ನಮಸ್ತೇ ಪ್ರಿಯ ಓದುಗರೇ, ನಮ್ಮ ಕಾರ್ನಾಟಕವು ಆಹಾರದಲ್ಲಿ ಉಡುಗೆ ತೊಡುಗೆಯಲ್ಲಿ ಹಾಗೂ ಕಲೆ ಭೂಷಣದಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಅದರಲ್ಲೂ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜನರು ಸ್ವಲ್ಪ ಆಡು ಭಾಷೆ ಆಹಾರ ಸೇವನೆ ಕೊಂಚ ಬೇರೆಯೇ ಆಗಿರುತ್ತದೆ. ಇನ್ನು ನಾವು ಉತ್ತರ ಕನ್ನಡ ಜನರ ಆಹಾರದ ಬಗ್ಗೆ ಕೊಂಚ ಅಧಿಕವಾಗಿ ಮಾತನಾಡುತ್ತಾ ಹೋದರೆ ಅವರ ಅಡುಗೆಯಲ್ಲಿ ಒಂದು ರೀತೀಯ ಸೊಗಸು ಮತ್ತೆ ಸೊಗಡು ಅಷ್ಟೇ ರೀತಿಯಾಗಿ ರುಚಿಯಂತೂ ಹೇಳಿ ಮಾಡಿಸಿರುವಂತೆ ಇರುತ್ತದೆ.
ಇಂದಿನ ಲೇಖನದಲ್ಲಿ ಒಂದು ಅದ್ಭುತವಾದ ಪಲ್ಯದ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ಅದುವೇ ಪುಂಡಿ ಪಲ್ಯ. ಈ ಪುಂಡಿ ಪಲ್ಯ ತಿನ್ನುವುದರಿಂದ ಆಗುವ ಲಾಭಗಳು ಮತ್ತು ಈ ಪಲ್ಯವನ್ನು ಯಾವ ವಿಧಾನದಲ್ಲಿ ಮಾಡಬೇಕು ಅಂತ ತಿಳಿಸಿ ಕೊಡುತ್ತೇವೆ. ಪುಂಡಿ ಪಲ್ಯ ಅಧಿಕವಾಗಿ ಉತ್ತರ ಕನ್ನಡದಲ್ಲಿ ಬೆಳೆಯುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ತುಂಬಾನೇ ಲಾಭವನ್ನು ಒದಗಿಸಿ ಕೊಡುತ್ತದೆ. ಪುಂಡಿ ಪಲ್ಯದಲ್ಲಿ ಅಧಿಕವಾಗಿ ನಾರಿನ ಅಂಶ ಇರುವುದರಿಂದ ಇದು ಉತ್ತಮವಾದ ಆರೋಗ್ಯಕ್ಕೆ ಸೂಕ್ತ.
ಹಾಗೆಯೇ ಈ ಪುಂಡಿ ಪಲ್ಯ ರೊಟ್ಟಿಯ ಜೊತೆಗೆ ಸವಿಯಲು ತುಂಬಾನೇ ಉತ್ತಮವಾದ ಕಾಂಬಿನೇಷನ್ ಅಂತ ಹೇಳಿದರೆ ತಪ್ಪಾಗಲಾರದು. ಪುಂಡಿ ಪಲ್ಯ ತಿನ್ನುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಾಗವಾಗಿ ನಡೆಯುತ್ತದೆ ಅಷ್ಟೇ ಅಲ್ಲದೆ ಇದು ಆರೋಗ್ಯದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಹೊಟ್ಟೆಯ ನೋವು ನಿವಾರಣೆ ಮಾಡುತ್ತದೆ. ಹಾಗೂ ಮಲಬದ್ಧತೆ ಸಮಸ್ಯೆಗೆ ಎಂದಿಗೂ ಎಡೆ ಮಾಡಿ ಕೊಡುವುದಿಲ್ಲ. ಇದರಲ್ಲಿ ನಾರಿನ ಅಂಶ ಸಮೃದ್ಧವಾಗಿ ಇರುವುದರಿಂದ ಇದು ಮಲಬದ್ಧತೆಯನ್ನು ದೂರ ಮಾಡುತ್ತದೆ.
