ನಮಸ್ಕಾರ ಸ್ನೇಹಿತರೆ ಕೆಲವರಿಗೆ ಸಾಕುಪ್ರಾಣಿಗಳನ್ನು ಸಾಕುವ ಅಭ್ಯಾಸ ಇರುತ್ತದೆ. ಕೆಲವರು ಬೇಕ್ಕು ಮತ್ತು ಇನ್ನು ಕೆಲವರು ಗಿಳಿ ಪಾರಿವಾಳವನ್ನು ಸಾಕುತ್ತಿದ್ದ ರೆ ತುಂಬಾ ಜನರು ಮನೆಯಲ್ಲಿ ನಾಯಿ ಸಾಕುವುದಕ್ಕೆ ಇಷ್ಟಪಡುತ್ತಾರೆ. ಮನೆಯನ್ನ ಕಾಯುತ್ತವೆ ಮತ್ತು ಪ್ರತಿಯೊಬ್ಬರ ಒಂಟಿತನವನ್ನು ದೂರ ಮಾಡುವ ಕೆಲಸವನ್ನ ಈ ನಾಯಿಗಳು ಮಾಡುತ್ತವೆ. ಜೊತೆಗೆ ಇವು ತುಂಬಾ ನಿಯತ್ತಾಗಿರುವ ಪ್ರಾಣಿಗಳು ಕೂಡ ಆಗಿವೆ. ವಾಸ್ತು ಶಾಸ್ತ್ರದ ಪ್ರಕಾರ ನಾಯಿಗಳನ್ನ ಸಾಕುವುದರಿಂದ ಸಿಗುವ ಲಾಭಗಳ ಬಗ್ಗೆ ನಾವು ತಿಳಿಯೋಣ. ನಾಯಿಯನ್ನು ಕಾಲಭೈರವೇಶ್ವರನ ಸೇವಕ ಎಂದು ಹೇಳಲಾಗುತ್ತೆ. ಕಾಲಭೈರವನ ಫೋಟೋದಲ್ಲಿ ನೀವು ನಾಯಿಯನ್ನು ಕೂಡ ನೋಡಿರುತ್ತೀರಿ. ಹಾಗಾದರೆ ನಾಯಿಯನ್ನು ಸಾಕುವುದು ಶುಭವೋ ಅಥವಾ ಅಶುಭವೋ ಎನ್ನುವುದನ್ನು ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.
ನಾಯಿಗೆ ಅನ್ನವನ್ನು ಹಾಕಿದರೆ ಭೈರವನ ಆಶೀರ್ವಾದಕ್ಕೆ ನೀವು ಒಳಗಾಗುತ್ತೀರಿ. ಒಂದು ವೇಳೆ ನೀವು ನಾಯಿಗೆ ಹೂಡೆದರೆ ಅಥವಾ ಗಾಯವನ್ನುಂಟು ಮಾಡಿದರೆ ನೀವು ದೊಡ್ಡ ಪಾಪಿ ಎಂದು ಹೇಳಬಹುದು. ನಿಮಗೆ ಕೆಲವೊಂದಿಷ್ಟು ತೊಂದರೆಗಳು ಬರುತ್ತವೆ. ಹಾಗಾಗಿ ನಾಯಿಗೆ ಗಾಯವನ್ನು ಮಾಡುವುದು, ಹೊಡೆಯುವುದು ಮಾಡಬಾರದು. ಕೆಲವರಿಗೆ ಬೇಸರದ ಸಂಗತಿ ಎಂದರೆ ನಿಮ್ಮ ಮನೆಯಲ್ಲಿ ನಾಯಿಯನ್ನು ಸಾಕಿದರೆ ನಿಮ್ಮ ಅಕ್ಕ ಪಕ್ಕದ ಮನೆಯವರು ನಿಮ್ಮ ನಾಯಿಗೆ ಯಮ ದೂತರಾಗಿ ಕಾಡುವುದು ಪಕ್ಕಾ. ಹಾಗಾಗಿ ಅದರ ಬಗ್ಗೆ ಸ್ವಲ್ಪ ಗಮನವಿರಲಿ ನಾಯಿಗೆ.ಯಾವುದೇ ತರಹದ ಗಾಯ ಮತ್ತು ನೋವುಗಳನ್ನ ಮಾಡ್ಬೇಡಿ. ಇನ್ನು ನಾಯಿ ಭವಿಷ್ಯದಲ್ಲಿ ನಡೆಯುವ ಘಟನೆ ಬಗ್ಗೆ ಇದು ಮೊದಲ ತಿಳಿದುಕೊಳ್ಳುತ್ತದೆ. ನಾಯಿ ಇರುವ ಕಡೆ ನಕಾರಾತ್ಮಕ ಶಕ್ತಿಗಳು ವಾಸ ಮಾಡುವುದಿಲ್ಲ. ಹಾಗಾಗಿ ಅದು ಕೆಲವೊಮ್ಮೆ ನಮಗೆ ಕೆಲವೊಂದಿಷ್ಟು ಸೂಚನೆಯನ್ನ ನೀಡುತ್ತದೆ.
ರಾತ್ರಿ ಕೂಗುವುದು, ಬೊಗಳುವುದು ಹೀಗೆ ಹಲವಾರು ಸೂಚನೆಯ ಮೂಲಕ ನಮ್ಮನ್ನು ಕಾಪಾಡುತ್ತದೆ. ಜೊತೆಗೆ ರಾಹು ಮತ್ತು ಕೇತುಗಳ ಗ್ರಹ ದೋಷದಿಂದ ನಮ್ಮನ್ನ ದೂರ ಮಾಡುತ್ತದೆ. ಅದರಿಂದ ನಮ್ಮನ್ನು ಕಾಪಾಡುತ್ತದೆ.ನಾವು ಸಾಕಿದ ನಾಯಿಯು ಮನೆಯ ಉತ್ತರ ಮತ್ತು ಪಶ್ಚಿಮ ಕೋಣೆಯಲ್ಲಿ ಮಲಗುವಂತಹ ನಾಯಿ ಆಗಿದ್ದರೆ ಅದು ನಮ್ಮ ರಕ್ಷಣೆಗೆ ಸದಾ ಮುಂದಿರುತ್ತದೆ ಹಾಗು ನಮ್ಮ ಮನೆಯ ಸುತ್ತಮುತ್ತ ನಮ್ಮ ಮನೆಯ ಪರಿಸರದಲ್ಲಿ ತಿರುಗಾಡುತ್ತಿದ್ದ ಓಡಾಡುತ್ತಾ ಇರುತ್ತದೆ. ಅದರರ್ಥ ಈ ನಾಯಿಯು ಇಡೀ ಮನೆಯನ್ನ ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ಅರ್ಥ. ಶಾಸ್ತ್ರ ಗಳ ಅನುಸಾರವಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ನಾಯಿ ಏನಾದರು ಇದ್ದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ಶಕ್ತಿ ಬರುವುದಿಲ್ಲ. ಯಾವಾಗಲೂ ಸಕಾರಾತ್ಮಕ ಶಕ್ತಿಗಳು ಇರುತ್ತವೆ ಎಷ್ಟೇ ಕಷ್ಟ ಪಟ್ಟರು ಕೆಲಸದಲ್ಲೂ ಯಶಸ್ಸು ಸಿಗದೆ ಇದ್ದ ರೂ ಇಂತಹ ಸಮಯದಲ್ಲಿ ಮನೆಯಲ್ಲಿ ನಾಯಿ ಇದ್ದರೆ ನಿಮಗೆ ಒಂದಷ್ಟು ಮನಸ್ಸಿನಲ್ಲಿ ಬದಲಾವಣೆಗಳನ್ನು ತರುತ್ತದೆ