ಎಲ್ಲರಿಗೂ ನಮಸ್ಕಾರ ಆತ್ಮೀಯರೇ ಶಿವ ಪರಮಾತ್ಮನ ಅರವತ್ನಾಲ್ಕು ಅವತಾರಗಳಲ್ಲಿ ಅರ್ಧನಾರೀಶ್ವರ ಅವತಾರವೂ ಸಹ ಪ್ರಮುಖ ಎನಿಸಿಕೊಳ್ಳುತ್ತದೆ ಎಡಭಾಗದಲ್ಲಿ ಪಾರ್ವತಿ ದೇವಿ ಬಾಲ ಭಾಗದಲ್ಲಿ ಶಿವ ಪರಮಾತ್ಮನು ಸೇರಿ ಅರ್ಧನಾರೀಶ್ವರನಾಗಿದ್ದಾರೆ ಗಂಡು ಮತ್ತು ಹೆಣ್ಣು ಸೃಷ್ಟಿ ಸಮಾನ ಎಂದು ಶಿವ ಪರಮಾತ್ಮರ ಅರ್ಧನಾರೀಶ್ವರ ಅವತಾರ ನಮಗೆ ಸಾರುತ್ತದೆ. ಭಾರತ ದೇಶದ ಕೆಲವು ಪ್ರದೇಶಗಳಲ್ಲಿ ಅರ್ಧನಾರೀಶ್ವರ ರೂಪದಲ್ಲಿ ಶಿವ ಪರಮಾತ್ಮನ ವಿಗ್ರಹಗಳು ಪೂಜಿಸಲಾಗುತ್ತದೆ ಆದರೆ ನಾವು ಇಂದು ಅರ್ಧನಾರೀಶ್ವರ ಆರೂಪದ ಶಿವಲಿಂಗವನ್ನು ಪೂಜಿಸುವ ದೇಗುಲದ ಪರಿಚಯ ಮಾಡಿಕೊಳ್ಳಲು ಹೊರಟಿದ್ದೇವೆ.
ಆತ್ಮೀಯರೇ ನಾವು ಇಂದು ಪರಿಚಯಿಸುತ್ತಿರುವ ಈ ದೇಶದಲ್ಲಿರುವ ಶಿವಲಿಂಗ 2 ಭಾಗಗಳಾಗಿ ವಿಂಗಡನೆಯಾಗಿದೆ ಶಿವಲಿಂಗದ ಒಂದು ಭಾಗವನ್ನು ಶಿವ ದೇವರು ಎಂದು ಮತ್ತೊಂದು ಭಾಗವನ್ನು ಪಾರ್ವತಿ ದೇವಿ ಎಂದು ಪರಿಗಣಿಸಿ ಎಲ್ಲಿ ಪೂಜಿಸಲಾಗುತ್ತದೆ ಎರಡು ಭಾಗಗಳಾಗಿ ವಿಂಗಡನೆ ಆದಂತಹ ವಿಶ್ವದ ಮೊದಲ ಶಿವಲಿಂಗ ಇದು ಎನಿಸಿಕೊಳ್ಳುತ್ತದೆ ಶಿವಲಿಂಗದ ಎರಡು ಭಾಗಗಳ ನಡುವಿನ ಅಂತರ ಬದಲಾಗುತ್ತಿರುವ ಋತುಮಾನಗಳಿಗೆ ಅನುಸಾರವಾಗಿ ತನ್ನಿಷ್ಟಕ್ಕೆ ತಾನೇ ಹೆಚ್ಚು ಕಡಿಮೆ ಆಗುತ್ತದೆ ನೀವು ವಿಶಿಷ್ಟ ವಿದ್ಯಾಮಾನಕ್ಕೆ ಕಾರಣ ಏನು ಎಂಬುದನ್ನು ಮಾತ್ರ ಯಾರಿಂದಲೂ ಪತ್ತೆ ಮಾಡಲು ಆಗಿಲ್ಲ.
