ನಮ್ಮ ಈಗಿರುವ ಸಮಾಜದಲ್ಲಿ ಹಲವಾರು ಜನ ತಮ್ಮ ಮಗಳಿಗೆ ಬೇಗನೆ ಮದುವೆ ಮಾಡಿ ಕಳಿಸು ಬಿಡುತ್ತಾರೆ ಅವರ ಆಸೆ ಆಕಾಂಕ್ಷೆಗಳನ್ನೆಲ್ಲ ಗಾಳಿಗೆ ತೂರಿ ಅವರನ್ನು ಮದುವೆ ಎಂಬ ಪಂಜರದಲ್ಲಿ ಕಳಿಸಿಬಿಡುತ್ತಾರೆ ಆದರೆ ಈ ಪಂಜರದಿಂದ ಹೊರಬಂದು ತಮ್ಮ ಜೀವನದಲ್ಲಿ ಹಲವಾರು ಮುಂದೆ ಸಾಧಿಸಿ ತೋರಿಸುತ್ತಾರೆ ಆದರೆ ಕೆಲವೊಮ್ಮೆ ತಮ್ಮ ಗಂಡನ ಸಹಾಯದಿಂದಲೇ ಅದೆಷ್ಟೋ ಮಂದಿ ತಮ್ಮ ಗುರಿಯನ್ನು ಮುಟ್ಟಿದ್ದಾರೆ ಅಂತದೇ ಕಥೆ ಒಂದು ಇಲ್ಲಿದೆ ನೋಡಿ ಈಕೆ ಗಂಡನ ಹೆಸರು ಜಯದೀಪ ಪಿಸಾಳ ಜೀವನದಲ್ಲಿ ಒಳ್ಳೆಯ ಶಿಕ್ಷಣವನ್ನು ಪಡೆದ ವ್ಯಕ್ತಿ.

ಕಥೆಯನ್ನು ನೋಡಿದರೆ ನೀವು ಕೂಡ ಇವರಿಗೆ ಸಲ್ಯೂಟ್ ಮಾಡುತ್ತೀರಿ ಹೌದು ಈತ ಮಾಡಿದ ಸಹಾಯದಿಂದ ತನ್ನ ಹೆಂಡತಿ ಅಧಿಕಾರಿ ಆಗುತ್ತಾಳೆ. ಆ ವ್ಯಕ್ತಿ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ನಿವಾಸಿ ಜಯದೀಪ ಚಿಕ್ಕಂದಿನಿಂದಲೇ ಕಷ್ಟದ ಜೀವನದಲ್ಲಿ ಒಳ್ಳೆಯ ಶಿಕ್ಷಣವನ್ನು ಪಡೆದ ವ್ಯಕ್ತಿ. ನನ್ನ ಹುಟ್ಟೂರಿನಲ್ಲಿ ಏನಾದರೂ ಸಾಧನೆಯನ್ನು ಮಾಡಬೇಕೆಂಬ ಹಂಬಲ ಈ ವ್ಯಕ್ತಿಗೆ ತುಂಬಾನೇ ಇತ್ತು ಆದರೆ ಇವನಿಗೆ ಕಾಲ ಕೂಡಿ ಬರಲಿಲ್ಲ ಹಾಗಾಗಿ ತನ್ನ ಊರಿನಲ್ಲಿಯೇ ತನ್ನ ಸ್ವಂತ ತೆಗೆದುಕೊಂಡು ಜೀವನವನ್ನು ಸಾಗಿಸುತ್ತಿದ್ದ ಜೊತೆ ಜೊತೆಗೆ ರಾಜಕೀಯದಲ್ಲೂ ಈ ವ್ಯಕ್ತಿ ಕಾಲಿಡುತ್ತಾನೆ.

ತನ್ನೂರಾದ ಪಳಶಿಯ ಸರಪಂಚ್ ಆದನು. ಆಮೇಲೆ ಊರಿನಲ್ಲಿ ರಸ್ತೆಯಿಂದ ಹಿಡಿದು ಶೌಚಾಲಯ ವ್ಯವಸ್ಥೆಯವರೆಗೆ ಅನೇಕ ಸುಧಾರಣೆಯ ಕೆಲಸಗಳನ್ನು ಮಾಡಿದನು. ಅಲ್ಲಿ ಇಲ್ಲಿ ಪುಟ್ಟ ಕೆಲಸಗಳನ್ನು ಮಾಡುತ್ತಾ ಬಂದ ಹಣದಿಂದ ಪಿಎಸ್ಐ ಪರೀಕ್ಷೆಯನ್ನು ಬರೆಯುತ್ತಾನೆ ಆದರೆ ಇದರಲ್ಲಿ ಎರಡು ಬಾರಿ ಉತ್ತೀರ್ಣನಾದನು. ಆದರೆ ಇವನ ಹಂಬಲವೇ ಬೇರೆ ವಿತ್ತು ತಾನು ಜೀವನದಲ್ಲಿ ಏನಾದರೂ ಒಂದು ದೊಡ್ಡ ಸಾಧನೆ ಮಾಡಬೇಕು ಎಂಬ ಛಲವಿತ್ತು.

ಅಷ್ಟೇ ಅಲ್ಲದೆ ಸಾತಾರಾ ಜಿಲ್ಲೆಯ ವಾಠಾರ್ ಎಂಬ ರೈಲ್ವೆ ಸ್ಟೇಶನ್ ನಲ್ಲಿ ಕಬ್ಬಿನ ಹಾಲು ಮಾರಿ ಜೀವನ ನಡೆಸುತ್ತಿದ್ದ. ಇವನಿಗೆ ಕಲ್ಯಾಣಿ ಎಂಬ ಹುಡುಗಿಯ ಮೇಲೆ ಪ್ರೀತಿ ಹುಟ್ಟಿತ್ತು. ಯಾವುದೇ ತರಹದ ತಡ ಮಾಡದೆ ಇವರ ತಂದೆ ಹತ್ತಿರ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವಂತೆ ಕೇಳಿಕೊಳ್ಳುತ್ತಾನೆ ಆದರೆ ಅವಳ ತಂದೆ ಕೊಡಲು ನಿರಾಕರಿಸುತ್ತಾರೆ. ತನ್ನ ಕೆಲಸದ ಬಗ್ಗೆ ಚೇಷ್ಟೆ ಮಾಡಿದ ಕಲ್ಯಾಣ ತಂದೆ ಹತ್ತಿರ ನಿಮ್ಮ ಮಗಳನ್ನು ಕೊಟ್ಟು ನನಗೆ ಮದುವೆ ಮಾಡಿದರೆ ನಾನು ಎರಡು ವರ್ಷದಲ್ಲಿ ಪಿಎಸ್ಐ ಆಗುತ್ತೇನೆ ಎಂದು ಚಾಲೆಂಜ್ ಹಾಕುತ್ತಾನೆ.

ಇದಕ್ಕೆ ಅವರ ತಂದೆ ಒಪ್ಪಿ, ಮುಂದೆ ನಿಂತು ಮದುವೆ ಮಾಡಿಕೊಡುತ್ತಾರೆ. ಆದರೆ ತನ್ನ ಕೈಯಲ್ಲಿ ಆಗದೆ ತನ್ನ ಹೆಂಡತಿಗೆ ಮೇಲೆ ಜವಾಬ್ದಾರಿಯನ್ನು ನೀಡುತ್ತಾನೆ ನಾನು ಈ ಊರನ್ನು ನೋಡಿಕೊಳ್ಳಬೇಕು ನನ್ನಿಂದ ಇದು ಆಗುತ್ತಿಲ್ಲ ಆದರೆ ನನ್ನ ಕನಸು ನೀನು ಈಡೇರಿಸು ಎಂದು ತನ್ನ ಹೆಂಡತಿಗೆ ಎಲ್ಲಾ ತರದ ಸೌಕರ್ಯಗಳನ್ನು ನೀಡಿ ತನ್ನ ಮಾವನಿಗೆ ಕೊಟ್ಟ ಮಾತಿನಂತೆ ಎರಡು ವರ್ಷದಲ್ಲಿ MPSC ಪರೀಕ್ಷೆ ಉತ್ತೀರ್ಣ ಮಾಡಿಸಿದ. ನಂತರ ಆಕೆಯ ಟ್ರೇನಿಂಗ್ ಪ್ರಾರಂಭವಾಯಿತು ತನ್ನ ಗಂಡನ ಆಸೆಯಂತೆ ಪಿಎಸ್ಐ ಆಗುತ್ತಾಳೆ.

Leave a Reply

Your email address will not be published. Required fields are marked *