ನೀವು ಪಿತ್ರಾರ್ಜಿತ ಆಸ್ತಿಯನ್ನ ಖರೀದಿಸುವ ಮೊದಲು ಗಮನಿಸಬೇಕಾದ ಅಂಶಗಳು. ನೋಡಿ ಸ್ನೇಹಿತರೇ ಆಸ್ತಿಯನ್ನ ಖರೀದಿಸಬೇಕೆಂಬ ಹಂಬಲ ಎಲ್ಲರಲ್ಲೂ ಸಹ ಇರುತ್ತದೆ. ನಾವು ಬೇರೆಯವರಿಂದ ಆಸ್ತಿಯನ್ನು ಖರೀದಿಸುವಾಗ ತುಂಬಾ ಹುಷಾರಾಗಿ ಇರುವುದು ಅವಶ್ಯಕ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ತುಂಬಾ ಮೋಸ ನಡೆಯುತ್ತಿದೆ ಆದ್ದರಿಂದ ಬಹಳ ಯೋಚಿಸಿ ಆಸ್ತಿಯನ್ನು ಖರೀದಿ ಮಾಡುವುದು ಉತ್ತಮ ಅಂತ ನಾವು ಹೇಳುತ್ತೇವೆ. ಹಾಗಾದ್ರೆ ಆಸ್ತಿಯನ್ನು ಖರೀದಿಸುವಾಗ ಏನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವದನ್ನ ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಈ ಆಸ್ತಿಯಲ್ಲಿ ಎರಡು ಬಗೆಗಳಿವೆ ಒಂದು ಪಿತ್ರಾರ್ಜಿತ ಆಸ್ತಿ ಸ್ವಯಾರ್ಜಿತ ಆಸ್ತಿ ಅಂತ. ಪಿತ್ರಾರ್ಜಿತ ಆಸ್ತಿ ಎಂದರೆ ತಲೆತಲಾ ತಲೆಮಾರುಗಳಿಂದ ಮುಂದಿನ ತಲೆಮಾರುಗಳವರೆಗೂ ಹೀಗೆ ದಾಟಿಸುತ್ತಾ ಹೋಗುವಂತಹ ಒಂದು ಕ್ರಮ ಪದ್ಧತಿ. ಸ್ವಯಾರ್ಚಿತ ಆಸ್ತಿ ಅಂತಂದರೆ ಸ್ವತಹ ನಾವೇ ತಯಾರು ಮಾಡಿರೋದು, ಯಾರಿಂದಲೂ ನಾವು ತೆಗೆದುಕೊಂಡಿದ್ದೆಲ್ಲ ಸ್ವಂತ ನಾವು ದುಡಿದು ತಗೊಂಡು ಇರುವಂತಹ. ಅಂತ ಆಸ್ತಿ.
ಆಸ್ತಿಯನ್ನ ನೀವು ಕೊಳ್ಳುವಾಗ ಆಸ್ತಿ ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ ಎಂಬುದನ್ನ ತಿಳಿದುಕೊಳ್ಳಬೇಕು. ಹಾಗೂ ಮೂಲ ಮಾಲಿಕತ್ವದ ಬಗ್ಗೆ ನೀವು ತಿಳಿದುಕೊಳ್ಳಬೇಕಾಗುತ್ತದೆ. ಆಸ್ತಿ ಒಬ್ಬನು ಮಾರಾಟ ಮಾಡ್ತಾ ಇರ್ತಾನೆ ಅಂತ ಅಂದ್ರೆ ಅವನಿಗೆ ಆಸ್ತಿ ಹೇಗೆ ಬಂದಿದೆ ಒಂದು ಸ್ವಯಾರ್ಜಿತ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿಯೋ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಮಾಲೀಕರು ಬರಿಸಿರುವಂತಹ ತೆರಿಗೆಯ ಮಾಹಿತಿಯನ್ನ ನೀವು ನೋಡಬೇಕು. ಮೊದಲು ಆಸ್ತಿ ಹೇಗೆ ಸಿಕ್ಕಿತು ಅವರತ್ರ ಅಂತ ನೀವು ಮೊದಲು ರಾತ್ರಿ ಮಾಡಿಕೊಳ್ಳಬೇಕು.
ಇನ್ನೂ ಒಂದು ವೇಳೆ ಮಾಲೀಕರದ್ದು ಪಿತ್ರಾರ್ಜಿತ ಆಸ್ತಿ ಆದರೆ ಅವರಿಗೆ ಪಿತ್ರಾರ್ಜಿತ ಆಸ್ತಿ ದೊರಕಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಮಾರಾಟಗಾರರಿಗೆ ಇದರ ಬಗ್ಗೆ ಕಾನೂನು ಯುತವಾಗಿ ಹಕ್ಕು ಇದೆಯಾ ಅಂತ ತಿಳಿದುಕೊಳ್ಳಬೇಕು. ಮಾರಾಟಗಾರರಿಗೆ ಆಸ್ತಿಯುವಿಲ್ ಮೂಲಕ ಬಂದಲ್ಲಿ ಅದು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ತಿಳಿದುಕೊಳ್ಳಿ. ವ್ಯವಹಾರವು ಸುರಕ್ಷಿತವಾಗಿ ಆಗಬೇಕೆಂದರೆ ಸಂಬಂಧಪಟ್ಟ ಎಲ್ಲಾ ಉತ್ತರಾಧಿಕಾರಿಗಳನ್ನು ಸಾಕ್ಷಿಯಾಗಿ ಇಟ್ಟುಕೊಳ್ಳಬೇಕು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.