ಕರ್ನಾಟಕದಲ್ಲಿ ಭೇಟಿ ನೀಡಲು ಹಾಗೂ ನಮ್ಮ ರಜೆಯನ್ನು ಕಳೆಯಲು ಅನೇಕ ಜಾಗಗಳು ಇವೆ ಒಂದು ವೇಳೆ ನೀವು ಕೆಲವೊಂದಿಷ್ಟು ಆಶ್ಚರ್ಯಕರ ಜಾಗಗಳನ್ನು ಭೇಟಿ ನೀಡಬೇಕು ಎಂದರೆ ಅದರ ಬಗ್ಗೆ ಮಾಹಿತಿ ನಿಮಗೆ ಇಲ್ಲಿದೆ ನೋಡಿ.ನೀವು ದೇವರನ್ನು ನಂಬಿದರೆ ನೀವು ದೆವ್ವಗಳನ್ನು ಕೂಡ ನಮ್ಮಲೇಬೇಕು ಏಕೆಂದರೆ ಎಲ್ಲಿ ಒಳ್ಳೆಯದು ಇರುತ್ತದೆ ಅಲ್ಲಿ ಕೆಟ್ಟದ್ದು ಕೂಡ ಇರುತ್ತದೆ ಕೆಲವೊಂದಿಷ್ಟು ಜಾಗಗಳು ದೆವ್ವ ಹಾಗೂ ಪ್ರೇತಾತ್ಮಗಳಿಂದ ಕೂಡಿದೆ ಎಂಬುದಕ್ಕೆ ಕೆಲವೊಂದಿಷ್ಟು ಸಾಕ್ಷ ಸಂಗತಿಗಳು ಎದುರಿಗೆ ಬಂದಿವೆ ಹಾಗಾಗಿ ಒಂದಾದ ಮೇಲೆ ಒಂದು ನಾವು ನೋಡುತ್ತಾ ಹೋಗೋಣ.
ಮೊದಲಿಗೆ ಕೂಮಟಾದ ಮೂರೂರು ರಸ್ತೆ ಕರ್ನಾಟಕದ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಬಿಳಿ ಕೂದಲಿನ ದುಷ್ಟ ಮಾಟಗಾತಿಯ ದೆವ್ವವನ್ನು ಮೂರೂರು ರಸ್ತೆಯಲ್ಲಿ ಅನೇಕರು ಅನುಭವಿಸಿದ್ದಾರೆ. ದಂತಕಥೆಯ ಪ್ರಕಾರ, ಅವಳನ್ನು ನೋಡುವ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ಈ ಪ್ರೀತಿ ಆತ್ಮದ ಶಕ್ತಿಯನ್ನು ಅವರು ಕೆಲವೊಂದು ಇಷ್ಟು ಮನೆಯಲ್ಲಿ ಕೂಡ ಅನುಭವಿಸಿದ್ದಾರೆ ಎಂಬುದನ್ನು ಜನರು ಹೇಳಿದ್ದಾರೆ ನಂತರ ನಮ್ಮ ಮುಂದೆ ಇರುವುದು ದೆವ್ವದ ಮನೆ, ಉಡುಪಿ ಒಬ್ಬ ವ್ಯಕ್ತಿ ಸಮಾಜದ ಜನರೊಂದಿಗೆ ಅತಿ ಹೆಚ್ಚು ಗೌರವವನ್ನು ಹೊಂದಿರುವಂತಹ ವ್ಯಕ್ತಿಯಾಗಿರುತ್ತಾನೆ.
ಆದರೆ ಇವನಿಗೆ ಸಮಸ್ಯೆ ಏನು ಎದುರಾಗುತ್ತದೆ ಎಂಬುದನ್ನು ನಾವು ನೋಡುವುದಾದರೆ ಅನ್ಯಾಯವಾಗಿ ಅಪರಾಧದ ಕೇಸ್ ನಲ್ಲಿ ಇವನು ಒಳಗೆ ಹಾಕಿಸುತ್ತಾರೆ ಈ ಅವಮಾನವನ್ನು ಅವರು ತಾಳಲಾರದೆ ಅವರು ಸಾವನ್ನಪ್ಪುತ್ತಾರೆ, ಇದಾದ ನಂತರ ಪರ್ಕಳದ ಮಂಜುನಾಥನಗರದಲ್ಲಿರುವ ಈ ಮನೆಯ ಸುತ್ತ ಅವರ ಆತ್ಮ ಈಗಲೂ ಅಲೆದಾಡುತ್ತಿದ್ದು, ಅವರ ಮನೆಯಲ್ಲಿ ಕಲ್ಲು ಕೂಡ ಅವರ ಆತ್ಮ ಇದೆ ಎಂದು ಅಲ್ಲಿರುವಂಥ ಜನರು ಹೇಳುತ್ತಾರೆ ಕಾಂಟೆಡ್ ಫ್ಲಾಟ್, ಹುಬ್ಬಳ್ಳಿ 2012 ರ ಮಧ್ಯದಲ್ಲಿ ದಂಪತಿಗಳು ಈ ಫ್ಲಾಟ್ಗೆ ತೆರಳಿದರು.
