರ್ನಾಟಕ ಸರ್ಕಾರ ವತಿಯಿಂದ ಖುಷಿ ಸುದ್ದಿಯನ್ನು ನೀಡಿದೆ. ರೈತರ ಬೆಳೆ ಹಾನಿಗೆ ಈಗಾಗಲೇ ಒಂದು ಬಾರಿ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ಮತ್ತೊಮ್ಮೆ ಈಗ ಬೆಳೆ ನಷ್ಟ ಹಣ ಬಿಡುಗಡೆ ಮಾಡಲು ಸರ್ಕಾರ ಮುಂದೆ ಬಂದಿದೆ. ಸರ್ಕಾರದ ಪ್ರಕಾರ ಪ್ರತಿಯೊಬ್ಬ ರೈತರ ಖಾತೆಗೆ ಅಂದಾಜು 10000 ತನಕ ಹಣವನ್ನು ವರ್ಗಾವಣೆ ಮಾಡುತ್ತಿದ್ದಾರೆ ಎಂದು ತಿಳಿದ ಬಂದಿದೆ. ಯಾರ ಜಮೀನಲ್ಲಿ ಬೆಳೆ ನಷ್ಟ ಸಂಭವಿಸಿರುತ್ತದೆ ಅಂತ ರೈತರ ಖಾತೆಗೆ ನೇರವಾಗಿ ಹಣ ಬರುತ್ತದೆ.

ಮುಖ್ಯಮಂತ್ರಿ ಇದೆ ಫೆಬ್ರವರಿ ಒಂದರಂದು ಪ್ರತಿಯೊಬ್ಬ ರೈತರ ಖಾತೆಗೆ ಹತ್ತು ಸಾವಿರ ಹಣ ಬಿಡುಗಡೆ ಮಾಡಿದ್ದಾರೆ. ಬೆಳೆ ಸಮೀಕ್ಷೆ ಆಗಿದ್ದರೆ ಮಾತ್ರ ಈ ಹಣ ನಿಮ್ಮ ಖಾತೆಗೆ ಬರುತ್ತದೆ. ಇದರಿಂದ ರೈತರು ಬೆಳೆ ಸಮೀಕ್ಷೆ ಆಗಿದೆಯೋ ಅಥವಾ ಆಗಿರಲಿಲ್ಲವೆಂದರೆ ಆದಷ್ಟು ಬೇಗನೆ ಸಮೀಕ್ಷೆ ಮಾಡಿಸಬೇಕು ಎಂದು ಸರಕಾರ ಕೇಳಿಕೊಂಡಿದೆ. ಇದಕ್ಕೂ ಸುಲಭ ಮಾಡಿಕೊಟ್ಟಿರುವ ಕರ್ನಾಟಕ ಸರಕಾರ ನಿಮ್ಮ ಮೊಬೈಲ್ ಫೋನ್ನಲ್ಲಿ ಇರುವಂತಹ ಗೂಗಲ್ ಸ್ಟೋರ್ ಕರ್ನಾಟಕ ಬೆಳೆ ಸಮೀಕ್ಷೆ ಎಂಬ ಆಪನ್ನು ನಿಮ್ಮ ಫೋನ್ನಲ್ಲಿ ನೇರವಾಗಿ ಹಾಕಿಕೊಳ್ಳಿ.

ನಿಮ್ಮ ಬೆಳೆ ಸಮೀಕ್ಷೆ ಆಗಿದಿಯೋ ಅಥವಾ ಇಲ್ಲವೆಂದು ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವಂತಹ ವಿಡಿಯೋದಲ್ಲಿ ವಿಧಾನಗಳನ್ನು ತಿಳಿಸಲಾಗಿದೆ ಅದರಂತೆಯೇ ನೀವು ಪಾಲಿಸಿ ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಬೆಳೆ ಪರಿಹಾರ ಪಡೆದುಕೊಳ್ಳಲು ಅರ್ಹತೆ ಪಡೆದಿದ್ದಾರೆ ಅಥವಾ ಇಲ್ಲ ಎಂದು ತಿಳಿದುಕೊಳ್ಳೋಣ. ಕೆಲ ರೈತರು ಹಲವಾರು ಬಾರಿ ಅರ್ಜಿಯನ್ನು ಸಲ್ಲಿಸಿ, ತಪ್ಪುಗಳನ್ನು ಕೂಡ ಮಾಡಿದ್ದಾರೆ. ಇದರಿಂದ ಅರ್ಜಿಗಳು ವಜಾ ಗೊಂಡಿವೆ.

