ಇವರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಾಗೂ ದುಡ್ಡು ಎರಡು ಸಿಗಲ್ಲ. ವಾರ್ನಿಂಗ್ ಕೊಟ್ಟ ಸರ್ಕಾರ. ರಾಜ್ಯ ಸರ್ಕಾರ ಹೊರಡಿಸಿದ ಶಕ್ತಿ ಯೋಜನೆಗಳಲ್ಲಿ ಅನ್ನ ಭಾಗ್ಯ ಯೋಜನೆಯು ಒಂದಾಗಿದೆ. ಈ ಯೋಜನೆಯಲ್ಲಿ ಸರ್ಕಾರ ಫಲಾನುಭವಿಗಳಿಗೆ ತಲಾ ಹತ್ತು ಕೆಜಿ ಅಕ್ಕಿಯನ್ನು ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ ಸರ್ಕಾರಕ್ಕೆ ಅಕ್ಕಿಯನ್ನು ಹೊಂದಿಸುವುದೇ ದೊಡ್ಡ ಸಮಸ್ಯೆಯಾಗಿದೆ. ತನ್ನ ಮಾತನ್ನು ಉಳಿಸಿಕೊಳ್ಳಲು ಸರ್ಕಾರಕ್ಕೆ ಕಷ್ಟವಾಗುತ್ತದೆ. ಕೊಟ್ಟ ಮಾತಿನಂತೆ ಜನರಿಗೆ ಅಕ್ಕಿಯನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ.

ಕೇಂದ್ರ ಸರ್ಕಾರ 5 ಕೆಜಿ ಕೊಡುತ್ತಿದೆ. ರಾಜ್ಯ ಸರ್ಕಾರ ಏನು ಹೇಳಿತ್ತು ಅಂದ್ರೆ. ಕೇಂದ್ರ ಸರ್ಕಾರ ಏನೋ 5 ಕೆ.ಜಿ. ಅಕ್ಕಿಯನ್ನು ಕೊಡುತ್ತಿದೆ ಅದರ ಜೊತೆಗೆ ತಾವು ಕೂಡ ಐದು ಕೆಜಿ ಅಕ್ಕಿಯನ್ನು ಸೇರಿಸಿ ಕೊಡುವುದಾಗಿ ಹೇಳಿಕೆಯನ್ನು ನೀಡಿತ್ತು. ಆದರೆ ಅಗತ್ಯ ಪೂರೈಕೆ ಇಲ್ಲದ ಕಾರಣ ರಾಜ್ಯ ಸರ್ಕಾರಕ್ಕೆ ತನ್ನ ಮಾತನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ. ತಲ 10 ಕೆಜಿ ಅಕ್ಕಿಯನ್ನು ಒದಗಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸರ್ಕಾರದ ಹತ್ತಿರ ಸಾಧ್ಯವಾಗುತ್ತಿಲ್ಲ.

ಹೌದು ಎಷ್ಟೇ ಸಾಹಸ ಮಾಡಿದರೆ ಕೂಡ ಅಕ್ಕಿಯನ್ನು ಒದಗಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ನಮ್ಮ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳ ಸಂಖ್ಯೆ ಜಾಸ್ತಿ ಇದೆ. ಅದಕ್ಕೆ ಏನು ಹೇಳಿದ್ದು ಸರ್ಕಾರ ಅಂತ ಅಂದ್ರೆ ನಾವು ಅಕ್ಕಿಯ ಬದಲಾಗಿ ದುಡ್ಡನ್ನ ಕೊಡುತ್ತೇವೆ ಅಂತ ಹೇಳಿತ್ತು. ಅಕ್ಕಿಯ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಾಕುತ್ತಿದೆ. ಪ್ರತಿ ತಿಂಗಳು 2:30 ಮೆಟ್ರಿಕ್ ಟನ್ ಗಳಷ್ಟು ಅಕ್ಕಿಯನ್ನು ಸರ್ಕಾರ ಹೊಂದಿಸಬೇಕಿದೆ. ಇದೇ ಕಾರಣಕ್ಕಾಗಿ ಸರ್ಕಾರದ ಹತ್ತಿರ ಇಷ್ಟೊಂದು ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ.

