ಈ ಮಾಹಿತಿನ ತಿಳ್ಕೋಬೇಕು ಅಂತ ಹೇಳಿದ್ರೆ ಕೊನೆ ತನಕ ನೋಡಿ ಈರುಳ್ಳಿ ನಮ್ಮೆಲ್ಲರ ಅಡುಗೆ ಮನೆಯಲ್ಲಿ ಇರುವಂತದ್ದಲ್ಲ. ಪ್ರತಿನಿತ್ಯ ನಾವು ಒಂದಲ್ಲ ಒಂದು ರೀತಿಯಲ್ಲಿ ಅದನ್ನ ಬಳಸ್ತೀವಿ. ಹಸಿಯಾಗಿ ಬಳಸ್ತೀವಿ ಇನ್ನು ಬೇಯಿಸಿ ಕೂಡ ಕೆಲವೊಂದರಲ್ಲಿ ಬಳಸ್ತೀವಿ. ಅಡುಗೆಗೆ ರುಚಿ ಕೊಡುವುದು ಅಷ್ಟೇ ಅಲ್ಲದೆ ನಮ್ಮ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ಈರುಳ್ಳಿ ಇದರಲ್ಲಿ ನಮಗೆ ಅನೇಕ ರೀತಿಯ ಪೋಷಕಾಂಶಗಳು ಸಿಗುತ್ತವೆ.ವಿಟಾಮಿನ್‌ಗಳ ಸಿಗುತ್ತವೆ ಮುಖ್ಯವಾಗಿ ಸೋಡಿಯಮ್ ಪೊಟ್ಯಾಸಿಯಮ್ ಹಾಗೆ ಕ್ಯಾಲ್ಶಿಯಮ್ ಇನ್ನು ವಿಟಾಮಿನ್ ಎ ಸಿ ಎಲ್ಲವೂ ಕೂಡ ನಮಗೆ ಹೇರಳವಾಗಿ ಸಿಗುತ್ತವೆ. ಈರುಳ್ಳಿಯಲ್ಲಿ ಹಸಿ ಈರುಳ್ಳಿ ಯನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಏನೇನು ಪರಿಣಾಮ ಬೀರುತ್ತೆ ಅನ್ನೋದನ್ನ ಹೇಳ್ತಾ ಇದ್ದೀನಿ. ಮೊದಲನೆಯದಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವುದಕ್ಕೆ ತುಂಬಾನೇ ಸಹಾಯ ಆಗುತ್ತೆ.
ಇದು ಪದೇ ಪದೇ ಇನ್ ಫೆಕ್ಷನ್ ಎಲ್ಲ ಏನಾದರು ಆಗ್ಬಾರ್ದು ಅಂತ ಆದ್ರೆ ಕೂಡ ನಮ್ಮ ದೇಹದಲ್ಲಿ ಇಮ್ಯುನಿಟಿ ಸಾಕಷ್ಟು ಇರ ಬೇಕಾಗುತ್ತೆ. ಹಸಿ ಈರುಳ್ಳಿಯನ್ನು ಬಳಸುವುದರಿಂದ ನಮ್ಮ ಇಮ್ಯುನಿಟಿ ಕೂಡ ಜಾಸ್ತಿ ಆಗುತ್ತೆ. ಇನ್ನು ನಮ್ಮ ಹೃದಯದ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ಅಂತ ಹೇಳಬಹುದು. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವಂತಹ ಶಕ್ತಿ ಈ ಹಸಿ ಈರುಳ್ಳಿಗಿದೆ ಹಾಗೇ ರಕ್ತವನ್ನು ಶುದ್ದತೆ ಮಾಡುವುದಕ್ಕೆ ಕೂಡ ಸಹಾಯ ಮಾಡುತ್ತಿದ್ದು, ಇದರಿಂದಾಗಿ ನಮ್ಮ ಹೃದಯ ಆರೋಗ್ಯವಂತವಾಗಿ ಇರುತ್ತೆ. ಇನ್ನೊಂದು ಮುಖ್ಯವಾದ ಬೆನಿಫಿಟ್ ಅಂತ ಹೇಳಿದ್ರೆ ನಮ್ಮ ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ಇರುವಂತಹ ವಿಟಮಿನ್ ಎ ಸಿ ಹಾಗೆನೇ ಎಲ್ಲವೂ ಕೂಡ ನಮ್ಮ ಕೂದಲು ಮತ್ತು ಚರ್ಮಕ್ಕೆ ತುಂಬಾನೇ ಅಗತ್ಯವಾಗಿ ಬೇಕಾಗಿರುತ್ತದೆ.
