ನಮಸ್ಕಾರ ಸ್ನೇಹಿತರೆ ನಿಮ್ಮೆಲರಿಗೂ ಸ್ವಾಗತ ಆಗಸ್ಟ್ 30 ಮತ್ತು 31 ನೇ ತಾರೀಖು ರಕ್ಷಾ ಬಂಧನ ಹಬ್ಬ ವನ್ನು ಆಚರಿಸುತ್ತೇವೆ. ಈ ದಿನದಂದು ಸಹೋದರಿಯರು ಸಹೋದರರಿಗೆ ರಾಖಿಯನ್ನು ಕಟ್ಟುತ್ತಾರೆ. ರಾಖಿ ಕಟ್ಟಿಸಿ ಕೊಂಡ ಸಹೋದರರು ಸಹೋದರಿಯರಿಗೆ ಉಡುಗೊರೆಯನ್ನು ನೀಡುತ್ತಾರೆ. ಸಹೋದರಿಯರಿಗೆ ಉಡುಗೊರೆಯನ್ನು ನೀಡುವಾಗ ಯಾವ ವಸ್ತುಗಳನ್ನು ಉಡುಗೊರೆಯಾಗಿ ಕೊಡಬೇಕು, ಯಾವ ವಸ್ತುಗಳನ್ನು ಕೊಡಬಾರದು ಈ ಎಲ್ಲ ಮಾಹಿತಿಯನ್ನು ತಿಳಿಯೋಣ ಧರ್ಮಗ್ರಂಥಗಳ ಪ್ರಕಾರ ರಕ್ಷಾ ಬಂಧನ ಹಬ್ಬವು ಸಹೋದರ ಸಹೋದರಿಯರ ಜೀವನದಲ್ಲಿ ವಿಭಿನ್ನ ಮಹತ್ವವನ್ನು ಹೊಂದಿದೆ. ಪ್ರತಿವರ್ಷ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಹಾಗೆ ಅವನ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತಾರೆ.
ರಕ್ಷಾ ಬಂಧನದ ಈ ಹಬ್ಬ ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧವನ್ನು ಬಲಪಡಿಸುತ್ತದೆ ಎಂದು ಪರಿಗಣಿಸಲಾಗಿದೆ. ಈ ದಿನದಂದು ಸಹೋದರರು ಸಹೋದರಿಯರಿಗೆ ದಕ್ಷಿಣೆ ಅಥವಾ ಉಡುಗೊರೆಯನ್ನು ನೀಡುವ ಸಂಪ್ರದಾಯವಿದೆ. ಆದರೆ ಶಾಸ್ತ್ರ ಗಳ ಪ್ರಕಾರ ಈ ವಿಶೇಷ ದಿನದಂದು ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಶುಭವಲ್ಲ. ಹಾಗಾದರೆ 2023ರ ಈ ರಕ್ಷಾ ಬಂಧನ ಹಬ್ಬದ ದಿನದಂದು ಸಹೋದರಿಯರಿಗೆ ಯಾವ ವಸ್ತುವನ್ನು ನೀಡಬಾರದು ಎಂದು ತಿಳಿಯೋಣ 2023 ರಲ್ಲಿ ಈ ರಕ್ಷಾ ಬಂಧನ ಹಬ್ಬವು ಬಂದಿದೆ. ಆಗಸ್ಟ್ 31 ರಂದು ಬೆಳಿಗ್ಗೆ ರಾಖಿ ಆಚರಿಸಬಹುದು. ಭದ್ರನ ಸಮಯವು ಆಗಸ್ಟ್ 30 ರಂದು ಬೆಳಿಗ್ಗೆ 10:58 ದಿಂದ ರಾತ್ರಿ 9:01 ನಿಮಿಷದ ವರೆಗೂ ಇರುತ್ತದೆ. ಆಗಸ್ಟ್ ಮೂವತ್ತರಂದು ರಾಖಿ ಕಟ್ಟಲು ಶುಭ ಸಮಯ, ರಾತ್ರಿ 9:01 ದಿಂದ ಆಗಸ್ಟ್ 31 ಬೆಳಿಗ್ಗೆ 9:05 ನಿಮಿಷದವರೆಗೂ ಶುಭ ಸಮಯವಾಗಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಸಹೋದರಿಯರ ಜೊತೆಗೆ ಬುಧವನ್ನು ಬುದ್ಧಿವಂತಿಕೆಗೆ ಕಾರಣವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಡೈರಿ, ಪೆನ್ನು, ಪುಸ್ತಕಗಳು, ಲ್ಯಾಪ್ಟಾಪ್ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡುವುದು ತುಂಬಾ ಶುಭಕರವಾಗಿದೆ. ಹಾಗೆ ರಕ್ಷಾ ಬಂಧನದ ದಿನದಂದು ನಿಮ್ಮ ಇಷ್ಟದ ಬಟ್ಟೆಗಳನ್ನು ಸಹೋದರಿಯರಿಗೆ ಉಡುಗೊರೆಯಾಗಿ ನೀಡುವುದು ಕೂಡ ಮಂಗಳಕರ. ಆದರೆ ಈ ದಿನ ಕಪ್ಪು ಮತ್ತು ನೀಲಿ ಬಟ್ಟೆಯನ್ನು ನೀಡಬಾರದು. ರಕ್ಷಾಬಂಧನದಂದು ಸಹೋದರಿಯರಿಗೆ. ಆಭರಣ ಅಥವಾ ಚಿನ್ನ, ಬೆಳ್ಳಿ ನಾಣ್ಯ ಗಳನ್ನು ನೀಡುವುದು ಸಹೋದರ ಮತ್ತು ಸಹೋದರಿಯರ ಸಂಬಂಧವನ್ನು ಬಲಪಡಿಸುತ್ತದೆ.
ಹಾಗೆ ರಕ್ಷಾ ಬಂಧನ ದಿನದಂದು ಯಾವ ವಸ್ತು ವನ್ನು ಉಡುಗೊರೆಯಾಗಿ ಕೊಡ ಬಾರದು ಎಂದರೆ ಚಪ್ಪಲಿ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಬಾರದು ಎಂಬ ನಂಬಿಕೆ ಇದೆ. ಏಕೆಂದರೆ ಇದು ಅಶುಭ ಎಂದು ನಂಬಲಾಗಿದೆ. ಹಾಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಿಶೇಷ ದಿನದಂದು ಸಹೋದರಿಯರಿಗೆ ಕನ್ನಡಿಯನ್ನು ಉಡುಗೊರೆಯಾಗಿ ನೀಡಬಾರದು. ಇದು ಸಂಬಂಧ ವನ್ನು ದೂರ ಮಾಡುತ್ತದೆ. ನೋಡಿದ್ರಲ್ಲ ರಕ್ಷಾ ಹಬ್ಬದ ದಿನದಂದು ನಿಮ್ಮ ಸಹೋದರಿಯರಿಗೆ ಯಾವ ಉಡುಗರೆಯನ್ನು ಕೊಡಬಾರದು ಎಂದು ತಪ್ಪದೇ ಇದನ್ನು ಪಾಲಿಸಿ ಖುಷಿಯಿಂದ ನಿಮ್ಮ ಮನೆಯಲ್ಲಿ ಹಬ್ಬವನ್ನು ಆಚರಣೆ ಮಾಡಿ