ಮನೆಯೊಳಗಿನ ವಿಚಿತ್ರ ಸಂಗತಿಗಳನ್ನು ಹೆಂಡತಿ ಗಮನಿಸಲು ಪ್ರಾರಂಭಿಸಿದಳು, ಇದ್ದಕ್ಕಿದ್ದಂತೆ ದೀಪಗಳು ಆನ್ ಮತ್ತು ಆಫ್ ಆಗುತ್ತವೆ ಮತ್ತು ಈ ಮನೆಗೆ ಸ್ಥಳಾಂತರಗೊಂಡ ನಂತರ ಕೆಲವು ಗುರುತುಗಳು ಆಕೆಯ ದೇಹದಲ್ಲಿ ಕಂಡುಬಂದವು. ಹೌದು ಅಂದಿನಿಂದ ಈ ಪ್ಲಾಟಿನಲ್ಲಿ ಕೆಲವೊಂದಿಷ್ಟು ಅಹಿತಕರ ಘಟನೆಗಳು ನಡೆಯುತ್ತಾ ಬರುತ್ತಿದ್ದಾವೆ.
ಅರವತ್ತು ಸಮಾಧಿಗಳು, ಹಾಂಟೆಡ್ ವೆಲ್, ಬಿಜಾಪುರ ಸಾಥ್ ಕಬರ್ ಬಳಿಯ ಬಾವಿಯೊಂದರಲ್ಲಿ ಅಫ್ಜಲ್ ಖಾನ್ ತನ್ನ 63 ಪತ್ನಿಯರನ್ನು ಕೊ_ಲೆ ಮಾಡಿದ್ದ. ಶಿವಾಜಿ ವಿರುದ್ಧದ ಯುದ್ಧದಲ್ಲಿ ಅವನು ಸೋಲುತ್ತಾನೆ ಮತ್ತು ಖಂಡಿತವಾಗಿಯೂ ಸಾಯುತ್ತಾನೆ ಎಂದು ಅವನ ಜ್ಯೋತಿಷಿಗಳು ನೀಡಿದ ಭವಿಷ್ಯವಾಣಿಯೇ ಈ ದುರಂತ ನಿರ್ಧಾರಕ್ಕೆ ಕಾರಣವಾಯಿತು. ಆದ್ದರಿಂದ ಅವನು ತನ್ನ ಹೆಂಡತಿಯರನ್ನು ಕೋಟೆಯ ನಗರದ ಹೊರಗಿನ ಮಿತಿಯಲ್ಲಿದ್ದ ಬಾವಿಗೆ ಕರೆದೊಯ್ದು ಒಬ್ಬೊಬ್ಬರಾಗಿ ಬಾವಿಗೆ ತಳ್ಳಿ ಕೊಂ-ದನು.
ಅವನ ಇಬ್ಬರು ಹೆಂಡತಿಯರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅವರನ್ನು ಅವನ ಸೈನಿಕರು ಬೆನ್ನಟ್ಟಿ ಕೊ-ಲ್ಲ-ಲ್ಪಟ್ಟರು. ಅಂದಿನಿಂದ ಈ ಬಾವಿಯುಲ್ಲಿ ದೆವ್ವ ಹಿಡಿದಿರಬೇಕು ಎಂದು ಜನರ ಭಾವನೆ ಇದೆ ಮತ್ತು ಕೆಲವು ರಾತ್ರಿಗಳಲ್ಲಿ ಜನರು ಬಾವಿಯಿಂದ ಹೊರಬರುವ ಶಬ್ದಗಳನ್ನು ಕೇಳುತ್ತಾರೆ . ಮತ್ತು ನಾವು ಕೊನೆಯದಾಗಿ ಬೆಂಗಳೂರಿನಲ್ಲಿ ನೋಡುವುದಾದರೆ ಕಲ್ಪಲ್ಲಿ ಸ್ಮಶಾನವು ಬೆಂಗಳೂರಿನ ಹಳೆಯ ಮದ್ರಾಸ್ ರಸ್ತೆಯಲ್ಲಿದೆ. ಇದನ್ನು ಸೇಂಟ್ ಜಾನ್ಸ್ ಸ್ಮಶಾನ ಎಂದೂ ಕರೆಯುತ್ತಾರೆ.
ಈ ರಸ್ತೆಯಲ್ಲಿ ಸಂಚರಿಸುವವರಿಗೆ ಈ ಸ್ಮಶಾನದಲ್ಲಿ ದೆವ್ವದಂತಿದೆ ಎಂದು ಅನುಭವ ಆಗಿದೆ ಎಂದು ಜನರು ಹೇಳುತ್ತಾರೆ. ನೀವು ದುರ್ಬಲ ಹೃದಯದ ವ್ಯಕ್ತಿಯಾಗಿದ್ದರೆ ಈ ಸ್ಮಶಾನದಿಂದ ದೂರವಿರುವುದು ಒಳ್ಳೆಯದು. ಹಾಗೆ ಈ ನಾವು ಮೇಲೆ ಹೇಳಿರುವಂತ ಜಾಗಗಳಿಗೆ ಭೇಟಿ ನೀಡುವ ಮೊದಲು ಒಮ್ಮೆ ಯೋಚನೆ ಮಾಡಿ