ಇನ್ನು ಈ ಪುಂಡಿ ಪಲ್ಯದಲ್ಲಿ ಕೆರೋಟಿನ್ ಎಂಬ ಅಂಶ ಇರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಉತ್ತಮವಾದ ಆಹಾರವಾಗಿದೆ. ಪುಂಡಿ ಪಲ್ಯದ ಬಗ್ಗೆ ಹೇಳುತ್ತಾ ಹೋದರೆ ಸಮಯವೇ ಸಾಲದು ಗೆಳೆಯರೇ. ಬನ್ನಿ ಹಾಗಾದರೆ ಈ ಪುಂಡಿ ಪಲ್ಯವನ್ನು ಮಾಡುವ ವಿಧಾನವನ್ನು ತಿಳಿದು ಕೊಳ್ಳೋಣ. ಮೊದಲಿಗೆ ಪುಂಡಿ ಸೊಪ್ಪು ತೆಗೆದುಕೊಳ್ಳಬೇಕು. ಅದನ್ನು ಚೆನ್ನಾಗಿ ನೀರಿನಲ್ಲಿ ಎರಡು ಬಾರಿ ತೊಳೆಯಿರಿ. ನಂತರ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ತದ ನಂತರ ಒಂದು ಪಾತ್ರೆಯಲ್ಲಿ ಸೊಪ್ಪನ್ನು ಹಾಕಿ ಎರಡು ಲೋಟ ನೀರು ಹಾಕಿ 15-20 ನಿಮಿಷಗಳವರೆಗೆ ಚೆನ್ನಾಗಿ ಕುದಿಸಿ.
ಸೊಪ್ಪು ಚೆನ್ನಾಗಿ ಬೇಯಿದ ನಂತರ ಅದರಲ್ಲಿರುವ ನೀರು ಸೋಸಿ ಹೋಗುವಂತೆ ಶೋಧಿಸಿ ಕೊಳ್ಳಿ. ಸಾಮಾನ್ಯವಾಗಿ ಪುಂಡಿ ಸೊಪ್ಪು ಹುಳಿ ಅಂಶವನ್ನು ಒಳಗೊಂಡಿರುತ್ತದೆ. ಆದ್ದರಿಂದ ಅದರಲ್ಲಿರುವ ನೀರು ತೆಗೆದು ಹಾಕಬೇಕು. ನಂತರ ಪಾತ್ರೆಯನ್ನು ಇಟ್ಟು ಅದರಲ್ಲಿ ಬೇರೆ ನೀರು ಹಾಕಬೇಕು. ಆಮೇಲೆ ಇದಕ್ಕೆ ರವೆಯನ್ನು ಹಾಕಿ ಮಿಕ್ಸ್ ಮಾಡಿ. ರವೆ ಹಾಕಿದ ನಂತರ ಮೆಂತ್ಯೆ ಪುಡಿ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಎಲ್ಲ ಸಾಮಗ್ರಿಗಳು ಹಾಕಿದ ನಂತರ ಹಸಿ ಶೇಂಗಾ ಅಥವಾ ಹುರಿದ ಶೇಂಗಾ ಹಾಕಿಕೊಳ್ಳಿ.
ಶೇಂಗಾ ಬೀಜ ಹಾಕುವುದರಿಂದ ಪಲ್ಯದ ರುಚಿ ಮತ್ತಷ್ಟು ಹೆಚ್ಚುತ್ತದೆ. ಆಮೇಲೆ ಇದಕ್ಕೆ ಅರಿಶಿನ ಪುಡಿ ಮಸಾಲೆ ಪುಡಿ ಹಾಗೂ ಉಪ್ಪು ಮೆಣಸಿನ ಕಾಯಿ ಬೆಳ್ಳುಳ್ಳಿ ಹಾಗೂ ಸ್ವಲ್ಪ ಎಣ್ಣೆಯನ್ನು ಹಾಕಿ ಚೆನ್ನಾಗಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಈ ಪಲ್ಯವನ್ನು ಸುಮಾರು 15 ನಿಮಿಷಗಳವರೆಗೆ ಕುದಿಸಿದರೆ ರುಚಿಕರ ಪುಂಡಿ ಪಲ್ಯ ಸವಿಯಲು ಸಿದ್ಧವಾಗಿದೆ. ನೋಡಿದ್ರಲಾ ಮಿತ್ರರೇ, ಪುಂಡಿ ಪಲ್ಯದ ಲಾಭದಾಯಕ ಗುಣಗಳು ಹಾಗು ಮಾಡುವ ವಿಧಾನ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಶುಭದಿನ.