ನಾವು ಯಾವುದೇ ಒಂದು ಕೆಲಸವನ್ನು ಹುಡುಕಲು ಪ್ರಾರಂಭಿಸಿದರೆ, ಅದರಲ್ಲಿ ಛಲ ಎಂಬುದು ಇದ್ದರೆ ಹೇಗೆ ಇರಲಿ ಆ ಕೆಲಸ ಅದು ನಮಗೆ ಸಿಕ್ಕೆ ಸಿಗುತ್ತದೆ ಹಾಗೆ ಎಷ್ಟು ಜನಗಳಿಗೆ ಈ ಕೆಲಸದ ಅಗತ್ಯವಿದ್ದು ನಾವು ಈ ಮಾಹಿತಿ ಮುಖಾಂತರ ನಿಮಗೆ ಸ್ವಲ್ಪ ಮಟ್ಟಿಗೆ ಸಹಾಯವನ್ನು ಮಾಡುತ್ತೇವೆ. ಕೆಲಸದ ಬಗ್ಗೆ ನೋಡುವುದಾದರೆ ಇದು ಇರುವುದು ಅಂಚೆ ಕಚೇರಿಯಲ್ಲಿ ಅದು ಕೂಡ ಕೇಂದ್ರ ಸರ್ಕಾರದ ಆಡಳಿತದಲ್ಲಿ. ಇದರ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಆಗಸ್ಟ್ 2023 ರ ಇಂಡಿಯಾ ಪೋಸ್ಟ್ ಅಧಿಕೃತ ಅಧಿಸೂಚನೆಯ ಮೂಲಕ ಸ್ಟಾಫ್ ಕಾರ್ ಡ್ರೈವರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಇಂಡಿಯಾ ಪೋಸ್ಟ್ ಆಫೀಸ್ ಆಹ್ವಾನಿಸಿದೆ.
ಬೆಂಗಳೂರು ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನದ ಬಗ್ಗೆ ನಾವು ನೋಡುವುದಾದರೆ ಮೊದಲಿಗೆ ನಿಮಗೆ ಸಿಗುವುದು 19,900 ಇದಾದ ನಂತರ ನಿಮ್ಮ ಅನುಭವ ಹೇಗೆ ಹೆಚ್ಚಿಗೆ ಆಗುತ್ತದೆ ಹಾಗೆ ನಿಮ್ಮ ವೇತನ ಕೂಡ ಹೆಚ್ಚಿಗೆ ಆಗುತ್ತದೆ, ಗರಿಷ್ಠ ಪಕ್ಷ ನಿಮ್ಮ ವೇತನ ಎಷ್ಟರಮಟ್ಟಿಗೆ ಹೋಗುಬಹುದು ಎಂದು ನಾವು ನೋಡುವುದಾದರೆ 63,200 ತನಕ ನಿಮ್ಮ ವೇತನ ಮುಟ್ಟುತ್ತದೆ ಆದರೆ ಈ ಒಂದು ವಿಷಯವನ್ನು ನೆನಪಿನಲ್ಲಿ ಇಡಿ ಈ ಹಣ ನಿಮಗೆ ಅನುಭವದ ಮೇಲೆ ಸಿಗುತ್ತದೆ. ಈ ಒಂದು ಕೆಲಸದ ಆಯ್ಕೆ ವಿಧಾನವನ್ನು ನಾವು ನೋಡುವುದಾದರೆ ಚಾಲನಾ ಪರೀಕ್ಷೆ ಹಾಗೂ ಟ್ರೇಡ್ ಟೆಸ್ಟ್ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್ನೊಡ್ ಮಾಡಿ, ನಂತರ ಅದನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕಛೇರಿಯ ವಿಳಾಸಕ್ಕೆ ಸಲ್ಲಿಸಬೇಕು. ಈ ಒಂದು ನಮೂನೆವನ್ನು ನೀವು ಪಡೆದುಕೊಳ್ಳಬೇಕು ಎಂದರೆ ಈ ನಾವು ಕೆಳಗೆ ನೀಡಿರುವ ಲಿಂಕ್ ಅನ್ನು ತೆರೆದುಕೊಂಡು ಅದರಲ್ಲಿ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. https://karnatakajobinfo.com. ಅರ್ಜಿ ಸಲ್ಲಿಸುವ ವಿಳಾಸ ಮ್ಯಾನೇಜರ್, ಮೇಲ್ ಮೋಟಾರ್ ಸರ್ವಿಸ್, ಬೆಂಗಳೂರು 560001. ನಿಗದಿತ ಅರ್ಜಿ ಶುಲ್ಕದ ವಿವರ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಆಗಸ್ಟ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15, 2023 ಉದ್ಯೋಗಗಳು ಈ ಕೆಳಕಂಡ ಜಾಗದಲ್ಲಿ ಖಾಲಿ ಇವೆ ಚಿಕ್ಕೋಡಿ, ಕಲಬುರಗಿ, ಧಾರವಾಡ, ಗದಗ, ಕಾರವಾರ, ಬೆಂಗಳೂರು, ಮಂಡ್ಯ, ಮೈಸೂರು, ಪುತ್ತೂರು, ಶಿವಮೊಗ್ಗ, ಉಡುಪಿ, ಕೋಲಾರ ಈ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