ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೂ ಬರೋಕಿಂತ ಮುಂಚೆ ಕರ್ನಾಟಕ ಎಲ್ಲ ಮಹಿಳೆಯರಿಗೂ ಕೂಡ ಫ್ರೀ ಬಸ್ ಉಚಿತವಾಗಿ ಸೌಲಭ್ಯವನ್ನು ಒದಗಿಸಿಕೊಡುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದರು ಅದೇ ರೀತಿಕಾಂಗ್ರೆಸ್ ಸರ್ಕಾರ ಗೆದ್ದ ನಂತರತಮ್ಮಪ್ರಣಾಳಿಕೆ ಪ್ರಕಾರವೇ ಎಲ್ಲ ಮಹಿಳೆಯರು ಕೂಡ ಉಚಿತವಾದ ಬಸ್ ಸೌಲಭ್ಯವನ್ನು ಒದಗಿಸಿ ಕೊಟ್ಟರು. ಈ ಸೌಲಭ್ಯ ಬಂದಾಗಿಂದಲೂ ಕೂಡ ಮಹಿಳೆಯರ ಮುಂಚಿತವಾಗಿ ನಾವು ನೋಡಿದರೆಬಹಳಷ್ಟು ಜನ ಈ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ನಾವು ನೋಡಬಹುದು. ಮೊದಲಿಂದಲೂ ಕೂಡ ಬಸ್ಸಿನಲ್ಲಿ ಕಾಣದಂತಹ ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಬಸ್ಸಿನಲ್ಲಿ ಬಹಳಷ್ಟು ತುಂಬಿರುತ್ತಾರೆ.

ಆದರೆ ಈಗ ಕೇಳಿದ ಪ್ರಕಾರ ಸೌಲಭ್ಯ ಮುಕ್ತಾಯಗೊಳ್ಳುತ್ತಿದೆ ಎಂದು ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ ಆದರೆ ಇದರ ಸಂಪೂರ್ಣವಾದ ಮಾಹಿತಿಯನ್ನು ನಾವು ಇಂದು ತಿಳಿದುಕೊಳ್ಳೋಣ. ಆದರೆ ಇತ್ತೀಚೆಗೆ ಸುದ್ದಿ ಪ್ರಕಾರ ಈ ಉಚಿತವಾದ ಸೌಲಭ್ಯವನ್ನು ಆಗಸ್ಟ್ 15 ನಂತರ ಬಂದು ಮಾಡಲಾಗುತ್ತಿದೆ ಎಂಬುದು ಸಿದ್ದರಾಮಯ್ಯನವರು ಹೇಳಿದ್ದಾರೆ. ಇದರ ಬಗ್ಗೆ ಸ್ವತಹ ಸಿದ್ರಾಮಯ್ಯನವರೇ ಆದೇಶ ನೀಡಲಾಗಿದ್ದು ಹೈಕೋರ್ಟ್ನಿಂದಲೂ ಕೂಡ ನೋಟಿಸ್ ಕೊಟ್ಟಿದ್ದಾರೆ ಎಂಬುದು ಈಗ ಬೆಳಕಿಗೆ ಬಂದಿದೆ ಅನ್ನೋ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ ಆದರೆ ಈ ವಿಷಯದ ಬಗ್ಗೆ ಸತ್ಯಂಶ ನಾವು ನೋಡುವುದಾದರೆ ಈ ಮಾಹಿತಿ ಶುದ್ಧ ಸುಳ್ಳಾಗಿದೆ ಏಕೆಂದರೆ.