ಇದರಿಂದ ನಿಮ್ಮ ಅರ್ಜಿಯ ಸ್ಟೇಟಸ್ ನೋಡಲು ಮೊದಲನೆಯದಾಗಿ ವೆಬ್ ಸೈಟ್ ನಲ್ಲಿ ನೋಡಬಹುದು ಅಂದರೆ ಕರ್ನಾಟಕದ ವತಿಯಿಂದ ಮಾನ್ಯತೆ ಪಡೆದರು ಅಂತಹ ವೆಬ್ಸೈಟ್ ಅಥವಾ ಬೆಳೆ ಸಮೀಕ್ಷೆಯೆಂಬ ಆಪ್ ನಲ್ಲಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇದರಲ್ಲಿ ಸುಲಭವಾದದ್ದು ಅಪ್ಲಿಕೇಶನ್ ಮುಖಾಂತರ ತಿಳಿದುಕೊಳ್ಳಬಹುದು. ಇದನ್ನು ತಿಳಿದುಕೊಳ್ಳಲು ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋ ಒಮ್ಮೆ ವೀಕ್ಷಿಸಿ.

ಒಮ್ಮೆ ಗೊತ್ತಾದರೆ ನಿಮ್ಮ ಹೊಲದಲ್ಲಿ ಬೆಳೆಯುವಂತಹ ಬೆಳೆ GPRS ಆಗಿದಿಯೋ ಅಥವಾ ಆಗಿಲ್ಲವೆಂದು ಸಂಪೂರ್ಣವಾಗಿ ನೀವು ತಿಳಿದುಕೊಳ್ಳಬಹುದು. ಬೆಳೆ ಸಮೀಕ್ಷೆ ವಿಚಾರದಲ್ಲಿ ಯಾವುದೇ ರೀತಿಯಾದಂತಹ ರೈತರು ಕಷ್ಟಪಡಬಾರದು ಎಂದು ಕರ್ನಾಟಕದ ಸರ್ಕಾರ ವತಿಯಿಂದ ಈ ಅಪ್ಲಿಕೇಶನ್ ಅನ್ನು ಉದ್ಘಾಟನೆ ಮಾಡಿದ್ದಾರೆ ಆದ್ದರಿಂದ ಎಲ್ಲಾ ರೈತರು ಈ ಅಪ್ಲಿಕೇಶನ್ ನ ಸದುಪಯೋಗಪಡಿಸಿಕೊಂಡು ನಿಮ್ಮ ಬೆಳೆಹಾನಿಗೆ ತಕ್ಕ ಪರಿಹಾರವನ್ನು ಕಂಡುಕೊಳ್ಳಿ.

ಬೆಳೆ ಆಧಾರದ ಮೇಲೆ ಬೆಳೆ ಪರಿಹಾರವನ್ನು ನೀಡುತ್ತಿದ್ದು ಅದರಲ್ಲೂ ಮುಂಗಾರು ಮಳೆ ಪರಿಹಾರ ಹಾಗೆ ಹಿಂಗಾರು ಬೆಳೆ ಪರಿಹಾರ ಎರಡು ಮಳೆಯ ವಿಂಗಡಣೆಗಳನ್ನು ಮಾಡಿ ಅದಕ್ಕೆ ತಕ್ಕ ಹಾಗೆ ಪರಿಹಾರವನ್ನು ನೀಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಎರಡು ಬಾರಿ ಬೆಳೆನಾಶದ ಪರಿಹಾರವನ್ನು ಸರ್ಕಾರ ನೀಡುತ್ತಿರುತ್ತದೆ.

ರೈತರಿಗೆ ಸುಲಭವಾಗಿ ತಮ್ಮ ಬೆಳೆ ಪರಿಹಾರ ದೊರಕಬೇಕೆಂದು ಸರಕಾರದ ಮುಖ್ಯ ಆದೇಶವಾಗಿರುತ್ತದೆ ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಕೂಡ ಯಾವುದೇ ರೀತಿಯಾದಂತಹ ಅಡೆತಡೆ ಇಲ್ಲದೆ ಈ ಪರಿಹಾರದ ಕೆಲಸವನ್ನು ಆದಷ್ಟು ಬೇಗನೆ ಮುಗಿಸಬೇಕು ಎಂದು ಸರ್ಕಾರ ಆದೇಶ ಮಾಡಿದೆ ಆದರೆ ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳುಎ ಚ್ಚೆತ್ತಿಕೊಂಡು ರೈತರ ಕಷ್ಟಗಳಿಗೆ ಸ್ಪಂದಿಸಬೇಕು.

WhatsApp Group Join Now

Leave a Reply

Your email address will not be published. Required fields are marked *