ಚಂದನ ವಾಹಿನಿಯಲ್ಲಿ ಬರುವ ತಟ್ ಅಂತ ಹೇಳಿ ಬಂದ ಕೂಡಲೇ ಕೆಲಸ ಕಾರ್ಯ ಎಲ್ಲ ಬಿಟ್ಟು ಮನೆಮಂದಿಯೆಲ್ಲ ಟಿವಿ ಮುಂದೆ ಕೂರುತ್ತೇವೆ. ಇದಕ್ಕೆಲ್ಲ ಕಾರಣ ಡಾಕ್ಟರ್ ಸೋಮೇಶ್ವರ ಅವರ ನಿರೂಪಣೆ ಅತ್ಯಂತ ಸ್ವಚ್ಛ ಕನ್ನಡ ಬಳಸುವ ಏಕೈಕ ನಿರೂಪಕರು ಇವರ ಮಾತುಗಳನ್ನು ಕೇಳುತ್ತಿದ್ದರೆ ಮನಸ್ಸಿಗೆ ಎಷ್ಟೋ ಸಂತೋಷವಾಗುತ್ತೆ. ಅಂದು ದುಡ್ಡಿಲ್ಲದೇ ಶಾಲೆಗೆ ಹೋಗುವುದನ್ನೇ ನಿಲ್ಲಿಸುತ್ತಾರೆ ಇಂದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಅಧಿಪತಿಯಾಗುತ್ತಾರೆ. ಸೋಮೇಶ್ವರ ಅವರ ಜೀವನದ ರೋಚಕ ಕಥೆಯನ್ನು ನೋಡೋಣ ಬನ್ನಿ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇದ್ದ ಅಂಜನಾ ಮತ್ತು ನಾಗಮ್ಮ ದಂಪತಿಯ ಮಗನಾಗಿ ಜನಿಸುತ್ತಾರೆ. ಸೋಮೇಶ್ವರ ಅವರ ತಂದೆ ಬಡತನದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಓದಿನಲ್ಲಿ ತುಂಬಾ ಜಾಣರಾದ ಸೋಮೇಶ್ವರ ಅವರು ಕಷ್ಟಪಟ್ಟು ಹತ್ತನೇ ತರಗತಿ ಮುಗಿಸುತ್ತಾರೆ.

ಬಡತನ ಇದ್ದ ಕಾರಣ ಪೋಷಕರಿಗೆ ಸೋಮೇಶ್ವರ ಅವರನ್ನು ಮುಂದೆ ಓದಿಸಲು ಆಗಲಿಲ್ಲ. ಓದುವ ಹಂಬಲ ಇದ್ದರೂ ಕೂಡ ಮನೆಯ ಪರಿಸ್ಥಿತಿಗೆ ಸೋಮೇಶ್ವರ ಅವರು ಶರಣಾಗುತ್ತಾರೆ. ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಮನೆಯಲ್ಲೇ ಸೋಮೇಶ್ವರ ಬೋಧನೆ ಮಾಡಲು ಶುರು ಮಾಡುತ್ತಾರೆ. ಬೋಧನೆಯಿಂದ ಸ್ವಲ್ಪ ಹಣ ಸಿಗುತ್ತೆ. ಕನ್ನಡ ಸಾಹಿತ್ಯ ವಿಜ್ಞಾನದಲ್ಲಿ ತುಂಬಾ ಆಸಕ್ತಿಯಿಂದ ಸೋಮೇಶ್ವರ ಅವರು ಬೋಧನೆ ಮಾಡಿ ಬಂದ ಹಣದಲ್ಲಿ ಪುಸ್ತಕ ವನ್ನು ಖರೀದಿ ಮಾಡುತ್ತಿದ್ದರು. ಆ ಸಮಯದಲ್ಲಿ ದೆಹಲಿಯ ಪಬ್ಲಿಕೇಶನ್‌ನ ಸೈನ್ಸ್ ರಿಪೋರ್ಟ್ಸ್ ಎಂಬ ಪುಸ್ತಕ ಆಂಗ್ಲಭಾಷೆ ಯಲ್ಲಿ ಪ್ರಕಟವಾಗುತ್ತಿತ್ತು. ಈ ಪುಸ್ತಕದಲ್ಲಿ ವಿಜ್ಞಾನದ ಬಗ್ಗೆ ತುಂಬಾ ವಿಷಯಗಳನ್ನು ಒಳಗೊಂಡಿತ್ತು. ಇದನ್ನೆಲ್ಲ ಸೋಮೇಶ್ವರ ಅವರು ಅನುಮತಿ ಮೇರೆಗೆ ವಿಜ್ಞಾನದ ಅಂಕಣಗಳನ್ನು ಕನ್ನಡಕ್ಕೆ ಅನುವಾದಿಸಿ ಸ್ಥಳೀಯ ಪತ್ರಿಕೆಗಳಿಗೆ ಪ್ರಕಟಣೆ ಮಾಡಲು ಆರಂಭಿಸುತ್ತಾರೆ.

ಇದರಿಂದಲೂ ಸಹ ಸೋಮೇಶ್ವರ ಅವರಿಗೆ ಸ್ವಲ್ಪ ದುಡ್ಡು ಸಂಗ್ರಹ ಆಗುತ್ತೆ. ಅಷ್ಟೇ ಅಲ್ಲದೆ ಸೋಮೇಶ್ವರ ಅವರು ಪತ್ರಿಕೆಗಳಿಗೆ ಕಾರ್ಟೂನ್ ಬರಹ ಬರೆದು ಕೂಡ ಕೊಡುತ್ತಿದ್ದರು. ಒಂದು ಕಾರ್ಟೂನ್ ಬರಹ ಕ್ಕೆ ₹3 ಸಿಗುತ್ತಿತ್ತು. ಪ್ರತಿದಿನ ಮಲ್ಲೇಶ್ವರಂನಿಂದ ಎಂ ಜಿ ರೋಡ್ ವರೆಗೆ ಎಂಟು ಕಿಲೋ ಮೀಟರ್ ನಡೆದುಕೊಂಡು ಹೋಗಿ ಪತ್ರಿಕೆ ಕಛೇರಿಗೆ ತಾವು ಬರೆದ ಕಾರ್ಟೂನ್ ಚಿತ್ರ ಕೊಟ್ಟು ಮತ್ತೆ ನಡೆದುಕೊಂಡು ವಾಪಸ್ ಬರುತ್ತಿದ್ದರು. ಬಸ್ ಅಥವಾ ಆಟೋ ದಲ್ಲಿ ಹೋಗಲು ಸೋಮೇಶ್ವರ ಅವರ ಹತ್ರ ದುಡ್ಡಿಲ್ಲ. ಇದೆಲ್ಲ ಆಗಿದ್ದು 1971 ರಿಂದ 1974. ಇದರಿಂದ ಬಂದ ಹಣವನ್ನು ಕೂಡಿ ಟ್ಟುಕೊಂಡು ನಿಂತು ಹೋಗಿದ್ದ ವಿದ್ಯಾಭ್ಯಾಸವನ್ನು ಮತ್ತೆ ಶುರು ಮಾಡುತ್ತಾರೆ. ಯೂಸ್ ಮಾಡುತ್ತಾ ಸಣ್ಣ ಪುಟ್ಟ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತ ದುಡಿಯುತ್ತಾರೆ. ಪಿಯುಸಿ ಆದ ಮೇಲೆ ಬೆಂಗಳೂರಿನ ಮೆಡಿಕಲ್ ಮತ್ತು ರಿಸರ್ಚ್ ಪದವಿಗೆ ಸೇರುತ್ತಾರೆ.

ಇದರ ಜೊತೆ ಕಥೆ, ಕವನ, ಕಾದಂಬರಿ, ವಿಜ್ಞಾನ, ಲೇಖನ ವನ್ನು ಕೂಡ ಬರೆಯುತ್ತಾರೆ. ಆಗಿನ ಕಾಲದಲ್ಲಿ ವಿಜ್ಞಾನದ ಲೇಖನ ವನ್ನು ಬರೆಯುತ್ತಿದ್ದ ವರು ಬಹಳ ಕಮ್ಮಿ. ಸೋಮೇಶ್ವರ ಅವರು ಈ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ. ಇವರು ಬರೆಯುತ್ತಿದ್ದ ವಿಜ್ಞಾನದ ಲೇಖನ ವನ್ನು ಪತ್ರಿಕೆಗಳ ಲ್ಲಿ ಪ್ರಕಟ ಮಾಡಲು ಶುರು ಮಾಡುತ್ತಾರೆ. ಪತ್ರಿಕೆ ಓದುತ್ತಿದ್ದ ಗ್ರಾಹಕರಿಗೂ ಕೂಡ ಈ ವಿಜ್ಞಾನದ ಲೇಖನ ತುಂಬಾ ಇಷ್ಟ ಆಗುತ್ತೆ. ಶನಿವಾರ ಭಾನುವಾರ ಬಂದ ಕೂಡಲೇ ಬೆಂಗಳೂರಿನಲ್ಲಿರುವ ಸೆಂಟ್ರಲ್ ಲೈಬ್ರರಿ ಯಲ್ಲಿ ಬೆಳಗ್ಗಿನಿಂದ ರಾತ್ರಿ ತನಕ ಪುಸ್ತಕ ಓದುವುದು. ಸೋಮೇಶ್ವರ ಅವರು ಬಿಎಸ್ಸಿ ಪದವಿ ಮುಗಿದ ಬಳಿಕ ಎಂಬಿಬಿಎಸ್ ಪದವಿ ಸೇರುತ್ತಾರೆ. ಹಲವಾರು ಮಹತ್ವದ ವೈಜ್ಞಾನಿಕ ಲೇಖನ ಗಳನ್ನು ಕನ್ನಡ ದಲ್ಲಿ ಬರೆದು ಜನರಿಗೆ ತಲುಪುವಂತೆ ಮಾಡುತ್ತಾರೆ.

