WhatsApp Group Join Now

ಗ್ರಹಿಣಿಯರೇ ಈ ಮಿಸ್ಟೇಕ್ ಮಾಡಬೇಡಿ. ನಿಮಗೆ ಹಣ ಬರುವುದಿಲ್ಲ. ಎಲ್ಲರಿಗೂ ಹಣ ಬಂದಿದೆ, ತಮಗೆ ಮಾತ್ರ ಬಂದಿಲ್ಲ ಅಂತ ತುಂಬಾ ಮನೆಯ ಯಜಮಾನಿಯರು ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ. ಪಕ್ಕದ ಮನೆಯವರಿಗೆ 2000 ಬಂದಿದೆ ನಮ್ಮ ನೆಂಟರಿಗೆ ಬಂದಿದೆ ಅಕ್ಕನಿಗೆ ಬಂದಿದೆ ಅತ್ತಿಗೆಗೆ ಬಂದಿದೆ ಆದರೆ ನನಗೆ ಯಾಕೆ ಇನ್ನು ಬಂದಿಲ್ಲ ಅಂತ ತುಂಬಾ ನೊಂದುಕೊಳ್ಳುತ್ತಿದ್ದಾರೆ. ಕೆಲವು ಗ್ರಹಣೀಯರು ಸರಕಾರಕ್ಕೆ ಬಯ್ಯುತ್ತಿದ್ದಾರೆ. ಸರ್ಕಾರ ಹೇಳಿದ ಹಾಗೆ ನಡೆದುಕೊಳ್ಳಲಿಲ್ಲ ಎಲ್ಲರಿಗೂ ಹಣವನ್ನು ಕೊಡುವುದಾಗಿ ಹೇಳಿದ್ದು ಆದರೆ ಇದು ಬರೀ ಸುಳ್ಳು ಅಂತ ಹೇಳುತ್ತಿದ್ದಾರೆ. ಸರಕಾರ ಮಾತಿನಂತೆ ನಡೆದುಕೊಂಡಿಲ್ಲ ಈ ಯೋಜನೆ ಇರುವುದೇ ಸುಳ್ಳು ಬರಿ ಸುಳ್ಳು ಅಂತ ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆ ಸುಳ್ಳಲ್ಲ ನಿಜವಾಗಲೂ ಹಣ ಬಂದಿದೆ ಕೆಲವು ತಾಂತ್ರಿಕ ದೋಷದಿಂದಾಗಿ ಸ್ವಲ್ಪ ವಿಳಂಬವಾಗುತ್ತಿದೆ ಅಷ್ಟೇ.