ಎಲ್ಲೂ ಕೂಡ ಸಿದ್ದರಾಮಯ್ಯನವರು ಸ್ವತಃ ಈ ಆದೇಶವನ್ನು ಹೇಳಿಲ್ಲಆದರೆ ಈ ಒಂದು ಜಾಲತಾಣದಳಲ್ಲಿ ಈ ಸುಳ್ಳು ಸುದ್ದಿ ತುಂಬಾನೇ ಹಬ್ಬಿದೆ. ಹಾಗೆ ಯೌಟ್ಯೂಬ್ ಚಾನೆಲ್ ನಲ್ಲೂ ಕೂಡ ಬಹಳಷ್ಟು ಜನ ಈ ವಿಷಯವನ್ನು ಹೇಳಿದ್ದಾರೆ. ಹಾಗೆ ನೀವು ಕರ್ನಾಟಕದ ರಾಜ್ಯಾದ್ಯಂತ ಎಲ್ಲಿ ಬೇಕಾದರೂ ಉಚಿತವಾಗಿ ನೀವು ಪ್ರಯಾಣವನ್ನು ಮಾಡಬಹುದು. ಹಾಗೆ ನೋಡಿದರೆ ಈ ಒಂದು ಉಚಿತ ಪ್ರಯಾಣ ಹಲವಾರು ಜನರಿಗೆ ಬಹಳಷ್ಟು ಕಷ್ಟಗಳನ್ನು ನೀಡುತ್ತಿದೆ ಬಿಎಂಟಿಸಿ ಬಸ್ ಡ್ರೈವರ್ ಹೇಳುವ ಪ್ರಕಾರ ಇತ್ತೀಚಿನ ದಿನಗಳಲ್ಲಿ ಪ್ರಯಾಣ ಮಾಡುವಂತಹ ಮಹಿಳೆಯರ ಸಂಖ್ಯೆ ತುಂಬಾನೇ ಜಾಸ್ತಿಯಾಗುತ್ತಿದೆ ಎಂದು ಹೇಳಿದ್ದಾರೆ. ಮೊದಲು ಹಣ ಕೊಡುವಂತಹ ಪರಿಸ್ಥಿತಿ ಇದ್ದಾಗ ಮಹಿಳೆಯರು ತುಂಬಾನೇ ಕಡಿಮೆ ಓಡಾಡುತ್ತಿದ್ದರು ಆದರೆ ಯಾವಾಗ ಸಿದ್ದರಾಮಯ್ಯನವರು ಈ ಸೌಲಭ್ಯದ ಬಗ್ಗೆ ಘೋಷಣೆ ಮಾಡಿದರು ಅಂದಿನಿಂದ ಬಿಎಂಟಿಸಿ ಕೆಲಸ ಮಾಡುವವರಿಗೆ ತುಂಬಾನೇ ತೊಂದರೆ ಆಗುತ್ತಿದೆ ಎಂಬುದನ್ನು ನಾವು ಕೇಳಿಪಟ್ಟಿದ್ದೇವೆ.

ಆದರೆ ಈ ವಿಷಯ ಒಂದು ಕಡೆಯಾದರೆ ಇನ್ನು ಆಟೋ ಓಡಿಸುವವರ ಕಷ್ಟವೂ ಕೂಡ ಮುಗಿಲು ಮುಟ್ಟಿದೆ ಏಕೆಂದರೆ ಅವರ ಹತ್ತಿರ ಯಾರು ಕೂಡ ಹೋಗುತ್ತಿಲ್ಲ ದಿನ ಬಾಡಿಗೆಯಲ್ಲಿ ಕೆಲಸ ಮಾಡುವಂತಹ ಎಷ್ಟೋ ಜನ ಆಟೋ ಓಡಿಸುವವರ ಬಾಳು ಬೀದಿಗೆ ಬಂದಿದೆ ವ್ಯಾಪಾರವೇ ಇಲ್ಲದಂತಹ ಪರಿಸ್ಥಿತಿ ಎದುರಾಗುತ್ತಿದೆ ಆದರೆ ಈ ಎಲ್ಲವೂ ಕಷ್ಟಗಳು ಕೂಡ ಸಿದ್ದರಾಮಯ್ಯನವರಿಗೆ ತಲುಪುತ್ತಿಲ್ಲ ಎಂಬುದು ವಿಷಯ ಬಹಳಷ್ಟು ಸದ್ದು ಮಾಡುತ್ತಿದೆ ಆದರೆ ಸಿದ್ದರಾಮಯ್ಯನವರು ಈ ಪರಿಸ್ಥಿತಿಯನ್ನು ಹೇಗೆ ನಿವಾರಣೆ ಮಾಡುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಿದೆ

Leave a Reply

Your email address will not be published. Required fields are marked *