ಆದ್ದರಿಂದ ಅದರ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ. ಇನ್ನು ರೇಷನ್ ಕಾರ್ಡ್ ಬಗ್ಗೆಯೂ ಕೂಡ ಸರ್ಕಾರ ಸ್ವಲ್ಪ ಗಮನವನ್ನು ಹರಿಸುತ್ತಿದೆ. ನೋಡಿ ಸ್ನೇಹಿತರೆ ನಿಮಗೆ ಮತ್ತೊಂದು ಎಚ್ಚರಿಕೆಯನ್ನು ಹೇಳುತ್ತಿದ್ದೇವೆ ರೇಷನ್ ಕಾರ್ಡ್ ಇದ್ದವರು ಯಾವಾಗ್ಲೂ ಕೂಡ ಈ ತಪ್ಪನ್ನು ಮಾಡಬೇಡಿ. ಒಂದು ವೇಳೆ ನೀವು ಈ ತಪ್ಪುಗಳನ್ನು ಮಾಡಿದರೆ ರೇಷನ್ ಕಾರ್ಡು ನಿಮ್ದು ರದ್ದಾಗುತ್ತದೆ. ಯಾರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುತ್ತಾರೋ ಅಂತಹವರಿಗೆ ರೇಷನ್ ಕಾರ್ಡ್ ಕೊಡುವುದು ಬೇಡವೋ ಅಂತ ಸರ್ಕಾರ ಯೋಚಿಸುತ್ತಿದೆ. ಈಗಾಗಲೇ ಸರ್ಕಾರ 5 ಲಕ್ಷಕ್ಕೂ ಹೆಚ್ಚು ಜನರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ. ಯಾಕೆಂದರೆ ಬಿಪಿಎಲ್ ಕಾರ್ಡನ ಅಗತ್ಯತೆ ಇಲ್ಲದವರು ಕೂಡ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ. ಆದ್ದರಿಂದ ಇವೆಲ್ಲದನ್ನ ಮರುಪರುಶೀಲಿಸಿ ಸರಕಾರ ನಿರ್ಧಾರಕ ಕೈಗೊಳ್ಳಲಿದೆ. ಯಾರ್ಯಾರಿಗೆ ರೇಷನ್ ಕಾರ್ಡನ್ನು ಕೊಡುವುದು ಯಾರ್ಯಾರಿಗೆ ಬೇಡ ಅಂತ ನಿರ್ಧಾರ ಮಾಡಲಿದೆ. ಮನೆಯಲ್ಲಿ ಆಸ್ತಿ ಪಾಸ್ತಿ ಕಾರು ಇದ್ದವರು ಕೂಡ ಬಿಪಿಎಲ್ ಕಾರ್ಡನ್ನು ಹೊಂದಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ 5 ಲಕ್ಷಕ್ಕೂ ಹೆಚ್ಚು ಜನರ ರೇಷನ್ ಕಾರ್ಡ್ ಅನ್ನ ಇದು ರದ್ದು ಮಾಡಿದೆ.

ಇನ್ನು ಕೆಲವರು ಏನ್ ಮಾಡ್ತಿದ್ದಾರೆ ಅಂತಂದ್ರೆ ರೇಷನ್ ಕಾರ್ಡ್ ಇಂದ ಅಕ್ಕಿಯನ್ನು ತೆಗೆದುಕೊಂಡು ಮಾರಾಟ ಮಾಡುತ್ತಿದ್ದಾರೆ. ಇವೆಲ್ಲವೂ ಕೂಡ ಸರ್ಕಾರದ ಗಮನಕ್ಕೆ ಬಂದಿದೆ ಇಂಥವರ ರೇಷನ್ ಕಾರ್ಡನ್ನ ರದ್ದು ಮಾಡಲಾಗುತ್ತದೆ. ಇನ್ನೂ ಬಡತನದ ರೇಖೆಗಿಂತ ಮೇಲೆ ಇದ್ದವರು ಕೂಡ ಬಿಪಿಎಲ್ ಕಾರ್ಡನ್ನು ಹೊಂದಿದ್ದಾರೆ. ಇಂಥವರಿಗೆ ಅಗತ್ಯ ಇಲ್ಲ ನಿಜವಾಗಲೂ ಆದರೂ ಕೂಡ ಇವರು ಬಿಪಿಎಲ್ ಕಾರ್ಡನ್ನು ಹೊಂದಿದ್ದಾರೆ. ಇನ್ನು ಕೆಲವರು ಸುಳ್ಳು ಮಾಹಿತಿಯನ್ನು ಕೊಟ್ಟು ರೇಷನ್ ಕಾರ್ಡನ್ನು ಪಡೆಯುತ್ತಿದ್ದಾರೆ. ಈ ವಿಷಯವನ್ನ ಗಮನಿಸಿ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ. ನೋಡಿ ರೇಷನ್ ಕಾರ್ಡ್ ರದ್ದಾಗುವ ಮೊದಲು ನೀವೇ ನಿಮ್ಮ ಅಗತ್ಯಗಳನ್ನು ಪರಿಶೀಲಿಸಿಕೊಂಡು ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಗಳ ಬಗ್ಗೆ ಗಮನ ವಹಿಸಿ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *