ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ರೂ.20,000 ಸ್ಕಾಲರ್ಶಿಪ್. ಇಂದೇ ಅರ್ಜಿಯನ್ನು ಸಲ್ಲಿಸಿ. ಎಷ್ಟೋ ಜನಕ್ಕೆ ಶಿಕ್ಷಣ ಪಡೆಯಬೇಕು ಎಂಬ ಹಂಬಲವಿರುತ್ತದೆ ಅಷ್ಟೇ ಬುದ್ಧಿವಂತರು ಕೂಡ ಆಗಿರುತ್ತಾರೆ. ಆದರೆ ಆರ್ಥಿಕವಾಗಿ ಅಷ್ಟು ಸದೃಢವಾಗಿರುವುದಿಲ್ಲ. ಆರ್ಥಿಕ ನೆರವು ಕೂಡ ಸಿಗುವುದಿಲ್ಲ. ಅಂಥವರಿಗೆ ಸರ್ಕಾರದಿಂದ ಒಂದು ಹೊಸ ಯೋಜನೆ ಜಾರಿಯಾಗಿದೆ.. ಅದು ಯಾವುದು ಅದನ್ನು ಪಡೆಯುವುದು ಹೇಗೆ ಅಂತ ವಿಶೇಷ ಮಾಹಿತಿಯನ್ನ ತಿಳಿದುಕೊಳ್ಳೋಣ.
ಆರ್ಥಿಕವಾಗಿ ಬಡತನವಿದ್ದು ವಿದ್ಯೆಯಲ್ಲಿ ಮುಂದಿದ್ದು ಅಂತಹವರನ್ನು ಗುರುತಿಸಿ ನಮ್ಮ ಎನ್‌ಜಿಓ ಸಂಸ್ಥೆ ವರ್ಷಕ್ಕೆ 20,000 ಸ್ಕಾಲರ್ಶಿಪ್ ಅನ್ನ ಕೊಡುತ್ತಿದೆ. ನಮ್ಮ ರಾಜ್ಯ ಸರ್ಕಾರವು ಕೂಡ ಇಂತಹ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಧನಸಹಾಯವನ್ನು ಮಾಡುತ್ತಿದೆ. ವಿದ್ಯಾರ್ಥಿ ವೇತನವನ್ನು ಕೊಡುತ್ತಿದ್ದ ಕೇಂದ್ರ ಸರ್ಕಾರದ ವತಿಯಿಂದಲೂ ಕೂಡ. ಆದರೆ ನಮ್ಮ ಎನ್ ಜಿ ಓ ಸಂಸ್ಥೆಯು ಕೂಡ ಇಂಥ ವಿದ್ಯಾರ್ಥಿಗಳನ್ನು ಹುಡುಕಿ ಅವರನ್ನು ಮುಂದೆ ತರುವ ಪ್ರಯತ್ನವನ್ನು ಮಾಡುತ್ತಿದೆ. ಹಾಗಾದರೆ ಈ ಯೋಜನೆ ಯಾವುದು ಅಂತ ಕೇಳಿದ್ರೆ ಸರೋಜಿನಿ ದಾಮೋದರ್ ವಿದ್ಯಾಧನ್ ವಿದ್ಯಾರ್ಥಿ ವೇತನ. ಪ್ರತಿ ವರ್ಷ ಈ ಸ್ಕಾಲರ್ಶಿಪ್ ಅನ್ನು ಪಡೆಯುವ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ವರ್ಷ ಅಂದರೆ 2023-24ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಯೋಜನೆಗೆ ಬದ್ಧವಾದ ನೀತಿ ನಿಯಮಗಳನ್ನು ಪೂರೈಸುವ ಮೂಲಕ ಈ ಸ್ಕಾಲರ್ಶಿಪ್ ಅನ್ನು ಪಡೆಯಬಹುದಾಗಿದೆ.
