ಬಾಳೆಹಣ್ಣು ಹೆಚ್ಚು ಅವುಗಳ ಮೇಲೆ ಚುಕ್ಕಿ ಚುಕ್ಕಿ ಬಂದು ಬಿಡುತ್ತದೆ. ಆಗ ಅವುಗಳನ್ನು ತಿನ್ನಲು ಮನಸ್ಸು ಬರುವುದಿಲ್ಲ. ಬಹುಶಃ ಇದು ಕೊಳೆತು ಹೋಗಿರಬಹುದು ಎಂದುಕೊಂಡು ಹೊರಗಡೆ ಬಿಸಾಡುತ್ತೇವೆ. ಆದರೆ ಇದು ಕಪ್ಪು ಬಾಳೆಹಣ್ಣಿನಿಂದ ಅದರಲ್ಲೂ ಹಣ್ಣಾದ ಬಾಳೆಹಣ್ಣಿ ನಿಂದ ನಮಗೆ ಹೆಚ್ಚು ಪ್ರಯೋಜನಗಳು ಸಿಗುತ್ತವೆ. ಹಾಗಾದರೆ ಅವುಗಳ ಬಗ್ಗೆ ಇವತ್ತಿನ ಮುಖಾಂತರ ತಿಳಿದು ಕೊಳ್ಳೋಣ. ಬಾಳೆಹಣ್ಣು ಮಾಗಿದಷ್ಟು ತಿನ್ನಲು ಚಂದ. ಬಾಳೆಹಣ್ಣಿನಲ್ಲಿ ಸ್ಟಾರ್ಚ್ ಅಂಶ ಇರುತ್ತ ದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಹಣ್ಣಾಗದೆ ಅರ್ಧಂಬರ್ದ ಕಾಯಿ ಬಾಳೆಹಣ್ಣಿನಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಗಳು ಜಾಸ್ತಿ ಇರುತ್ತವೆ. ಆದರೆ ಬಾಳೆಹಣ್ಣು ಮಾಗಿದರೆ ಅದರಲ್ಲಿರುವ ಸ್ಟಾರ್ಸ್ ಸಿಂಪಲ್ ಶುಗರ್ ಆಗಿ ಬದಲಾಗುತ್ತದೆ ಮಾಗಿದ ಬಾಳೆಹಣ್ಣು ಮಧುಮೇಹಿಗಳಿಗೆ ಅಷ್ಟು ಒಳ್ಳೆಯದಲ್ಲ ಎಂದು ಹೇಳುತ್ತಾರೆ.
ಏಕೆಂದರೆ ಅದನ್ನು ತಿಂದ ನಂತರ ರಕ್ತದಲ್ಲಿ ಸಕ್ಕರೆ ಪ್ರಮಾಣ ಇದ್ದಕ್ಕಿದ್ದಂತೆ ಏರಿಕೆಯಾಗುತ್ತದೆ. ಇನ್ನು ಬಾಳೆ ಹಣ್ಣು ಹಣ್ಣಾಗಿದರೂ ಅಥವಾ ಕಾಯಿ ರೂಪದಲ್ಲಿದ್ದರೂ ಅದರಲ್ಲಿನ ಕ್ಯಾಲರಿಗಳು ಮಾತ್ರ ಬದಲಾಗುವುದಿಲ್ಲ. ಆದರೆ ಒಂದು ಅಚ್ಚರಿಯ ವಿಷಯ ಏನೆಂದರೆ ಬೇರೆ ಹಣ್ಣುಗಳಿಗೆ ಹೋಲಿಸಿದರೆ ಬಾಳೆ ಹಣ್ಣಿನಲ್ಲಿ ಕ್ಯಾಲೋರಿಗಳು ಯಾವಾಗಲು ಅಪಾರ ಪ್ರಮಾಣದಲ್ಲಿ ಕಂಡುಬರುತ್ತವೆ. ಇನ್ನು ಬಾಳೆ ಮೇಲೆ ಅಲ್ಲಲ್ಲಿ ಕಂದು ಬಣ್ಣದ ಚುಕ್ಕೆಗಳು ಬಂದಿರುತ್ತವೆ. ನೀವು ಅದನ್ನು ಗಮನಿಸಿರಬಹುದು. ಇದರ ಸೀಕ್ರೇಟ್ ಏನು? ಗೊತ್ತ ಕ್ಲೋರೋ ಫಿಲ್ ಅಂಶಗಳು ಆಂಟಿಆಕ್ಸಿಡೆಂಟ್ ಗಳಾಗಿ ಬದಲಾಗುತ್ತವೆ. ನಿಮ್ಮ ಸಂಸ್ಕೃತಿ ಇತ್ಯಾದಿಗಳಲ್ಲಿ ಬಾಳೆಹಣ್ಣನ್ನು ಹಾಕಿ ಕುಡಿದರೆ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಸಿಗುತ್ತವೆ. ಇದಕ್ಕೆ ಹೆಚ್ಚುವರಿ ಸಕ್ಕರೆ ಹಾಕುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಬಾಳೆಹಣ್ಣು ಮೊದಲೇ ಸಿಹಿ ಇರುತ್ತದೆ.
ಇನ್ನು ಚೆನ್ನಾಗಿ ಮಾಗಿದ ಬಾಳೆಹಣ್ಣು ತನ್ನಲ್ಲಿ ಮೈಕ್ರೋ ನ್ಯೂಟ್ರಿಯಂಟ್ ಗಳನ್ನ ಕಡಿಮೆ ಹೊಂದಿರುತ್ತದೆ. ಇದರಲ್ಲಿ ನೀರಿನಲ್ಲಿ ಕರಗುವ ವಿಟಮಿನ್ ಅಂಶಗಳು ಎನ್ನಲಾದ ಫೋಲಿಕ್ ಆಮ್ಲ ವಿಟಮಿನ್ ಸಿ ಕಡಿಮೆಯಾಗುತ್ತಾ ಬರುತ್ತದೆ.ಆದರೆ ಪ್ರತಿಯೊಂದು ಬಾಳೆಹಣ್ಣು ತನ್ನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಅಂಶ ವನ್ನು ಒಳಗೊಂಡಿರುತ್ತದೆ. ಇದರಿಂದ ಒಂದು ವಿಚಾರವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬಹುದು. ಚೆನ್ನಾಗಿ ಮಾಗಿದ ಬಾಳೆಹಣ್ಣ ನ್ನ ಯಾರು ಬೇಕಾದ್ರೂ ತಿನ್ನಬಹುದು. ಆದರೆ ನಿಮಗೆ ಶುಗರ್ ಇರಬಾರದು. ಒಳ್ಳೆಯ ಪ್ರಮಾಣದಲ್ಲಿ ನಿಮಗೆ ವಿಟಮಿನ್ ಮತ್ತು ಖನಿಜಗಳು ಸಹ ಸಿಗುತ್ತವೆ. ಇನ್ನು ನಿಮ್ಮ ಮನೆಯಲ್ಲಿ ಒಂದು ವೇಳೆ ಹಣ್ಣಾದ ಬಾಳೆಹಣ್ಣುಗಳು ಜಾಸ್ತಿ ಉಳಿದರೆ ಅವುಗಳನ್ನು ರೆಫ್ರಿಜರೇಟರ್ನಲ್ಲಿ ಇರಿಸಿ ಹೀಗೆ ಮಾಡುವುದರಿಂದ ಅವುಗಳಲ್ಲಿರುವ ಪೌಷ್ಟಿಕ ಸತ್ವ ಗಳು ಜಾಸ್ತಿ ದಿನ ಉಳಿಯುತ್ತವೆ.