ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಕರ್ನಾಟಕ ರಾಜ್ಯದ ಕೆಲವು ದಿನಗಳ ಮುಂಚೆ ಚುನಾವಣೆಯ ಕುರಿತು ಬಹಳ ದೊಡ್ಡ ಹೈಡ್ರಾಮ ನಡೆದಿತ್ತು. ಆದರೂ ಕೂಡ ಬಹುಮತದಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ಅವರು ಕೊನೆಗು ತಮ್ಮ ಪಕ್ಷ ನೀಡಿರುವ ಗ್ಯಾರಂಟಿಗಳ ಯೋಜನೆಯಲ್ಲಿ ಪ್ರಮುಖವಾದ ಗೃಹ ಜ್ಯೋತಿಗೆ ಅಧಿಕೃತವಾಗಿ ಆದೇಶವನ್ನು ಹೊರಡಿಸಲಾಗಿದ್ದು ಇನ್ನು ಮುಂದೆ ಯಾರು ಕೂಡ ವಿದ್ಯುತ್ ಬಿಲ್ ಕಟ್ಟಬೇಡಿ ಅಂತ ಆದೇಶಿಸಿದ್ದಾರೆ ಅಧಿಕೃತವಾಗಿ ರಾಜ್ಯ ಸರ್ಕಾರದಿಂದ ಆದೇಶ ಪತ್ರವನ್ನು ಹೊರಡಿಸಲಾಗಿದ್ದು.
ಈ ಪತ್ರದಲ್ಲಿ ಅಂತಹ ಕುಟುಂಬಗಳಿಗೆ ಮಾತ್ರ ಉಚಿತ ವಿದ್ಯುತ್ ದೊರೆಯುತ್ತದೆ ಹಾಗೂ ಇನ್ನೂ ವಿದ್ಯುತ್ ಬಿಲ್ ಬಂದರೆ ಏನು ಮಾಡಬೇಕು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಿಲ್ ಬಂದರೆ ಏನಾಗುತ್ತದೆ ಮತ್ತು ಅಧಿಕೃತವಾಗಿ ಯಾವ ದಿನಾಂಕದಿಂದ ಅನ್ವಯವಾಗುತ್ತದೆ ಮತ್ತು ಉಚಿತ ವಿದ್ಯುತ್ತನ್ನು ಪಡೆಯುವುದಕ್ಕೆ ಅರ್ಜಿಯಲ್ಲಿ ಸಲ್ಲಿಸಬೇಕು ಅಗತ್ಯವಾದ ದಾಖಲೆಗಳು ಏನು ಹಾಗೂ ರಾಜ್ಯ ಸರ್ಕಾರ ವಿಧಿಸಿರುವ ಶರತ್ತುಗಳು ಮತ್ತು ನಿಯಮಗಳು ಏನು ಎನ್ನುವ ಸಂಪೂರ್ಣವಾದ ಮಾಹಿತಿ ಇವತ್ತಿನ ನೀಡಲಾಗಿದ್ದು ನೀವು ಕೂಡ ಸರಕಾರದಿಂದ ಗೃಹ ಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಪಡೆಯಲು ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಹಾಗೂ ಕೊನೆಯವರೆಗೂ ಓದಿ.
ಕಾಂಗ್ರೆಸ್ ನೀಡಿದ ಗ್ಯಾರಂಟಿಗಳ ಪೈಕಿ ಹೆಚ್ಚು ಗಮನವನ್ನು ಸೆಳೆದದ್ದು ಪ್ರತಿ ಮನೆ ಗೋಚಿತವಾಗಿ ನೀಡುವ ಮಾಸಿಕ 200 ಯೂನಿಟ್ ವಿದ್ಯುತ್ ರಚಿಸುವವರೆಗೂ ಹೆಚ್ಚು ಚರ್ಚೆಯಾಗಿದೆ ಈ ಗ್ಯಾರಂಟಿ ಸರಕಾರ ಉಚಿತವಾಗಿ ವಿದ್ಯುತ್ ಕೊಡುತ್ತದೆ ಎನ್ನುವ ಬಗ್ಗೆ ಹೆಚ್ಚಿನ ಮಾತುಗಳು ಕೇಳಿ ಬರುತ್ತಿತ್ತು ನಾವು ವಿದ್ಯುತ್ ಪಾವತಿಸುವುದಿಲ್ಲ ಅಂತ ನೂತನ ಸರ್ಕಾರ ರಚನೆಯಾಗುವ ಮೊದಲೇ ಕೆಲವರು ಹೇಳಿದ್ದು ಕೇಳಿದ್ದು ಮನೆಯಲ್ಲಿ ಬಿಲ್ ನೀಡುವುದಕ್ಕೆ ಬಂದಾಧಿಕಾರಿಗಳಿಗೆ ಬಿಲ್ ನೀಡಬೇಡಿ ಅಂತ ನೆನಪಿದೆ.
ರಾಜ್ಯದ ಪ್ರತಿ ಮನೆಗೆ ತಿಂಗಳಿಗೆ ಉಚಿತವಾಗಿ ವಿದ್ಯುತ್ ನೀಡುವ ಗ್ರಹ ಜ್ಯೋತಿ ಯೋಜನೆಗೂ ಈಗ ನೂತನ ಸರಕಾರ ಆದೇಶ ಹೊರಡಿಸಿದೆ ಈ ಮೂಲಕ ಪ್ರತಿ ಮನೆಗೂ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಎಂದು ಖಚಿತವಾಗಿ ಸರ್ಕಾರ ತಿಳಿಸಿದೆ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಸರಕಾರ ಇಂದು ನಡೆದ ಸಚಿವ ಸಂಪುಟ ತೀರ್ಮಾನದಂತೆ ಆದೇಶವನ್ನುಹೊರಡಿಸಲಾಗಿದೆ ಇನ್ನು ಆದೇಶ ಪತ್ರದಲ್ಲಿ ಏನಿದೆ ಅಂತ ನೋಡುವುದಾದರೆ ಕರ್ನಾಟಕ ಸರ್ಕಾರದ ನಡಾವಳಿಗಳು ಗೃಹಜೋತಿಗೆ ಅಡಿಯಲ್ಲಿ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ವಿದ್ಯುತ್ ಉಚಿತವಾಗಿ ಒದಗಿಸುವ ಬಗ್ಗೆ ಹೇಳುವುದಾದರೆ.
ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುತ್ ಶಕ್ತಿಯನ್ನು ಉಚಿತವಾಗಿ ರಾಜ್ಯದ ನಾಗರಿಕರಿಗೆ ಒದಗಿಸುವ ಪ್ರಸ್ತಾವನೆಯೂ ಸರ್ಕಾರದ ಹಂತದಲ್ಲಿ ಇದ್ದು ಈ ಕುರಿತಂತೆ ಪರಿಶೀಲಿಸಲಾಗಿ ರಾಜ್ಯದ ನಾಗರಿಕರಿಗೆ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗೃಹ ಬಳಕೆದಾರರಿಗೆ 200 ಯೂನಿಟ್ ಗಳವರೆಗೆ ವಿದ್ಯುತ್ ಶಕ್ತಿಯನ್ನು ಉಚಿತವಾಗಿ ಒದಗಿಸಲು ಸರ್ಕಾರವು ಉದ್ದೇಶಿಸುತ್ತದೆ.