ಹೊಂಗೆ ಮರವು ಹಳ್ಳಿಯ ಜನರಿಗೆ ಚಿರಪರಿಚಿತವಾದ ಗಿಡವಾಗಿದ್ದು, ಇದನ್ನ ತಂಪಾದ ನೆರಳಿಗಾಗಿ ಹೊಲದ ಸುತ್ತಮುತ್ತ ರೈತರು ಹಾಕಿಕೊಂಡಿರುತ್ತಾರೆ. ಈ ಮರದ ಕಾಂಡವು ಕೆತ್ತನೆಗೂ ಉಪಯುಕ್ತವಾಗಿದೆ. ಹೊಂಗೆ ಮರಕ್ಕೆ ಸಂಸ್ಕೃತದಲ್ಲಿ ಕರಂಜನ ಪುತಿಕ ಚಿರ ಬಿಲ್ವ ಎಂಬ ಪರ್ಯಾಯ ಹೆಸರುಗಳಿವೆ. ಹೊಂಗೆ ಮರದ ಹೂವು, ಎಲೆ ಕಾಯಿ ಬೀಜಗಳು ಮರದ ಉಪಯುಕ್ತ ಭಾಗಗಳಾಗಿವೆ. ಇನ್ನು ಇವುಗಳಿಂದ ನಮಗೆ ಯಾವೆಲ್ಲಾ ಆರೋಗ್ಯದ ಲಾಭ ಗಳು ಸಿಗುತ್ತವೆ ಎಂಬುದನ್ನು ಈ ಮಾಹಿತಿ ಮುಖಾಂತರ ತಿಳಿದು ಕೊಳ್ಳೋಣ.ಸರ್ಪ ಸುತ್ತು, ತುರಿಕೆ, ಕಜ್ಜಿ ಮುಂತಾದವುಗಳಿಗೆ ಹೊಂಗೆಯ ಎಣ್ಣೆಯ ಲೇಪನದಿಂದ ನಾವೇ ಉರಿ ಕಡಿಮೆಯಾಗುತ್ತದೆ. ಹೊಂಗೆ ಎಣ್ಣೆಯನ್ನ ಹೊಟ್ಟೆಗೆ ತೆಗೆದುಕೊಂಡಲ್ಲಿ ಉದರದ ಜಂತುಗಳು ನಾಶವಾಗುತ್ತವೆ. ಗಾಯಗಳಾಗಿದ್ದಲ್ಲಿ ಹೊಂಗೆ ಎಣ್ಣೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.
ಎಣ್ಣೆ ಲೇಪಿಸಿ ಕೊಳ್ಳುವುದಲ್ಲದೆ ಹೊಗೆಯ ಶಾಖ ತೆಗೆದುಕೊಳ್ಳುವುದರ ಮೂಲಕ ಗಾಯಗಳನ್ನು ವಾಸಿ ಮಾಡ ಬಹುದಾಗಿದೆ ಹಾಗು ಮುನ್ನು ಹಳೆಯದಾಗಿದ್ದಲ್ಲಿ ಹೊಂಗೆ ಎಣ್ಣೆಯ ಲೇಪನದಿಂದ ಗಾಯ ವಾಸಿಯಾಗುತ್ತದೆ. ಇನ್ನು ಕೈಕಾಲು ಊತ ಬಂದಿದ್ದಲ್ಲಿ ಹೋಗೆ ಬೇರಿನ ರಸವನ್ನು ತೆಂಗಿನ ಹಾಲಿನ ಜೊತೆಗೆ ಬೆರೆಸಿ ಸೇವಿಸ ಬೇಕು. ಕೆಮ್ಮಿನಿಂದ ಬಳಲುವವರು ಹೊಂಗೆ ಬೀಜವನ್ನ ಪುಡಿ ಮಾಡಿ ಸೇವಿಸುವುದರಿಂದ ಕೆಮ್ಮು ಗುಣಮುಖವಾಗುತ್ತದೆ. ಅಜೀರ್ಣ ಭೇದಿ ಹೊಟ್ಟೆಯುಬ್ಬರವಿರುವಾಗ ಹೊಂಗೆಯ ಚಿಗುರು ಎಲೆ ತಿನ್ನುವುದರಿಂದ ನಿವಾರಣೆಯಾಗುತ್ತದೆ. ಮೈಮೇಲೆ ಪಿತ್ತದ ಗಾಯಗಳು ಇದ್ದಾಗ ಎಲೆಯ ರಸ ಲೇಪಿಸಬೇಕು. ಅಲ್ಲದೆ ಎಲೆಯ ರಸವನ್ನು ಮೊಸರಿನೊಡನೆ ಬೆರೆಸಿ ಕುಡಿಯ ಬೇಕು. ಇನ್ನು ಸಿಹಿ ರೋಗಿಗಳು ಹಂಗೆ ಹೂವಿನ ಕಷಾಯ ಕುಡಿಯುವುದರಿಂದ ರೋಗ ವನ್ನ ಆದಷ್ಟು ಕಡಿಮೆ ಮಾಡಬಹುದು. ತಲೆಕೂದಲು ಉದುರುತ್ತಿದ್ದರೆ ಹೊಂಗೆ ಹೂವನ್ನು ಅರಿದು ಲೇಪಿಸುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ಬೆಳೆಯಲಾರಂಭಿಸುತ್ತದೆ.
ಇನ್ನು ಕುರುಹು ಆಗುತ್ತಿದ್ದಲ್ಲಿ ಹೊಂಗೆ ಎಲೆಯನ್ನ ಎಲಕ್ಕಿ ಯೊಂದಿಗೆ ಅರೆದು ಲೇಪಿಸುವುದರಿಂದ ಕುರುಗಳು ಮಾಯವಾಗುತ್ತದೆ. ಮೂಲವ್ಯಾಧಿ ಯಲ್ಲಿ ರಕ್ತಸ್ರಾವ ವಾಗುತ್ತಿದ್ದಲ್ಲಿ ಹೊಂಗೆ ಬೇರನ್ನು ಅರೆದು ಮಜ್ಜಿಗೆಯೊಂದಿಗೆ ಬೆರೆಸಿ ಸೇವಿಸುವುದರಿಂದ ರಕ್ತ ಸ್ರಾವ ವನ್ನು ಕೂಡ ತಡೆಯಬಹುದು. ಇನ್ನು ಒಬ್ಬರ ಶರೀರ ಮತ್ತೊಬ್ಬರ ಶರೀರಕ್ಕಿಂತ ವಿಭಿನ್ನವಾಗಿರುವುದರಿಂದ ಇದನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಇದಲ್ಲದೆ, ಸಾವಯವ ಕೃಷಿಯಲ್ಲಿ ಇದು ಅತ್ಯುತ್ತಮ ಗೊಬ್ಬರವಾಗಿದೆ. ಪ್ರಾಚೀನ ಭಾರತೀಯ ವೈದ್ಯಕೀಯದಲ್ಲಿ ಈ ಮೂಲಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಸ್ಯದ ಕೀಟನಾಶಕ ಗುಣದಿಂದಾಗಿ, ಇದನ್ನು ಕೀಟಗಳು ಮತ್ತು ಕೀಟಗಳ ನಿಯಂತ್ರಣವಾಗಿ ಬಳಸಲಾಗುತ್ತದೆ, ಮತ್ತು ಇದನ್ನು ಔಷಧಾಲಯದಲ್ಲಿ ಮತ್ತು ಜೈವಿಕ ಇಂಧನವಾಗಿಯೂ ಬಳಸಲಾಗುತ್ತದೆ. ಭಾರತವು ಈ ಮರದ ಸ್ಥಳೀಯವಾಗಿದೆ ಮತ್ತು ಇದು ಉತ್ತರ ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ವ್ಯಾಪಕವಾಗಿ ವಿತರಿಸಲ್ಪಟ್ಟಿದೆ .