WhatsApp Group Join Now

ಮಾವು ಬಹುತೇಕ ಎಲ್ಲರಿಗೂ ಇಷ್ಟವಾಗುವ ಹಣ್ಣು ಈಗಂತೂ ಮಾವಿನ ಸೀಸನ್ ಮಾವು ರುಚಿ ಮಾತ್ರವಲ್ಲದೆ ಅದರ ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೂ ಉತ್ತಮವಾಗಿದೆ ಮಾವಿನಹಣ್ಣಿನಲ್ಲಿ ವಿಟಮಿನ್ ಗಳು ಕನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿ ಇವೆ. ಕ್ಯಾನ್ಸರ್ ಅಧಿಕ ಒತ್ತಡ ಕೊಲೆಸ್ಟ್ರಾಲ್ ಹೀಗೆ ಹಲವಾರು ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಮತ್ತು ರಕ್ಷಿಸಲು ವ್ಯವಸ್ಥೆಯನ್ನು ಆರೋಗ್ಯವಾಗಿ ಇಡಲು ಮಾವಿನ ಗುಣಲಕ್ಷಣಗಳು ಸಹಾಯಕವಾಗಿದೆ ಇನ್ನು ಮಾವಿನಹಣ್ಣಿನಂತೆ ಅದರ ಗೋರಟೆ ಕೂಡ ಶಕ್ತಿಯುತವಾಗಿದೆ.

ಮಾವಿನಹಣ್ಣಿನ ಗೋರಟೆ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಅಗತ್ಯ ಪೋಷಕಾಂಶಗಳು ಮತ್ತು ಗುಣಗಳು ಹೊಂದಿದೆ ಆಯುರ್ವೇದ ತಜ್ಞರ ಪ್ರಕಾರ ಈ ಗೊರಟೆಯನ್ನು ಆಯುರ್ವೇದದಲ್ಲಿ ಉತ್ತಮ ಔಷಧವೆಂದು ಪರಿಗಣಿಸಲಾಗಿದೆ ಇದು ಕರುಳಿನ ಹುರುಳು ಪೈಲ್ಸ್ ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಸಹಕಾರಿಯಾಗಿದೆ ಹಾಗೆ ಈ ಮಾವಿನ ಗೋರಟೆ ಪುಡಿ ಸೇವಿಸುವುದರಿಂದ ಯಾವೆಲ್ಲ ಆರೋಗ್ಯಕ್ಕಾಗಿ ಲಾಭಗಳು ಸಿಗುತ್ತವೆ ಎಂಬುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ವೀಕ್ಷಿಸಿ.

ಹೌದು ಮಾವಿನ ಗೋರಟೆ ಸಾಮಾನ್ಯವಾಗಿ ಆಯುರ್ವೇದದ ಗಿಡಗಳು ಯಾವುದರ ರೂಪದಲ್ಲಿ ಔಷಧಿಗಳನ್ನು ನಮಗೆ ಒದಗಿಸುತ್ತದೆಯೋ ಹಾಗೆ ಇದು ಕೂಡ ಕೆಲಸ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ ನೀವು ಅತಿಸಾರದಿಂದ ಬಳಲುತ್ತಿದ್ದಾರೆ ಅದು ನಿಮಗೆ ಔಷಧಿಯ ಕೆಲಸ ಮಾಡುತ್ತದೆ ಅತಿಸಾರವನ್ನು ಎದುರಿಸಲು ನೀವು ಒಂದು ಚಮಚ ಮಾವಿನ ಗೋರಟೆ ಪುಡಿ ತೆಗೆದುಕೊಳ್ಳುವುದರಿಂದ ತ್ವರಿತ ಪರಿಹಾರವನ್ನು ಪಡೆಯಬಹುದು ಇನ್ನು ಹೆಚ್ಚಾಗಿ ಮಕ್ಕಳಲ್ಲಿ ಜಂತುಹುಳುವಿನ ಸಮಸ್ಯೆ ಕಾಣುತ್ತದೆ ಇದರಿಂದಾಗಿ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.

