ಸ್ನೇಹಿತರೇ ಮೊಟ್ಟೆ ಸಾಕಷ್ಟು ಜನರ ಪಾಲಿಗೆ ನಿತ್ಯದ ಉಪಹಾರದ ಭಾಗವಾಗಿದ್ದರೆ, ಇನ್ನು ಕೆಲವರು ಆಗಾಗ ಅದನ್ನು ರಾತ್ರಿಯ ಊಟದ ಜೊತೆಗೂ ಸೇವಿಸುವುದುಂಟು.ಬಹು ಉಪಯೋಗಿ ಮೊಟ್ಟೆಗೆ ಪಾಕಶಾಲೆಯಲ್ಲಿ ವಿಶೇಷ ಸ್ಥಾನ ವಿದೆ.ಮಕ್ಕಳಿಂದ ಹಿಡಿದು ವೃದ್ಧರ ಆರೋಗ್ಯವನ್ನು ವೃದ್ಧಿಸುವ ಆಹಾರ ಪದಾರ್ಥ. ಪ್ರೊಟೀನ್ ಅಂಶ ಇರುವ ಈ ಸೂಪರ್ ಫುಡ್ ದೇಹಕ್ಕೆ ನಾನಾ ರೀತಿಯಲ್ಲಿ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆದರೆ ಮೊಟ್ಟೆಯ ಬಿಳಿ ಮಾತ್ರ ಒಳ್ಳೆಯದು. ಮೊಟ್ಟೆಯ ಹಳದಿ ತಿಂದರೆ ದೇಹದ ತೂಕ ಹೆಚ್ಚಾಗುವುದರ ಹೊರತು ಮತ್ಯಾವ ಪ್ರಯೋಜನವಿಲ್ಲ ಎಂಬ ಭಾವನೆ ನಮ್ಮಲ್ಲಿದೆ ಆದರಲ್ಲೂ ಡಯಟ್ ಮಾಡುವವರು ಮೊಟ್ಟೆಯ ಹಳದಿಯನ್ನು ತಿನ್ನುವುದೇ ಇಲ್ಲ. ಆದರೆ ಮೊಟ್ಟೆಯ ಹಳದಿಯಲ್ಲಿ ಬರೀ ಕೊಲೆಸ್ಟ್ರಾಲ್ ಮಾತ್ರವಲ್ಲ ದೇಹದ ಅಗತ್ಯವಾದ ಅನೇಕ ಅಂಶಗಳಿವೆ. ಇದು ಆರೋಗ್ಯ ವೃದ್ಧಿಯಲ್ಲಿ ಯಾವ ರೀತಿಯಲ್ಲಿ ಸಹಕಾರಿ ಎಂದು ನೋಡೋಣ ಬನ್ನಿ.