ಮೊನ್ನೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಣ ಬಂದೇ ಬರುತ್ತದೆ ಕೆಲವೊಂದು ದೋಷಗಳಿಂದ ಹಣವು ಬರುವುದು ನಿಧಾನವಾಗಿ ಬರುತ್ತಿದೆ ಅಷ್ಟೇ ಎಲ್ಲರಿಗೂ ಒಂದೇ ಬಾರಿ ಹಣವನ್ನ ಜಮಾ ಮಾಡಲು ಸಾಧ್ಯವಾಗುತ್ತಿಲ್ಲ ದಯವಿಟ್ಟು ಸಹಕರಿಸಿ. ಎಲ್ಲರಿಗೂ ಹಣ ಬಂದೇ ಬರುತ್ತದೆ ನಿಮ್ಮ ದಾಖಲಾತಿಗಳು ಸರಿಯಾಗಿದ್ದಲ್ಲಿ ಖಂಡಿತವಾಗಲೂ ನೀವು ಹಣವನ್ನು ಪಡೆಯುತ್ತೀರಾ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಗ್ರಹಿಣಿಯರೇ ನೀವು ಇದೊಂದು ತಪ್ಪನ್ನು ಮಾತ್ರ ಮಾಡಬೇಡಿ ಅರ್ಜಿ ಹಾಕುವಾಗ ಇದ್ದ ಬ್ಯಾಂಕ್ ಖಾತೆಯನ್ನು ಅರ್ಜಿ ಹಾಕಿದ ನಂತರ ಈಗ ಹಣ ಬಂದಿಲ್ಲ ಅಂತ ಬ್ಯಾಂಕ್ ಖಾತೆಯನ್ನು ಚೇಂಜ್ ಮಾಡುವ ಕೆಲಸಕ್ಕೆ ಮಾತ್ರ ಹೋಗಬೇಡಿ. ಆಗ ಖಂಡಿತ ಹಣ ಬರುವುದಿದ್ದರೂ ನಿಮಗೆ ಹಣ ತಲುಪುವುದಿಲ್ಲ. ಖಂಡಿತವಾಗಲೂ ನೀವು ಗೃಹಲಕ್ಷ್ಮಿ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವರು ಈಗ ಹಾಗೆ ಮಾಡುತ್ತಿದ್ದಾರೆ ತನಗೆ ಹಣ ಬಂದಿಲ್ಲ ಅಂತ ತಾತ್ಕಾಲಿಕವಾಗಿ ಬಂದ್ ಆಗಿದ್ದ ಬ್ಯಾಂಕ್ ಅಕೌಂಟ್ ಅನ್ನ ಚೇಂಜ್ ಮಾಡುತ್ತಿದ್ದಾರೆ. ದಯವಿಟ್ಟು ನೀವು ಈ ತಪ್ಪು ಕೆಲಸವನ್ನು ಮಾಡಲಿಕ್ಕೆ ಹೋಗಬೇಡಿ. ಯಾಕೆಂದರೆ ಬರುವ ಹಣ ಕೂಡ ಬರೋದಿಲ್ಲ. ಒಂದು ವೇಳೆ ನಿಮ್ಮ ಖಾತೆ ತಾತ್ಕಾಲಿಕವಾಗಿ ಬಂದಾಗಿದ್ದಲ್ಲಿ ನೀವು ಬ್ಯಾಂಕಿಗೆ ಹೋಗಿ ಅದನ್ನು ಆಕ್ಟಿವೇಟ್ ಮಾಡಿಸಿ. ನೀವು ಬ್ಯಾಂಕ್ ಖಾತೆಯನ್ನೇ ಚೇಂಜ್ ಮಾಡಕ್ ಹೋಗ್ಬೇಡಿ ಯಾವುದನ್ನ ಲಿಂಕ್ ಮಾಡಿರ್ತಿರೋ ಅರ್ಜಿ ಸಮಯದಲ್ಲಿ ಅದೇ ಖಾತೆ ಆಕ್ಟಿವೇಟ್ ಮಾಡಿಸಿ. ಆಗ ನಿಮಗೆ ವಿಳಂಬವಾದರೂ ಕೂಡ ನೀವು ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.

ತುಂಬಾ ಮಹಿಳೆಯರು ಬ್ಯಾಂಕ್ ಖಾತೆಯನ್ನೇ ಬದಲಿಸುವ ಪ್ರಯತ್ನಕ್ಕೆ ಹೋಗಿದ್ದಾರೆ ಅಂತ ತಿಳಿದು ಬಂದಿದೆ. ಹೀಗೆ ಮಾಡಿದರೆ ಖಂಡಿತವಾಗಲೂ ನೀವು ಹಣವನ್ನು ಪಡೆಯುವುದಿಲ್ಲ. ನೋಡಿ ಕೋಟ್ಯಂತರ ಬ್ಯಾಂಕ್ ಖಾತೆಗೆ ಹಣ ಹೋಗಬೇಕಾಗಿರುವುದರಿಂದ ಒಂದೇ ಬಾರಿ ಹೋಗುವುದಿಲ್ಲ. ಸ್ವಲ್ಪ ತಡವಾಗಬಹುದು ಆದರೆ ನಿಮಗೆ ನಿಮ್ಮ ಖಾತೆಗೆ ವರ್ಗಾವಣೆ ಹಾಗೆ ಆಗುತ್ತದೆ. ಸ್ವಲ್ಪ ತಾಳ್ಮೆಯಿಂದ ಇರಿ. ಹೊರತು ನಿಮ್ಮ ಖಾತೆಯನ್ನು ಬದಲಿಸಬೇಡಿ. ನಿಮ್ಮ ಬ್ಯಾಂಕ್ ಖಾತೆಯೂ ಯಾವುದಕ್ಕೆ ಲಿಂಕ್ ಆಗಿದೆಯೋ ಅದೇ ಖಾತೆಗೆ ಹಣ ಬರುತ್ತದೆ ನೀವು ಬದಲಿ ಮಾಡಿ ಬಿಟ್ಟರೆ ಹಣ ಬರುವುದಿಲ್ಲ. ದಯವಿಟ್ಟು ಎಲ್ಲ ಗ್ರಹಿಣಿಯರಿಗೆ ಕೋರಿಕೆ ಈ ತಪ್ಪು ಕೆಲಸವನ್ನ ಮಾಡಬೇಡಿ ಸ್ವಲ್ಪ ವಿಳಂಬವಾದರೂ ಕೂಡ ನೀವು ಹಣವನ್ನು ಪಡೆಯುತ್ತೀರಾ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *