ನಮಸ್ತೇ ಪ್ರಿಯ ಓದುಗರೇ ಇಂದಿನ ಲೇಖನದಲ್ಲಿ ಕಾಡು ಬಸಳೆ ಸೊಪ್ಪಿನ ಆರೋಗ್ಯಕರ ಲಾಭಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಕಾಡು ಬಸಳೆ ಸೊಪ್ಪು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಇದು ಶೀತ ದ್ರವ್ಯ ಅಂತ ಹೇಳಬಹುದು. ಹಾಗಾದರೆ ಬನ್ನಿ ಈ ಸೊಪ್ಪಿನ ಮೊದಲನೆಯ ಲಾಭ ನೋಡೋಣ. ಈ ಬಸಳೆ ಸೊಪ್ಪಿನ ಎಲೆಯ ಸೊರಸವನ್ನು ಮಾಡಬೇಕು. ಸೊರಸ ಅಂದರೆ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆಯಬೇಕು. ಹೀಗೆ ತೆಗೆದ ರಸವನ್ನು ಬೆಳೆಗ್ಗೆ ಖಾಲಿ ಹೊಟ್ಟೆಯಲ್ಲಿ 2-4 ಚಮಚ ರಸವನ್ನು ಸೇವಿಸಬೇಕು.
ಇದರಿಂದ ಮೂತ್ರಪಿಂಡದಲ್ಲಿ ಆಗುವ ಕಲ್ಲುಗಳು ಎಂದಿಗೂ ಉತ್ಪತ್ತಿ ಆಗುವುದಿಲ್ಲ. ಒಂದು ವೇಳೆ ಕಿಡ್ನಿ ಸ್ಟೋನ್ ಅಗಿದ್ದರೆ ಇಂಗಳ ಕಾಯಿ ಅಂತ ಸಿಗುತ್ತದೆ. ಅದರ ತಿರುಳನ್ನು ತೆಗೆದುಕೊಂಡು ಕಡಲೆ ಗಾತ್ರದಲ್ಲಿ ಉಂಡೆಗಳನ್ನು ಮಾಡಿ ಈ ಬಸಳೆ ಸೊಪ್ಪಿನ ಜೊತೆಗೆ ನಾಲ್ಕು ದಿನಗಳವರೆಗೆ ಮೂರು ಹೊತ್ತು ನಾಲ್ಕು ನಾಲ್ಕು ಉಂಡೆಗಳನ್ನು ಸೇವಿಸಬೇಕು. ಇದರಿಂದ ಕಿಡ್ನಿ ಸ್ಟೋನ್ ಒಪರೇಷನ್ ಮಾಡದೇ ಕರಗಿಸಿ ಕೊಳ್ಳಬಹುದು. ಬಸಳೆ ಸೊಪ್ಪಿನ ಪಲ್ಯ ಮಾಡಿ ಸೇವನೆ ಮಾಡುವುದರಿಂದ ರಕ್ತ ಶುದ್ಧೀಕರಣ ಆಗುತ್ತದೆ. ಹಾಗೂ ಪಿತ್ತವನ್ನು ನೈಸರ್ಗಿಕವಾಗಿ ಉಪಶಮನ ಮಾಡುವ ಗುಣಗಳನ್ನು ಹೊಂದಿದೆ.
ಇನ್ನೂ ನೀವು ಕಣ್ಣು ಉರಿ, ಮೂತ್ರ ಉರಿ ಸಮಸ್ಯೆಯಿಂದ ನರಳಾಡುತ್ತಿದ್ದರೆ ಈ ಬಸಳೆ ಸೊಪ್ಪನ್ನು ಎಳೆ ನೀರಿನ ಜೊತೆಗೆ ಸೇವಿಸಿ. ಇದರಿಂದ ಕಣ್ಣು ಉರಿ ಪಾದದ ಉರಿ, ಮೂತ್ರ ಉರಿ ಸಮಸ್ಯೆಗಳು ದೂರವಾಗುತ್ತವೆ. ಇನ್ನು ಬಾಯಿ ಹುಣ್ಣು ಆಗಿದ್ದರೆ ಎಳೆನೀರಿನಲ್ಲಿ ಈ ಬಸಳೆ ಸೊಪ್ಪಿನ ಒಂದೆರಡು ಹನಿ ಹಾಕಿ ಸ್ವಲ್ಪ ಸಕ್ಕರೆಯ ಜೊತೆಗೆ ಸೇವಿಸಬೇಕು. ತಕ್ಷಣವೇ ಬಾಯಿ ಹುಣ್ಣು ಸಮಸ್ಯೆ ದೂರವಾಗುತ್ತದೆ.
ನಿಮಗೇ ಗೊತ್ತೇ, ಇಂಗಳ ಕಾಯಿ ಜೊತೆಗೆ ಬಸಳೆ ಸೊಪ್ಪು ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ ಕಾಮಾಲೆ ಅಂದರೆ ಜಾಂಡೀಸ್ ರೋಗ ದೂರವಾಗುತ್ತದೆ. ಇನ್ನು ಈ ಬಸಳೆ ಸೊಪ್ಪು ಚೆನ್ನಾಗಿ ಜಜ್ಜಿ ಇದರ ಲೇಪನವನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಆಗಿರುವ ಕಪ್ಪು ಕಲೆಗಳು ಮೊಡವೆಗಳು, ಮಾಯವಾಗುತ್ತದೆ. ಇನ್ನೂ ಕೆಲವರಿಗೆ ಬೆವರು ತುಂಬಾ ಬರುತ್ತದೆ. ಇದರಿಂದ ಅವರ ದೇಹವೆಲ್ಲವೂ ತುಂಬಾನೇ ಕೆಟ್ಟದಾಗಿ ವಾಸನೆ ಬರುತ್ತದೆ.
ಇದಕ್ಕೆ ನೀವು ಬಸಳೆ ಸೊಪ್ಪನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಮಿಕ್ಸ್ ಮಾಡಬೇಕು. ಈ ಪೇಸ್ಟ್ ಅನ್ನು ಚೆನ್ನಾಗಿ ನಿಮ್ಮ ದೇಹವನ್ನೆಲ್ಲಾ ಸವರಿ ಚೆನ್ನಾಗಿ ಉಜ್ಜಿ ಮಸಾಜ್ ಮಾಡಿಕೊಳ್ಳಬೇಕು. ಹೀಗೆ ಉಜ್ಜಿ ಸ್ವಲ್ಪ ಸಮಯ ಸೂರ್ಯನ ಬಿಸಿಲಿಗೆ ಮೈ ಒಡ್ಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಅಥವಾ ತಣ್ಣೀರಿನಿಂದ ಮೈ ತೊಳೆದುಕೊಳ್ಳಬೇಕು.
ಇದರಿಂದ ದೇಹದ ದುರ್ಗಂಧ ಅಥವ ಬೆವರಿನ ವಾಸನೆ ಹಾಗೆಯೇ ಕಡಿಮೆ ಆಗುತ್ತದೆ. ಇನ್ನೂ ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗೂ ಅಸಿಡಿಟಿ ಕಾನ್ಸ್ಟಿಪೇಶನ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಈ ಬಸಳೆ ಸೊಪ್ಪನ್ನು ನೀವು ಹೇಗೆ ಬೇಕಾದರೂ ಉಪಯೋಗ ಮಾಡಬಹುದು, ಈ ಎಲೆಗಳ ಸಾಂಬಾರ್ ಮಾಡಬಹುದು, ಚಟ್ನಿ ಮಾಡಬಹುದು ಹಾಗೂ ಪಲ್ಯ ಮಾಡಿ ತಿನ್ನಬಹುದು. ಇದರಿಂದ ಪಿತ್ತ ನಿವಾರಕ ಆಗುವ ಎಲ್ಲ ಸಾಧ್ಯತೆಗಳಿರುತ್ತದೆ. ಒಂದು ಬಾರಿ ಈ ಸೊಪ್ಪನ್ನು ಬಳಕೆಮಾಡಿ ನೋಡಿ. ಖಂಡಿತವಾಗಿ ಒಳ್ಳೆಯ ಲಾಭವನ್ನು ಪಡೆಯುತ್ತೀರಿ.