ಈ ವಿಶಿಷ್ಟವಾದ ದೇಗುಲ ಇರುವುದು ಹಿಮಾಚಲ ಪ್ರದೇಶದ ಕದ್ಘಾಡಿ ಎಂಬಲ್ಲಿ ದೇಗುಲದ ಹೆಸರು ಮಹಾದೇವ ಮಂದಿರ ಹಿಮಾಚಲ ಪ್ರದೇಶದ ಖಡ್ಗರ್ ನಲ್ಲಿ ಇರುವ ಶಿವದೇವರ ಮಂದಿರ ಇಲ್ಲಿನ ವೈಶಿಷ್ಟ್ಯತೆಗಳಿಂದಲೇ ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಈ ದೇಗುಲದಲ್ಲಿ ಕಂಡುಬರುವಂತಹ ಶಿವಲಿಂಗ ಪ್ರಪಂಚದ ಬೇರೆ ಯಾವ ಸ್ಥಳದಲ್ಲಿ ಸಹ ಕಂಡುಬರುವುದಿಲ್ಲ ದೇವಾಲಯವು ಆರು ಅಡಿ ಉದ್ದ ಹಾಗೂ 5 ಅಡಿ ಸುತ್ತಳತೆಯ ಶಿವಲಿಂಗವನ್ನು ಹೊಂದಿದೆ ಈ ಶಿವಲಿಂಗವು ಸ್ವಯಂ ಚಾಲಿತವಾದ ಎರಡು ಭಾಗಗಳಾಗಿ ಒಡೆದುಕೊಂಡಿದೆ ಶಿವಲಿಂಗದ ಎರಡು ಭಾಗಗಳು ಒಂದೇ ಗಾತ್ರದಲ್ಲಿ ಇರುವುದಿಲ್ಲ ಶಿವಲಿಂಗದ ದೊಡ್ಡ ಭಾಗವನ್ನು ಶಿವ ಪರಮಾತ್ಮರೆಂದು ಸಣ್ಣ ಭಾಗವನ್ನು ಪಾರ್ವತಿ ದೇವಿ ಎಂದು ಪೂಜಿಸಲಾಗುತ್ತದೆ.
ಅಂದರೆ ಈ ಶಿವಲಿಂಗ ಅರ್ಧನಾರೀಶ್ವರ ಆ ರೂಪವಾಗಿದೆ ಈ ಶಿವಲಿಂಗ ಅರ್ಧನಾರೀಶ್ವರ ಶಿವಲಿಂಗ ಎಂದು ಕರೆಸಿಕೊಳ್ಳುತ್ತದೆ ಋತುಮಾನಕ್ಕೆ ಅನುಸಾರವಾಗಿ ಶಿವ ಪರಮಾತ್ಮರ ಅಂತರ ತನ್ನಷ್ಟಕ್ಕೆ ತಾನೇ ಹೆಚ್ಚು ಕಡಿಮೆ ಆಗುತ್ತಾ ಹೋಗುತ್ತದೆ.ಕಾಂಗ್ರಾ ಜಿಲ್ಲೆಯ ಕತ್ಗಢದಲ್ಲಿರುವ ಐತಿಹಾಸಿಕ ಶಿವ ದೇವಾಲಯವು ಎಲ್ಲರನ್ನೂ ಆಕರ್ಷಿಸುತ್ತದೆ. ಶಿವ ಮತ್ತು ತಾಯಿ ಪಾರ್ವತಿ ಇಲ್ಲಿ ಭೇಟಿಯಾಗುತ್ತಾರೆ. ಶಿವ ಮತ್ತು ಪಾರ್ವತಿ ಇಲ್ಲಿ ಶಿವಲಿಂಗದ ರೂಪದಲ್ಲಿದ್ದಾರೆ ಮತ್ತು ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಅವುಗಳನ್ನು ಪ್ರತ್ಯೇಕವಾಗಿ ಪೂಜಿಸಲಾಗುತ್ತದೆ.
ಶಿವರಾತ್ರಿಯಂದು ಈ ಎರಡು ಶಿವಲಿಂಗಗಳು ಒಟ್ಟಿಗೆ ಇರುತ್ತವೆ. ಮಹಾಶಿವರಾತ್ರಿ ಹಬ್ಬವಿರುವ ಮಾರ್ಚ್ 2022 ರಲ್ಲಿ ಮೊದಲ ದಿನಾಂಕದಂದು. ಕತ್ಗಢದಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.ಶಿವನ ರೂಪದಲ್ಲಿ ಪೂಜಿಸಲ್ಪಡುವ ಶಿವಲಿಂಗದ ಎತ್ತರವು ಸುಮಾರು 7-8 ಅಡಿಗಳು ಮತ್ತು ಪಾರ್ವತಿಯ ರೂಪದಲ್ಲಿ ಪೂಜಿಸುವ ಶಿವಲಿಂಗದ ಎತ್ತರವು ಸುಮಾರು 5-6 ಅಡಿಗಳು.ಈ ರೂಪವು ಬೇಸಿಗೆ ಕಾಲದಲ್ಲಿ ಎರಡು ಭಾಗಗಳಾಗಿ ವಿಂಗಡಿಸಲ್ಪಡುತ್ತದೆ ಮತ್ತು ಚಳಿಗಾಲದಲ್ಲಿ ಮತ್ತೆ ಒಂದು ರೂಪವನ್ನು ಪಡೆಯುತ್ತದೆ.