ನಿಮ್ಮ ಮಗುವಿಗೆ ಹೊಟ್ಟೆಯಲ್ಲಿ ಹುಳುಗಳು ಸಮಸ್ಯೆ ಇದ್ದರೆ ನೀವು ಬೆಳಗ್ಗೆ ಮತ್ತು ಸಂಜೆ ಒಂದು ಚಮಚ ಮಾವಿನ ತೊಗಟೆ ಪುಡಿ ತೆಗೆದುಕೊಳ್ಳಬೇಕು ಇದು ಉತ್ತಮ ಪರಿಹಾರವನ್ನು ನೀಡಬಲ್ಲದು ಈ ಪುಡಿಯನ್ನು ಗಾಯಗಳಾಗಿದ್ದಲ್ಲಿ ತುರಿಕೆಯ ಜಾಗಕ್ಕೂ ಹಚ್ಚಬಹುದು ಇನ್ನೂ ಪೈಲ್ಸ್ ನಲ್ಲಿ ರಕ್ತಸ್ರಾವವು ಸಾಮಾನ್ಯವಾಗಿದೆ ಆದರೆ ಅದನ್ನು ನಿರ್ಲಕ್ಷಿಸಬಾರದು ಮಾವಿನಕಾಯಿ ಅತ್ಯುತ್ತಮ ಆಯುರ್ವೇದ ಚಿಕಿತ್ಸೆಯಾಗಿದೆ ಪೈಲ್ಸ್ ನಲ್ಲಿ ರಕ್ತಸ್ರಾವ ನೀಗಿಸಲು ಪ್ರತಿದಿನ ಒಂದು ಚಮಚ ಮಾವಿನ ತೊಗಟೆಯ ಪುಡಿಯನ್ನು ನೀರಿನೊಂದಿಗೆ ತೆಗೆದುಕೊಳ್ಳುವುದು ಉತ್ತಮ.

ಅತಿಸಾರ ಮತ್ತು ಪೈಲ್ಸ್ ಸಮಸ್ಯೆ ಹೊಂದಿರುವವರು ದಿನಕ್ಕೆ ಎರಡು ಬಾರಿ ಒಂದು ಕಪ್ ಮಜ್ಜಿಗೆಯಲ್ಲಿ 5 ಗ್ರಾಂ ಪುಡಿಯನ್ನು ತೆಗೆದುಕೊಳ್ಳಬಹುದು ಹೊಟ್ಟೆಯ ಹುಳುಗಳಿಗೆ ದಿನಕ್ಕೆ ಎರಡುವರೆ ಗ್ರಾಂ ಪುಡಿಯನ್ನು ಎರಡು ಬಾರಿ ನೀರಿನೊಂದಿಗೆ ಸೇವಿಸಬೇಕು. ಈಗಂತೂ ಮಾವಿನ ಸೀಸನ್ ಬಂದಿದೆ ಹಾಗಾಗಿ ನೀವು ಯಾವುದೇ ಒಂದು ಮನೆಯಲ್ಲಿ ಹೋದರೂ ಕೂಡ ನಿಮಗೆ ಸರ್ವೇಸಾಮಾನ್ಯವಾಗಿ ಮಾವಿನಹಣ್ಣು ಸಿಗುವುದು ಗ್ಯಾರಂಟಿ . ಹಾಗಾಗಿ ನೀವು ಯಾವಾಗ ಮಾವಿನ ಹಣ್ಣನ್ನು ಸೇವನೆ ಮಾಡುತ್ತಿರೋ ಅವಾಗ ಇದು ಒಂದು ಮಾತ್ರ ನೆನಪಿನಲ್ಲಿ ಇಟ್ಟುಕೊಂಡು ಮಾವಿನಹಣ್ಣಿನ ಗೋರಟೆಯನ್ನು ಆದಷ್ಟು ಸೇವನೆ ಮಾಡಲು ಪ್ರಯತ್ನ ಮಾಡಿ ಇದರಿಂದ ನಿಮ್ಮ ಆರೋಗ್ಯ ಬಹಳಷ್ಟು ಸುಧಾರಿಸಿಕೊಳ್ಳುತ್ತದೆ ಈ ಮಾಹಿತಿ ನಿಮಗೆ ಇಷ್ಟವಾದರೆ ತಪ್ಪದೇ ತಿಳಿಸಿ ಧನ್ಯವಾದಗಳು

WhatsApp Group Join Now

Leave a Reply

Your email address will not be published. Required fields are marked *