ಸಾಮಾನ್ಯವಾಗಿ ತೊಗರಿ ಬೇಳೆ ಹೆಸರು ಬೇಳೆ ಹೆಸರು ಕಾಳು ಹೀಗೆ ವಿವಿಧ ರೀತಿಯ ಬೆಳೆಕಾಳುಗಳನ್ನು ನಾವು ದಿನನಿತ್ಯ ಬಳಸುತ್ತಿದ್ದೇವೆ ಆದರೆ ಹುರುಳಿ ಕಾಳಿನ ಬಗ್ಗೆ ಗೊತ್ತಿದ್ಯಾ? ಉತ್ತರ ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಆಹಾರಗಳಲ್ಲಿ ಹುರುಳಿಕೂಡ ಒಂದು ಸಾಮಾನ್ಯವಾಗಿ ಪ್ರಾಣಿಗಳ ಆಹಾರವಾಗಿ ಹೆಚ್ಚು ಬೆಳೆಸುವ ಮುರುಳಿ ಮಾನವನ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಹುರುಳಿಕಾಳುಗಳನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು ಮೊಳಕೆ ಬರಿಸುವ ಮೂಲಕ ಬೆಳಗೆ ಉಪಹಾರಕ್ಕೆ ಬೇಯಿಸಿದ ಹುರಳಿಕಾಳು ಹೀಗೆ ಭಿನ್ನ ಆಹಾರಗಳನ್ನು ಸೇವಿಸಬಹುದು.
ಆಯುರ್ವೇದದಲ್ಲೂ ಹುರಳಿಕಾಳು ಸಾಕಷ್ಟು ಮದ್ದುಗಳ ರೂಪದಲ್ಲಿ ಬಳಕೆಯಾಗುತ್ತದೆ ಹಾಗಾದರೆ ಹುರಳಿಕಾಳುಗಳನ್ನು ಸೇವನೆ ಮಾಡುವುದರಿಂದ ಆರೋಗ್ಯಕಾರಿ ಲಾಭಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ಆಯುರ್ವೇದದಲ್ಲಿ, ಹುರುಳಿ ಕಾಳು ಪ್ರಸಿದ್ಧ ಮೂತ್ರವರ್ಧಕವಾಗಿದೆ ಮತ್ತು ಮೂತ್ರದ ಹರಿವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಎಂದು ಹೆಸರುವಾಸಿಯಾಗಿದೆ. ಈ ಸಮಸ್ಯೆ ಇರುವವರು ಉತ್ತಮ ಫಲಿತಾಂಶಗಳನ್ನು ಪಡೆಯಲು ಹುರುಳಿ ಕಾಳು ಸೂಪ್ ಅನ್ನು ನಾಲ್ಕು ವಾರಗಳವರೆಗೆ ದಿನಕ್ಕೆ ಎರಡು ಬಾರಿ ಸೇವಿಸಬಹುದು.
ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿರುವ ಹುರುಳಿಕಾಳು ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಹುರುಳಿಕಾಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಮೂತ್ರಪಿಂಡಗಳಲ್ಲಿ ಕಲ್ಲುಗಳ ರಚನೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹುರುಳಿಕಾಳುಗಳು ಪ್ರೋಟೀನ್ ಮತ್ತು ಫೈಬರ್ ಅಂಶಗಳನ್ನು ಸಮೃದ್ಧವಾಗಿದೆ ಇದು ತೂಕನಷ್ಟಕ್ಕೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಅಲ್ಲದೆ ಕೊಬ್ಬನ್ನು ಕರಗಿಸಲು ಸಹಾಯಮಾಡುತ್ತದೆ.
ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ ಡಿ ಎನ್ನುವ ಉತ್ತಮ ಕೊಲೆಸ್ಟ್ರಾ ನನ್ನು ಹೆಚ್ಚಿಸುತ್ತದೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯವಾಗಿ ಇಡಲು ಸಹಾಯಮಾಡುತ್ತದೆ ಈ ಹುರಳಿ ಕಾಳುಗಳ ಪುಡಿಯನ್ನು ನೀವು ನೀರಿಗೆ ಹಾಕಿ ಅದನ್ನು ಅರ್ಧ ಚಮಚ ಜೀರಿಗೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಇನ್ನು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಹುರಳಿಕಾಳು ಉಪಯುಕ್ತವಾಗಿದೆ.
ಇದರಿಂದ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಇದರಿಂದ ಮದುವೆಗಳಿಗೆ ಹುರಳಿಕಾಳು ಉತ್ತಮ ಆಹಾರವಾಗಿದೆ.ಆಸ್ತಮಾ ರೋಗಿಗಳಿಗೆ ಸಾಮಾನ್ಯ ಆಯುರ್ವೇದ ಪ್ರಿಸ್ಕ್ರಿಪ್ಷನ್ ಎಂದರೆ ಬೇಯಿಸಿದ ಹುರುಳಿಕಾಳು ಮತ್ತು ಕಾಳುಮೆಣಸನ್ನು ಸೇವಿಸುವುದು. ಇದು ಕೆಮ್ಮು, ಶೀತ ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