ದೇಶದ 27 ರಾಜ್ಯಗಳಿಂದ ಅರ್ಜಿ ಬಂದಿದ್ದು 4700ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಅನ್ನು ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿ ವೇತನದ ಒಟ್ಟು ಮತ 20,000. ಪ್ರಥಮ ಪಿಯುಸಿಯಲ್ಲಿ ಹತ್ತು ಸಾವಿರ ರೂಪಾಯಿಗಳು ಹಾಗೂ ದ್ವಿತೀಯ ಪಿಯುಸಿಯಲ್ಲಿ 10,000ಗಳನ್ನು ಪಡೆಯಬಹುದಾಗಿದೆ. ಹಾಗಾದ್ರೆ ಈ ವಿದ್ಯಾರ್ಥಿ ವೇತನವನ್ನು ಪಡೆಯಲಿಕ್ಕೆ ಅರ್ಹತೆಗಳು ಏನು ಬೇಕು ಎಂಬುದನ್ನ ನೋಡೋಣ. ವರ್ಷದ ಆದಾಯವು 2 ಲಕ್ಷಕ್ಕಿಂತ ಕಮ್ಮಿ ಇರಬೇಕು. ಮತ್ತು ಶೇಕಡ 85 % ಆಗಿರಬೇಕು. ಅದಕ್ಕಿಂತ ಕಮ್ಮಿ ಇರಬಾರದು. ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟಿಗೆ ಹೋಗಿ ಫಾರ್ಮ್ ಅನ್ನು ಫೀಲ್ ಮಾಡಬೇಕು. ಅಲ್ಲಿ ಕೇಳಲಾಗುವ ಡಾಕ್ಯುಮೆಂಟ್ಸ್ ಅನ್ನ ಅಪ್ಲೋಡ್ ಮಾಡಬೇಕು. ಇಷ್ಟು ನೀವು ಮಾಡಿದರೆ ಅರ್ಜಿ ಸಲ್ಲಿಕೆ ಪೂರ್ಣವಾದಂತೆ.
ಇನ್ನು ಬೇಕಾದ ಮಾನದಂಡಗಳು ಯಾವುದು ಅಂತ ನೋಡೋದಾದ್ರೆ ಆಧಾರ ಕಾರ್ಡ್ ಕಡ್ಡಾಯವಾಗಿ ಬೇಕೇ ಬೇಕು. ಹತ್ತನೇ ತರಗತಿ ಅಂಕಪಟ್ಟಿ ಬೇಕು.ಬ್ಯಾಂಕ್ ಖಾತೆ ವಿವರ ಹಾಗೂ ಅವರು ಓದುತ್ತಿರುವ ಶಾಲೆಯ ಗುರುತಿನ ಚೀಟಿ. ಆದಾಯ ಪ್ರಮಾಣ ಪತ್ರ ಬೇಕು. ಒಂದು ವೇಳೆ ಅಂಗವಿಕಲರಾಗಿದ್ದಲ್ಲಿ ಅದರ ಪ್ರಮಾಣ ಪತ್ರ. ಮತ್ತು ಕೊನೆಯದಾಗಿ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ. ಇವಿಷ್ಟು ದಾಖಲೆಗಳು ಬೇಕು. ಹಾಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಒಂದು ಸಣ್ಣ ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನ ಹಾಗೂ ಸಣ್ಣ ಪರಿಕ್ಷೆಯ ದಿನಾಂಕವನ್ನು ನಿಮ್ಮ ಮೊಬೈಲ್ ನಂಬರ್ ಗೆ ಕಳುಹಿಸಿಕೊಡಲಾಗುತ್ತದೆ. ಪರೀಕ್ಷೆ ಮತ್ತು ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸ್ಥಳ ಹತ್ತು ಸಾವಿರ ಹತ್ತು ಸಾವಿರದಂತೆ ಒಟ್ಟು 20 ಸಾವಿರ ಕೊಡಲಾಗುವುದು.