ವೈದ್ಯ ವಿಜ್ಞಾನ ವ್ಯಾಸಂಗ ಮಾಡುವಾಗ ಅಲ್ಲಿನ ಸೈನ್ಸ್ ಮ್ಯಾಗಜೀನ್ ಒಂದಕ್ಕೆ ಸಂಪಾದಕರು ಆಗುವ ಹೊಣೆ ಸೋಮೇಶ್ವರ ಅವರಿಗೆ ಬರುತ್ತೆ. ಮೊದಲಿಗೆ ಆ ಯೋಗ್ಯತೆ ನನಗೆ ಇಲ್ಲ ಎಂದು ಸೋಮೇಶ್ವರ ಅವರು ತಿರಸ್ಕರಿಸುತ್ತಾರೆ. ಸಹಪಾಠಿಗಳ ಒತ್ತಡ ಕ್ಕೆ ಮಣಿ ದು ಸಂಪಾದಕರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಈ ಮ್ಯಾಗಜಿನ್ ಹೆಸರು ಜೀವನಾಡಿ ದೂರದರ್ಶನ ದಲ್ಲಿ ಸೋಮೇಶ್ವರ ಅವರು ವಿಜ್ಞಾನ ಹಾಗೂ ಆರೋಗ್ಯ ಜಾಗೃತಿ ಬಗ್ಗೆ ಇಲ್ಲಿಯ ವರೆಗೂ 1200 ಕ್ಕೂ ಹೆಚ್ಚು ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಿದ್ದಾರೆ. ಆಲ್ ಇಂಡಿಯಾ ರೇಡಿಯೋ ದಲ್ಲಿ ತಮ್ಮ ಧ್ವನಿಯಿಂದ 1000 ಕ್ಕೂ ಹೆಚ್ಚು ಪ್ರೋಗ್ರಾಂಗಳನ್ನು ಕೊಟ್ಟಿದ್ದಾರೆ.

ಸೋಮೇಶ್ವರ ಅವರ ಸಾಹಿತ್ಯ ಕ್ಷೇತ್ರದ ಕೊಡುಗೆ ಗೆ ರಾಜ್ಯ ಸರ್ಕಾರ ಎರಡು ಬಾರಿ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟಿದೆ. 2002 ರ ಜನವರಿಯಲ್ಲಿ ತಟ್ ಅಂತ ಹೇಳಿ ಕಾರ್ಯಕ್ರಮ ಶುರುವಾಗುತ್ತೆ. ಇಂದಿಗೂ ಕೂಡ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದುವರೆಗೂ 4000 ಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ತಟ್ ಅಂತ ಹೇಳಿ ಪ್ರಸಾರ ಮಾಡಿದೆ. ಅಷ್ಟೇ ಅಲ್ಲದೆ ತಟ್ ಅಂತ ಹೇಳಿ ಗಿನ್ನಿ ಸ್ ದಾಖಲೆ ಕೂಡ ಸೇರ್ಪಡೆಯಾಗಿದೆ. ಅತಿ ಹೆಚ್ಚು ದೀರ್ಘಕಾಲದ ನಿರೂಪಣೆ ಮಾಡುತ್ತಿರುವ ಹೆಗ್ಗಳಿಕೆಯಿಂದ ಸೋಮೇಶ್ವರ ಅವರ ಹೆಸರನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿಸ ಲಾಗಿದೆ. ವಿಜ್ಞಾನ, ಸಾಹಿತ್ಯ ಕ್ಷೇತ್ರದಲ್ಲಿ ಇದುವರೆಗೂ ಸೋಮೇಶ್ವರ ಅವರಿಗೆ ಐವತ್ತ ಕ್ಕೂ ಹೆಚ್ಚು ಶ್ರೇಷ್ಠ ಪ್ರಶಸ್ತಿಗಳು ದಕ್ಕಿವೆ.

Leave a Reply

Your email address will not be published. Required fields are marked *