ಚರ್ಮದಲ್ಲಿ ಸುಕ್ಕು ನೆರಿಗೆಲ್ಲ ಆಗ್ಬಾರ್ದು ಅಂತ ಅಂದ್ರೆ ಹಾಗೇನೇ ಪಿಗ್ಮೆಂಟೇಷನ್ ಅಂದರೆ ಕಪ್ಪು ಕಲೆಗಳಲ್ಲ. ತುಂಬಾ ಆಗ್ತಾ ಇದ್ರೆ ಅವಾಗ ನಾವು ಹಸಿ ಈರುಳ್ಳಿಯನ್ನು ಸೇವಿಸಬಹುದು. ಇನ್ನು ಡಯಾಬಿಟಿಕ್ ಪೇಶೆಂಟ್ ಬಂತು ತುಂಬಾನೇ ಒಳ್ಳೇದು ಅಂತಾನೇ ಹೇಳಬಹುದು. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದುಕ್ಕೆ ಹಸಿ ಈರುಳ್ಳಿ ಸಹಾಯ ಆಗುತ್ತೆ ಅದೇ ರೀತಿಯಲ್ಲಿ ಗ್ಯಾಸ್ಟ್ರಿಕ್ ಅಸಿಡಿಟಿ ಹೊಟ್ಟೆ ಉಬ್ಬರ ಸಮಸ್ಯೆಯಿಂದ ದೂರ ಇಡುವುದರಲ್ಲಿ ಕೂಡ ಸಹ ಸಹಾಯ ಮಾಡುತ್ತೆ. ಹಾಗೇನೇ ಇದರಲ್ಲಿ ಇರುವಂತಹ ಫೈಬರ್ ಕಂಟೆಂಟ್ ಅಥವಾ ನಾರಿನಂಶ ಮಲಬದ್ಧತೆ ಆಗದೆ ಇರೋ ತರ ನೋಡಿಕೊಳ್ಳೋದುಕ್ಕೆ ಸಹಾಯ ಮಾಡುತ್ತೆ. ಇನ್ನು ನಮ್ಮ ಮೂಳೆಗಳ ಆರೋಗ್ಯ ಕ್ಕೂ ತುಂಬಾ ನೇ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ ನಮಗೆ ಹೇರಳವಾಗಿ ಸಿಗೋದ್ರಿಂದ ಮೂಳೆಗಳು ಸ್ಟ್ರಾಂಗ್ ಆಗಿ ಇರೋದಕ್ಕೆ ಸಹಾಯ ಆಗುತ್ತೆ. ಇನ್ನು ನನಗೆ ಹಲ್ಲು ನೋವಿನ ಸಮಸ್ಯೆಯೇ ಕೆಲವೊಂದು ಸರಿ ಇರುತ್ತೆ ಅಲ್ವಾ ಹೊಸಡದಿಂದಲ್ಲ ರಕ್ತ ಬರ್ತಾ ಇರುತ್ತೆ ಆ ತರ ಆದಾಗ ಕೂಡ ನಾವು ಹಸಿ ಈರುಳ್ಳಿಯನ್ನು ತಿನ್ನ ಬಹುದು ಅಥವಾ ಹಸಿ ಈರುಳ್ಳಿಯ ಪೇಸ್ಟ್ ಮಾಡಿ ಕೂಡ ಹಚ್ಚಿಕೊಳ್ಳಬಹುದು.