ಮೊಟ್ಟೆಯ ಬಿಳಿ ಮತ್ತು ಹಳದಿ ಲೋಳೆ ಎರಡು ವಿಭಿನ್ನವಾಗಿದ್ದರೂ ಅವುಗಳ ಗುಣಲಕ್ಷಣಗಳು ಬಹುತೇಕ ಸಮಾನವಾಗಿವೆ. ಮೊಟ್ಟೆಯ ಬಿಳಿ ಭಾಗ ದಂತೆ ಮೊಟ್ಟೆಯ ಹಳದಿ ಲೋಳೆಯ ನ್ನು ತಿನ್ನುವುದು ಕೂಡ ಆರೋಗ್ಯಕರ ಮೊಟ್ಟೆಯ ಹಳದಿ ಭಾಗ ವು ವಿಟಮಿನ್ ಎ ವಿಟಮಿನ್, ಬಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಅಂಶ ವನ್ನು ಹೊಂದಿದೆ. ಇದರಲ್ಲಿ ಲ್ಯೂಟಿನ್ ಮತ್ತು ದೈನಂದಿನ ಎಂಬ ಎರಡು ರೀತಿಯ ಕ್ಯಾರೊಟಿನಾಯ್ಡ್ ಗಳಿವೆ. ಇದು ನೇರಳಾತೀತ ಕಿರಣ ಗಳ ಹಾನಿಕಾರಕ ಪರಿಣಾಮ ಗಳಿಂದ ಕಣ್ಣು ಗಳನ್ನು ರಕ್ಷಿಸುತ್ತದೆ ಮತ್ತು ಮೊಟ್ಟೆಯ ಹಳದಿ ಕಣ್ಣಿನ ಆರೋಗ್ಯ ಹೆಚ್ಚಿಸುವ ಆಹಾರವಾಗಿದೆ. ಅದರಲ್ಲೂ ಬೆಳೆಯುವ ಮಕ್ಕಳಲ್ಲಿ ಅವರ ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುವಂತೆ ಮಾಡುತ್ತದೆ. ಇನ್ನು ಸಂಧಿ ನೋವು ಇರುವವರು ಮೊಟ್ಟೆ ಹಳದಿ ಭಾಗ ವನ್ನು ತಿನ್ನುವುದರಿಂದ ಸಂಧಿ ನೋವು ಕಡಿಮೆಯಾಗುತ್ತದೆ ಮತ್ತು ಮೊಟ್ಟೆಯ ಹಳದಿ ಭಾಗ ವನ್ನು ತಿನ್ನುವುದರಿಂದ ಪುರುಷ ಹಾರ್ಮೋನ್ ಟೆಸ್ಟೋಸ್ಟಿರೋನ್ ಹೆಚ್ಚಿಸುತ್ತದೆ.

ಇದರಿಂದ ಸಂಪೂರ್ಣ ಪೋಷಕಾಂಶ ಸಿಗುತ್ತದೆ. ಬಹುತೇಕ ಮಂದಿ ಮೊಟ್ಟೆಯ ಹಳದಿ ಭಾಗ ವನ್ನು ತ್ಯಜಿಸುತ್ತಾರೆ.ಆದರೆ ನಿಮಗೆ ಮುಟ್ಟಿ ಯಿಂದ ಹೆಚ್ಚಿನ ಪೋಷಕಾಂಶ ಬೇಕು ಅನ್ನೋದಾದರೆ ಮೊಟ್ಟೆಯ ಹಳದಿ ಭಾಗವನ್ನು ತಿನ್ನ ಬೇಕು.ಏಕೆಂದರೆ ಮೊಟ್ಟೆಯ ಲ್ಲಿರುವ ಹೆಚ್ಚಿನ ಪೋಷಕಾಂಶಗಳು ಅದರ ಹಳದಿ ಲೋಳೆಯಲ್ಲಿ ಹೆಚ್ಚಾಗಿರುತ್ತವೆ. ಸಂಪೂರ್ಣ ಮೊಟ್ಟೆ ಸಂಪೂರ್ಣ ಪೋಷಕಾಂಶಬಿಳಿ ಪದರ ಮತ್ತು ಹಳದಿ ಭಾಗ ಎರಡು ತಿನ್ನುವುದು ಒಳ್ಳೆಯದೆ.ಮೊಟ್ಟೆಯ ಈ ಭಾಗ ವನ್ನು ತಿನ್ನುವುದರಿಂದ ಹೊಟ್ಟೆ ತುಂಬಿದಂತಿರುತ್ತದೆ. ಬಹಳ ಸಮಯ ಹೊಟ್ಟೆ ಹಸಿಯುವುದಿಲ್ಲ. ಹೀಗಾಗಿ ಇದನ್ನು ಡಯಟ್ ನಲ್ಲಿ ಸೇರಿಸುವುದು ಬಹುಮುಖ್ಯ ಎನ್ನುತ್ತಾರೆ.

Leave a Reply

Your email address will not be published. Required fields are marked *