ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಉನ್ನತಿ ಸಿಗಬೇಕಾದರೆ ಈ ದೇವಸ್ಥಾನಕ್ಕೆ ಹೋಗಿಬನ್ನಿ. ಸ್ನೇಹಿತರೆ ಮಕ್ಕಳು ಉನ್ನತವಾಗಿ ವಿದ್ಯೆಯನ್ನು ಕಲಿಬೇಕು ವಿದ್ಯೆಯಲ್ಲಿ ಅತ್ಯುನ್ನತಿ ಹೊಂದಬೇಕು ಎನ್ನುವುದು ಎಲ್ಲಾ ಅಪ್ಪ-ಅಮ್ಮಂದಿರ ಆಸೆ ಆಗಿರುತ್ತದೆ. ಮಕ್ಕಳಿಗೆ ವಿದ್ಯೆಯು ಬರಲಿ ಅಂತ ಚೆನ್ನಾಗಿ ಓದಲಿ ವಿದ್ಯಾಭ್ಯಾಸ ಮಾಡಲಿ ಅಂತ ಎಲ್ಲೆಲ್ಲಿಗೋ ಹೋಗಿ ಬರುತ್ತಾರೆ. ಆದರೆ ನಿಮಗೆ ಸರಳವಾಗಿ ಇಲ್ಲಿ ಒಂದು ದೇವಸ್ಥಾನದ ಬಗ್ಗೆ ಹೇಳಿಕೊಡುತ್ತೇವೆ.
ದೇವಸ್ಥಾನಕ್ಕೆ ಒಮ್ಮೆ ನೀವು ಭೇಟಿ ಮಾಡಿದರೆ ಖಂಡಿತವಾಗಲೂ ನಿಮ್ಮ ಮಕ್ಕಳು ವಿದ್ಯೆಯಲ್ಲಿ ತುಂಬಾ ಉನ್ನತ ಸ್ಥಾನಕ್ಕೆ ಏರುತ್ತಾರೆ. ದೇವಸ್ಥಾನ ಯಾವುದು ಇದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ. ಈ ದೇವಸ್ಥಾನ ಇರುವುದು ತಮಿಳುನಾಡಿನ ತಿರುವರೂರಿನಲ್ಲಿ. ಈ ದೇವಸ್ಥಾನವನ್ನು ಮೇಧಾ ದಕ್ಷಿಣಾಮೂರ್ತಿ ದೇವಸ್ಥಾನ ಅಂತಲೇ ಕರೆಯುತ್ತಾರೆ. ತುಂಬಾ ಸುಪ್ರಸಿದ್ಧವಾದ ದೇವಸ್ಥಾನ ಇದು ಮಕ್ಕಳ ವಿದ್ಯಾಭ್ಯಾಸ ಗೋಸ್ಕರ ನೇ ಬಹಳ ಜನರು ಇಲ್ಲಿ ಬಂದು ಹೋಗುತ್ತಾರೆ.
ದೇವರ ಆಶೀರ್ವಾದವನ್ನು ಪಡೆದು ಹೋಗುತ್ತಾರೆ. ಇಲ್ಲಿ ಅಕ್ಷರಾಭ್ಯಾಸವನ್ನು ಕೂಡ ಮಾಡಿಸಿದರೆ ತುಂಬಾ ಒಳ್ಳೆಯದು. ನಮ್ಮ ವಿದ್ಯೆಯಲ್ಲಿ ಉತ್ತುಂಗಕ್ಕೆ ಏರಲಿಕ್ಕೆ ದಕ್ಷಿಣ ಮೂರ್ತಿ ದೇವರ ಆಶೀರ್ವಾದ ಬೇಕು. ಸರಸ್ವತಿಯ ಆಶೀರ್ವಾದವು ಕೂಡ ಬೇಕಾಗಿದೆ. ನದಿಯ ಉತ್ತರ ದಿಕ್ಕಿನ ದಂಡೆಯಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ದೇವಾಲಯದ ಮೂರ್ತಿಯನ್ನು ವಥನೇಶ್ವರ ಎಂದು ಕರೆಯಲಾಗುತ್ತದೆ.
ಮೇಧ ಎಂದರೆ ಮೇಧಾವಿ ಎಂದರ್ಥ. ದಕ್ಷಿಣ ಮೂರ್ತಿ ಎಂದರೆ ದಕ್ಷಿಣಕ್ಕೆ ಮುಖ ಮಾಡಿಕೊಂಡಿರುವ ದೇವರು ಎಂದರ್ಥ. ದಕ್ಷಿಣ ಎಂದರೆ ಪರಿಣಿತಿ ಎಂಬ ಅರ್ಥವೂ ಕೂಡ ಇದೆ. ದೇವರನ್ನ ಪೂಜಿಸುವುದರಿಂದ ನಿಮಗೆ ಖಂಡಿತವಾಗಲೂ ವಿದ್ಯೆ ಒಲಿಯುತ್ತದೆ. ದೇಶದಲ್ಲಿ ಹಲವಾರು ಕಡೆ ದಕ್ಷಿಣಾಮೂರ್ತಿ ದೇವಾಲಯಗಳಿವೆ. ಹೈದ್ರಾಬಾದ್ನಲ್ಲಿಯೂ ಕೂಡ ಒಂದು ದಕ್ಷಿಣಾ ಮೂರ್ತಿ ದೇವಾಲಯವಿದೆ.. ವಿದ್ಯೆಗೆ ತಲೆಗೆ ಹತ್ತದಿರುವುದು, ವಿದ್ಯಾಭ್ಯಾಸದ ಬಗ್ಗೆ ಲಕ್ಷ್ಯ ಕಡಿಮೆ ಆಗುವುದು ಇಂತಹ ಸಮಸ್ಯೆಗಳಿಗೆ ದಕ್ಷಿಣಾಮೂರ್ತಿಯ ದರ್ಶನವೇ ಪರಿಹಾರ ಎನ್ನುತ್ತವೆ ಶಾಸ್ತ್ರಗಳು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.